UK Suddi
The news is by your side.

ಬಾಗಲಕೋಟೆಯಲ್ಲಿ ಯಡಿಯೂರಪ್ಪನವರ ಪರಿವರ್ತನಾ ಯಾತ್ರೆ.

ಬಾಗಲಕೋಟ:ಪರಿವರ್ತನಾ ಯಾತ್ರೆಯ 19ನೆಯ ದಿನದ ಅಂತಿಮ ಚರಣದಲ್ಲಿ ಬಾಗಲಕೋಟೆಯ ಬಿ ವಿ ಎಸ್ ಕಾಲೇಜ್ ಆವರಣದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಸಾರ್ವಜನಿಕ ಸಮಾವೇಶ ನಡೆಸಿದರು. 

ಕತ್ತಲಿನಲ್ಲಿ ನಡುಗುವ ಚಳಿಯನ್ನೂ ಲೆಕ್ಕಿಸದೆ ಬಾಗಲಕೋಟೆಯ ಜನತೆ ಯಡಿಯೂರಪ್ಪನವರ ಭಾಷಣವನ್ನು ಆಲಿಸಿದರು. ಬಾಗಲಕೋಟೆಯ ನೀರಾವರಿ ಸಮಸ್ಯೆಗಳಿಗೆ ತಾವು ಅಧಿಕಾರದಲ್ಲಿದ್ದಾಗ ಕೈಗೊಂಡ ಕ್ರಮಗಳನ್ನು ಒಮ್ಮೆ ಮೆಲುಕು ಹಾಕಿದ ಅವರು ಮತ್ತೆ ಅಧಿಕಾರಕ್ಕೆ ಬಂದರೆ ಕಳೆದ 5 ವರ್ಷಗಳಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳೆಲ್ಲವನ್ನು ಪುನಃಚೇತನಗೊಳಿಸುವುದಾಗಿ ಭರವಸೆ ನೀಡಿದರು.

ಮುಖಂಡರಾದ ಅನಂತ್ ಕುಮಾರ್, ಅನಂತ್ ಕುಮಾರ್ ಹೆಗಡೆ, ಮುರುಗೇಶ್ ನಿರಾಣಿ, ಗೋವಿಂದ್ ಕಾರಜೋಳ, ಅರವಿಂದ್ ಲಿಂಬಾವಳಿ, ಗದ್ದಿ ಗೌಡರ್, ಕೆ.ಪಿ. ನಂಜುಂಡಿ ಮುಂತಾದವರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಬಾಗಲಕೋಟೆಯಲ್ಲಿ ಪರಿವರ್ತನಾ ಯಾತ್ರೆ ಉದ್ದೇಶಿಸಿ ಬಿ.ಎಸ್.ಯಡಿಯೂರಪ್ಪನವರ ಭಾಷಣದ ಪ್ರಮುಖಾಂಶ:

• ಹಿ0ದಿನ ನಮ್ಮ ಸರ್ಕಾರದ ಅವಧಿಯಲ್ಲಿ ಬಾಗಲಕೋಟೆ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಿದ್ದೆವು

• ನವನಗರ ಯುನಿಟ್ 2ರಲ್ಲಿ ಆಂತರಿಕ ರಸ್ತೆ, ಕುಡಿಯುವ ನೀರು, ಒಳ ಚರಂಡಿ, ವಿದ್ಯುತ್ ಮೂಲಸೌಲಭ್ಯ ಕಲ್ಪಿಸಲು ಜಿಲ್ಲೆಗೆ 550ಕೋಟಿ ಅನುದಾನ.

• ನವ ನಗರ ಮುಖ್ಯರಸ್ತೆಗಳ ನಿರ್ಮಾಣಕ್ಕಾಗಿ 224.88ಕೋಟಿರೂ.; ಕುಡಿಯುವ ನೀರಿನಯೋಜನೆಗಾಗಿ 42.05ಕೋಟಿರೂ.; ಒಳಚರಂಡಿ ವ್ಯವಸ್ಥೆಗೆ 20.05ಕೋಟಿ ಅನುದಾನ ನೀಡಿದ್ದೆವು

• ರಸ್ತೆಗಳಿಗೆ ಬೀದಿ ದೀಪದ ವ್ಯವಸ್ಥೆಗಾಗಿ 10.06ಕೋಟಿರೂ ಅನುದಾನ; ಮಿನಿ ವಿಧಾನ ಸೌಧ, ತಾಲ್ಲೂಕು ಪಂಚಾಯಿತಿ ಕಚೇರಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ನ್ಯಾಯಲಯಗಳ ಸಂಕೀರ್ಣ, ಸಿಬ್ಬಂದಿ ವಸತಿ ಗೃಹ ನಿರ್ಮಾಣಕ್ಕೆ 45.18ಕೋಟಿರೂ ಅನುದಾನ ನೀಡಲಾಗಿತ್ತು..

• ವಾಜಪೇಯಿ ನಗರ ಯೋಜನೆಗಳಲ್ಲಿ 11.07ಕೋಟಿ ವೆಚ್ಚದಲ್ಲಿ 654 ವಸತಿ ನಿರ್ಮಾಣ.

• ಲೋಕ್ ಅದಾಲತ್ ಮುಖಾಂತರ ಸಂತ್ರಸ್ತರಿಗೆ 205ಕೋಟಿ ನೆರವು ವಿತರಣೆ;

• ತೋಟಗಾರಿಕಾ ವಿಶ್ವವಿದ್ಯಾಲಯ ನಿರ್ಮಾಣಕ್ಕೆ 171ಕೋಟಿರೂ ಅನುದಾನ ನೀಡಿದ್ದೆವು

• ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪ್ರೌಢಶಾಲೆಗಳು, ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣಕ್ಕೆ 18.28 ಕೋಟಿರೂ ಅನುದಾನ.

• ಹಿ0ದಿನ ನಮ್ಮ ಶಾಸಕರು (ವೀರಣ್ಣ ಚರ0ತಿಮಠ) ಕ್ಷೇತ್ರದ ಅಭಿವೃದ್ಧಿಗಾಗಿ ಬಹಳ ಕೆಲಸ ಮಾಡಿದ್ದರು. ಅಮಿನಗಢ ಕೆರೆ ಹೂಳೆತ್ತುವ ಕಾರ್ಯ, ನವನಗರದಲ್ಲಿ ರಸ್ತೆಗಳು, ಸಿಕ್ಕೇರಿ ರೈಲ್ವೆ ಕ್ರಾಸಿ0ಗ್ ಮೇಲ್ಸೇತುವೆ ಮೊದಲಾಗಿ ಅನೇಕ ಕೆಲಸಗಳು ನಡೆದಿದ್ದವು.

• ಬ0ಧುಗಳೇ, ಹಿ0ದಿನ ಬಿಜೆಪಿ ಸರ್ಕಾರದ ಭಾಗ್ಯಲಕ್ಷ್ಮೀ, ಬಡಮಕ್ಕಳಿಗೆ ಸೈಕಲ್ ವಿತರಣೆ, ಸ0ಧ್ಯಾ ಸುರಕ್ಷಾ, ಕೃಷಿ ಮಿಶನ್, ವಿಧವಾ ವೇತನ ಮೊದಲಾದ ನಮ್ಮ ಕಾರ್ಯಕ್ರಮಗಳನ್ನು ಇ0ದಿಗೂ ಜನ ನೆನಪಿಸಿಕೊಳ್ಳುತ್ತಾರೆ.

• ಬಡವರನ್ನು, ರೈತರನ್ನು, ಮಹಿಳೆಯರನ್ನು ಕಾ0ಗ್ರೆಸ್ ಸರ್ಕಾರ ನಿರ್ಲಕ್ಷಿಸಿದ್ದರೂ, ಜನಸಾಮಾನ್ಯರಿಗಾಗಿ, ಕೇ0ದ್ರದ ಸರ್ಕಾರ ನೂರಾರು ನೂತನ ಯೋಜನೆಗಳನ್ನು ಜಾರಿಗೆ ತ0ದಿದೆ.

• ಮತ್ತೆ ರಾಜ್ಯ ಪರಿವರ್ತನೆಯಾಗಬೇಕು, ನವಭಾರತದ ಜೊತೆಗೆ ನವಕರ್ನಾಟಕ ಅಭಿವೃದ್ಧಿ ಹೊ0ದಬೇಕು. ಇದಕ್ಕೆ ನಿಮ್ಮ ಆಶೀರ್ವಾದವನ್ನು ಬಯಸಿ ನಿಮ್ಮಲ್ಲಿಗೆ ಬ0ದಿದ್ದೇನೆ.

• ಸ್ವಚ್ಛ, ದಕ್ಷ, ಪ್ರಾಮಾಣಿಕ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು.

• ‘ಕಾ0ಗ್ರೆಸ್ ಮುಕ್ತ ಕರ್ನಾಟಕ’ಕ್ಕಾಗಿ ಈ ಪರಿವರ್ತನಾ ಯಾತ್ರೆಯ ಜನಾ0ದೋಲನ ಹೊರಟಿದೆ.

Comments