UK Suddi
The news is by your side.

ಕಳೆದುಕೊಂಡ ಮೇಲೆ ಅರ್ಥವಾದರೇನು ಫಲ

ಮನಸು ಭಾರವಾಗಿ ತಡೆಯಲಾರದ ದುಃಖವ ಬಿಗಿದಿಟ್ಟು ಕೊಂಡಿದ್ದ ಕಾವ್ಯ …..

ನೋವಿನ ಭಾರವನ್ನು ಕೊನೆಗೂ ತಡೆಯಲು ಆಗಲೇ ಇಲ್ಲಾ . ಜೋರಾಗಿ ಕೂಗಾಡಿ ಅತ್ತು ಕರೆಯಲು ಸುತ್ತಮುತ್ತಲು ಸುಳಿದಾಡುತ್ತಿದ್ದ ಜನ ಎಲ್ಲಿ ನನ್ನ ಕಣ್ಣುಗಳ ನೋವಿನ ಹನಿಗಳಿಗೆ ಸಾಕ್ಷಿ ಆಗಿಬಿಟ್ಟರೆ!! ಎಂಬ ಸ್ವಾಭಿಮಾನಿ ಕಾವ್ಯ ತನ್ನೆಲ್ಲಾ ನೋವನ್ನು ತನ್ನ ಎದೆಯಲ್ಲಿ ಬಚ್ಚಿಟ್ಟುಕೊಂಡು ತನ್ನ ಸಹೋದ್ಯೋಗಿಗಳ ಮುಂದೆ ಜೋರಾಗಿ ನಗುತ್ತಾ ತನಗೇನು ನೋವಿಲ್ಲ ವೆಂಬ ಸೋಗಿನಲ್ಲಿ ದಿನ ಕಳೆಯುತ್ತಿದ್ದಳು …. ಆದರೆ ರಾತ್ರಿ ಆದರೆ ಸಾಕು ಭಯ ದುಃಖ ನೋವು ಅವಳನ್ನು ಚಿಂತಿಸಿ ಚಿತೆಯ ಸೇರು ನೀ ಬೇಗ ಎಂಬಂತೆ ತನ್ನ ಒಂಟಿ ತನದ ನೋವನ್ನ ಸಮುದ್ರದ ಅಲೆಗಳು ಅಪ್ಪಳಿಸಿದಂತೆ ರಭಸದಿ ಅಪ್ಪಳಿಸಿ ತನ್ನ ಮೊಗವೆಲ್ಲಾ ನೆನೆಯುವಂತೆ ಮಾಡುತಿತ್ತು.. ಎಲ್ಲರಿಗಾಗಿ ಹೋರಾಡುತಿದ್ದ ಜೀವಕ್ಕೆ ತನ್ನ ಎಲ್ಲಾ ಜವಾಬ್ದಾರಿ ಮುಗಿದಿತ್ತು ಎಂಬಂತೆ ತನ್ನವರೆಲ್ಲ ದುರಾಗಿದ್ದರು ….!! ಅಪ್ಪನಾಗಲಿ ಗಂಡನಾಗಲಿ ಮಗನಾಗಲಿ … ಹಣಕ್ಕಾಗಿ ಬಂದ        ಸಂಬಂಧಗಳೊರೆತಾಗಿ ಅವಳಿಗೆ  ನಿಜವಾದ ಸಂಬಂಧಗಳ ಸ್ಥಾನವ ತುಂಬಲಿಲ್ಲಾ …!!

ಪ್ರೀತಿ ಇಂದ ತನ್ನವರಿಗಾಗಿ ಎಷ್ಟೇ ನೊಂದು ಬೆಂದು ತನ್ನ ಆಸೆಗಳನ್ನು ಕೊಂದೂ  ಬದುಕಿದರು …. ಅವಳನ್ನು ಒಂದು ದಿನವಾದರೂ ಪ್ರೀತಿ ಇಂದ ನೋಡದ ಹಣದ ನಂಟಿನ ಸಂಬಂದಿಕರು ಅವಳ ಇಷ್ಟ ಕಷ್ಟ ಕೇಳಲಿಲ್ಲ …ಅವರಿಂದ ದೂರಾಗಿ ಒಂಟಿಯಾಗಿ ಬಾಳುತಿದ್ದ ಅವಳನ್ನು ಹಣಬೇಕಾದಾಗ ಮಾತ್ರ ನೆನಪಿಸುಕೊಳ್ಳುತಿದ್ದ ಸಂಬಂಧಗಳು ಹಣಕ್ಕಾಗಿ ,ತಮ್ಮ ಕಷ್ಟಗಳಿಗಾಗಿ ಮಾತ್ರ ಕಾವ್ಯ ಳನ್ನು ಒಂದು (ATM)ನಿರ್ಜೀವವಾದ ವಸ್ತುವಿನ ಹಾಗೆ ನೋಡುತಿದ್ದರು ….ಹತ್ತಿರ ವಿದ್ದರೂ ದೂರವಿದ್ದರು ಹಣದ ವ್ಯಾಮೋಹದ ಜನರಿಗೆ ಪ್ರೀತಿಯ ವ್ಯಾಮೋಹದ ಕಾವ್ಯ ಅರ್ಥವಾಗಲೇ ಇಲ್ಲಾ….. 

ಅಪ್ಪನ ವಾತ್ಸಲ್ಯ ,ಗಂಡನ ಆಸರೆ ,ಮಗನ  ಪ್ರೀತಿಯ ಬಯಸಿದ ಕಾವ್ಯ ಪಡೆದುಕೊಂಡದ್ದು ಮಾತ್ರ ನೋವು!!

ಕೊನೆಗೆ ಅವಳು ದಿನವೂಕೇಳಿಕೊಳ್ಳುತಿದ್ದಳು ದೇವರಲ್ಲಿ ಪ್ರೀತಿ ಇಲ್ಲದ ನನಗೆ ಬದುಕಲು ಆಗುತ್ತಿಲ್ಲ ಕೊಡುನೀನು ನನಗೆ ಸಾವನ್ನು ನಿನ್ನ  ತುಂಬು ಪ್ರೀತಿಯಿಂದಾದರೂ ಎಂದು ದಿನರಾತ್ರಿ ಬೇಡಿಕೊಳ್ಳುತಿದ್ದಳು!! 

ಎಷ್ಟೋ ಹೆಣ್ಣು ಮಕ್ಕಳು ನೋವಿನಲ್ಲೂ ನಗುತ್ತಾ ಎಲ್ಲರಿಗಾಗಿ ದುಡಿದು ಸಂಸಾರವ ನೆಡೆಸುತ್ತಿದ್ದಾರೆ ..   ನಿಮಗೆಂದೇ ಬಾಳಿದವರಿಗೆ ನಿಮಗೆಂದೇ ದುಡಿಯುತಿರುವವರಿಗೆ ನೀವು ಕೊಡುವ ಪ್ರೀತಿ ನೀವು ಕೊಡುವ ವಿಶ್ವಾಸ ಅವರಜೊತೆ ನಿಮ್ಮನ್ನು ಬಲು ಎತ್ತರಕ್ಕೆ ಕೊಂಡೊಯುವುದು …..ಸ್ವಲ್ಪ ಪ್ರೀತಿ ಎಂಬ ವಿಶ್ವಾಸವ ಅವಳಿಗೆ  ಸಂಬಂಧಗಳು  ಕೊಟ್ಟರೆ ಅವರ ತ್ಯಾಗದ ಬದುಕಿಗೂ ಅರ್ಥವಿದ್ದಂತೆ ….ಕಳೆದುಕೊಂಡಮೇಲೆ ಅರ್ಥವಾದರೇನು  ಫಲ! 

ಹೆಣ್ಣಿನಿಂದ ಎಲ್ಲವನ್ನು ಬಯಸುವ ಸಂಬಂದಿಕರು ಎಲ್ಲವನ್ನು ಕೊಡದಿದ್ದರೂ ಪ್ರೀತಿಯ ಆಸರೆಯಾಗಿಯಾದರು ಗೌರವಿಸಿ ಹೆಣ್ಣನ್ನು …!! ಇಲ್ಲವಾದರೆ ಚುಚ್ಚಿಕೊಂಡಂತೆ ನೀವೇ ನಿಮ್ಮ ಕಣ್ಣನ್ನು !

.
.

(ಬರವಣಿಗೆ )

ಇವಾ ಲೇಖಾ

ನಿಮ್ಮ ಅನಿಸಿಕೆಯನ್ನು ಈ ಕೆಳಕಂಡ ಮೆಲ್ ಐ ಡಿ ಗೆ ಕಳುಹಿಸಿ ??

ivaalekha7717@gmail.com

ವಾಟ್ಸ್ ಆಪ್ No: 9741329365

Comments