UK Suddi
The news is by your side.

ಮೊಟ್ಟೆ ಸಸ್ಯಾಹಾರವೋ, ಮಾಂಸಾಹಾರವೋ? ವಿಜ್ಞಾನಿಗಳು ಕೊಟ್ಟಿದ್ದಾರೆ ಟ್ವಿಸ್ಟ್

ನವದೆಹಲಿ: ಮೊಟ್ಟೆ ಮೊದಲೋ ಕೋಳಿ ಮೊದಲೋ ಎಂಬ ಪ್ರಶ್ನೆಯಂತೆಯೇ ಮೊಟ್ಟೆಯು ಸಸ್ಯಾಹಾರವೋ ಮಾಂಸಾಹಾರವೋ ಎಂಬ ಪ್ರಶ್ನೆಗೂ ಉತ್ತರ ಕಷ್ಟಸಾಧ್ಯ. ಆದರೆ, ವಿಜ್ಞಾನಿಗಳು ಇದಕ್ಕೆ ಉತ್ತರ ನೀಡಿದ್ದಾರೆ. ಮೊಟ್ಟೆ ಸಸ್ಯಾಹಾರವೇ ಹೊರತು ಮಾಂಸಾಹಾರವಲ್ಲ ಎಂದು ವಿಜ್ಞಾನಿಗಳು ಖಚಿತಪಡಿಸಿದ್ದಾರೆ. ಮೊಟ್ಟೆಯಿಂದ ಮರಿ ಹುಟ್ಟುವಾಗ, ಮೊಟ್ಟೆ ಹೇಗೆ ಸಸ್ಯಾಹಾರವಾಗುತ್ತದೆ? 

ವಿಜ್ಞಾನಿಗಳು ಇದಕ್ಕೆ ಈ ರೀತಿಯ ವಿವರಣೆ ಕೊಡುತ್ತಾರೆ: 

ಮೊಟ್ಟೆಯಲ್ಲಿ ಮೂರು ಭಾಗಗಳಿರುತ್ತವೆ: ಮೊಟ್ಟೆಯ ಕವಚ, ಬಿಳಿಲೋಳೆ ಮತ್ತು ಹಳದಿಲೋಳೆ. ಬಿಳಿಲೋಳೆಯಲ್ಲಿ ಪ್ರೊಟೀನ್ ಮಾತ್ರವಿರುತ್ತದೆ. ಹಳದಿಲೋಳೆಯು ಪ್ರೊಟೀನ್, ಕೊಲೆಸ್ಟರಾಲ್ ಮತ್ತು ಕೊಬ್ಬು ಹೊಂದಿರುತ್ತದೆ. ನಾವು ತಿನ್ನುವ ಮೊಟ್ಟೆಯಲ್ಲಿ ಇನ್ನೂ ಭ್ರೂಣ ಬೆಳೆದಿರುವುದಿಲ್ಲ. ಹೀಗಾಗಿ, ಅದನ್ನು ಮಾಂಸವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ.

Comments