UK Suddi
The news is by your side.

ಉಡುಪಿಯ ಧರ್ಮ ಸಂಸತ್‌ನಲ್ಲಿ ತೆಗೆದುಕೊಂಡ ಹತ್ತು ನಿರ್ಣಯಗಳು ಯಾವ ಗೊತ್ತಾ ನಿಮಗೆ..?


ಧರ್ಮ ಸಂಸತ್‌ನಲ್ಲಿ ತೆಗೆದುಕೊಂಡ ಹತ್ತು ನಿರ್ಣಯಗಳು
* ಹಿಂದೂ ಧರ್ಮದಲ್ಲಿ ಆರಂಭದಲ್ಲಿ ಅಸ್ಪೃಶ್ಯತೆ ಇರಲಿಲ್ಲ. ಹತ್ತನೇ ಶತಮಾನದಲ್ಲಿ ಪೃಥ್ವಿರಾಜ್ ಮತ್ತು ಘೋರಿ ನಡುವಣ ಯುದ್ಧದ ಬಳಿಕ ಮುಸ್ಲಿಮರು ಹಿಂದೂ ಧರ್ಮದ ಮೇಲೆ ಅಸ್ಪೃಶ್ಯತೆ ಹೇರಿದರು. ಅದು ಹಿಂದೂ ಧರ್ಮದ ಒಗ್ಗಟ್ಟಿಗೆ, ಏಕತೆಗೆ ತೊಡಕಾಗಿದೆ.

* ಭಗವಂತನ ದೃಷ್ಟಿಯಲ್ಲಿ ಎಲ್ಲರೂ ಶ್ರೇಷ್ಠ. ಶ್ರೇಷ್ಠತೆ ಮತ್ತು ಜ್ಯೇಷ್ಠತೆ ಜಾತಿಯಿಂದ ಬರುವುದಿಲ್ಲ, ಭಕ್ತಿಯಿಂದ ಬರುತ್ತದೆ.

* ಅಸ್ಪೃಶ್ಯತೆ ನಿವಾರಣೆಗಾಗಿ ದೇವಾಲಯಗಳಲ್ಲಿ ಹಿಂದೂ ಧರ್ಮದ ಎಲ್ಲರಿಗೂ ಪ್ರವೇಶ ನೀಡಬೇಕು.

* ಹಿಂದೂಗಳ ಮನೆಗಳಲ್ಲಿ ಎಲ್ಲರಿಗೂ ಪ್ರವೇಶ ನೀಡಬೇಕು.

* ಹಿಂದೂ ಧರ್ಮದ ಎಲ್ಲ ಜಾತಿಯ ಜನರಿಗೂ ಒಂದೇ ಸ್ಮಶಾನ ಇರಬೇಕು. ಜಾತಿಗೊಂದು ಸ್ಮಶಾನ ಬೇಡ.

* ಭಾರತದ ನೆಲದಲ್ಲಿ ಹುಟ್ಟಿದ ಧಾರ್ಮಿಕ ಮುಖಂಡರಿಂದ ಪ್ರವರ್ತಿತವಾದ ಎಲ್ಲ ಧರ್ಮಗಳೂ ಹಿಂದೂ ಧರ್ಮದ ಭಾಗ. ವಿದೇಶಗಳಿಂದ ಬಂದವು ಮಾತ್ರ ಹಿಂದೂಯೇತರ ಧರ್ಮಗಳು.

* ಪರಿಶಿಷ್ಟ ಜಾತಿಯ ಜನರನ್ನು ಮೇಲು ವರ್ಗದ ಜನರು ದತ್ತು ಪಡೆದು ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.

* ಧಾರ್ಮಿಕ ವಿಧಿ ವಿಧಾನಗಳಲ್ಲಿ ಎಲ್ಲ ಜಾತಿಯ ಜನರಿಗೂ ಅವಕಾಶ ನೀಡಬೇಕು.

* ಸಂತರು, ಮಠಾಧೀಶರು, ಧಾರ್ಮಿಕ ನಾಯಕರು ಪರಿಶಿಷ್ಟ ಜಾತಿ ಜನರು ವಾಸಿಸುವ ಪ್ರದೇಶದಲ್ಲಿ ಸಂಚಾರ ಮಾಡಬೇಕು.

* ಪ್ರಲೋಭನೆ, ಆಮಿಷಗಳಿಗೆ ಒಳಗಾಗಿ ಮತಾಂತರ ಹೊಂದಿರುವ ಹಿಂದೂಗಳನ್ನು ಮರಳಿ ಕರೆತರಲು ಘರ್ ವಾಪಸಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.

Comments