UK Suddi
The news is by your side.

ಪರಿಚಯವಿಲ್ಲದ ಜನರೊಡನೆ ಸ್ನೇಹಬೆಳೆಸುವ ಮುನ್ನ ಸ್ವಲ್ಪ ಹೆಚ್ಚರವಹಿಸಿದರೆ ಚೆನ್ನಾ!!

ಸುನಿಲ ಮಾತಿನಲ್ಲಿ ಚತುರ  ಯಾರನ್ನು ಬೇಕಿದ್ದರೂ ತನ್ನ ಬಲೆಯಲ್ಲಿ ಬೀಳಿಸಿಕೊಂಡು ಅವರ ನಿಸ್ಸಹಾಯಕತೆಯನ್ನೇ ಬಂಡವಾಳವಾಗಿಸಿಕೊಂಡು ಹಣಮಾಡುವ ನಿಸ್ಸಿಮ ….

ಒಂದು ದಿನ ಅವನು ತನ್ನ ಸಹುದ್ಯೋಗಿಯಾದ ಸತ್ಯ ಎನ್ನುವವಳ ಗಂಡನ ಸಾವಿನಲ್ಲಿ ಸತ್ಯಳ ಸ್ನೇಹಿತರ ಪರಿಚಯವಾಯಿತು ….

ಒಂದು ದಿನದ ಪರಿಚಯದಲ್ಲಿ ಅವನು ಎಲ್ಲರನ್ನು ಅಕ್ಕ ಅಮ್ಮ ಎಂದುಕೊಂಡು ಎಲ್ಲರಿಗು ಹತ್ತಿರವಾದ …ಎಲ್ಲರ ಹತ್ತಿರ ಫೋನ್ ನಂಬರ್ ತೆಗೆದುಕೊಂಡಿದ್ದ ಅವನು ದಿನವೂ ಎಲ್ಲರಿಗು ಕರೆಮಾಡತೊಡಗಿದ …..

ಯಾರೊಗು ಅವನ ಮನೆಯವರ ಪರಿಚಯವಿಲ್ಲಾ … ಅವನ ವಿಳಾಸವು ಗೊತ್ತಿಲ್ಲ ಅವನ ವಿನಃ ಅವನಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ …

ಬರ ಬರುತ್ತಾ ಎಲ್ಲರಿಗು ತನ್ನ ಮಾತಿನ ಮೋಡಿ ಇಂದ ಸಭ್ಯನಂತೆ ನಟಿಸತೊಡಗಿದ …. ಎಲ್ಲರ ಬಳಿಯೂ ಒಂದಲ್ಲಾ ಒಂದು ಕತೆ ಹೇಳಿ ಹಣವನ್ನು ಪಡೆದು ಕೊಂಡಿದ್ದ…..ಯಾರೊಬ್ಬರೂ ಯಾರೊಬ್ಬರಿಗೂ ಹೇಳದಂತೆ ವಿಷಯವನ್ನು ಕಾಪಾಡಿಕೊಂಡಿದ್ದ ಎಲ್ಲಿ ಅವನ ವಿಷಯ ಗೊತ್ತಾಗುವುದೋ ಎಂದು ಎಲ್ಲರ ಮಧ್ಯ ಜಗಳವನ್ನು ತಂದಿಟ್ಟಿದ್ದ ….

ಮೊದಲೇ ಮದುವೆ ಆಗಿದ್ದ ಸುನಿಲ ತಾನು ಗೃಹಸ್ಥನೆಂದು ಎಲ್ಲಿಯೂ ತೋರಿಸಿಕೊಂಡಿರಲಿಲ್ಲ …ಕೊನೆಗೆ ಸತ್ಯಳ ಅಕ್ಕನ ಮಗಳನ್ನು ತನ್ನ ಪ್ರೀತಿಯ ಬಲೆಗೆ ಬೀಳಿಸಿಕೊಂಡ …. ಅರಿಯದ ವಯಸ್ಸಿನ ಪಾಪದ ಹುಡುಗಿಗೆ ತಾನು ನಿನ್ನನ್ನು ಬಿಟ್ಟು ಇರಲಾರೆ ನಿನ್ನನ್ನೇ ಮದುವೆ ಆಗುವೆ ಇಲ್ಲವಾದರೆ ಸಾವೇ ನನಗೆ ಎಂದು ಪದೇ ಪದೇ ಆತ್ಮಹತ್ಯೆಯ ಬೆದರಿಕೆ ಹಾಕುತಿದ್ದ ಅವನ ನಾಟಕಕ್ಕೆ ಅವಳ ಬಾಳು ಹಾಳಾಯಿತು …. ಕೊನೆಗೆ ಆ ಹುಡುಗಿಯ ತಂದೆ ಅವನಿಗೆ ನಿಮ್ಮ ತಂದೆ ತಾಯಿಯನ್ನು ಕರೆದುಕೊಂಡು ಬಾ ಮದುವೆ ಮಾಡಿಕೊಡುತ್ತೇವೆ ಎಂದಾಗಲೇ ಅವನ ನಿಜ ಬಣ್ಣದ ಅರಿವಾದದ್ದು…..

ನಮ್ಮ ತಂದೆ ಹಾರ್ಟ್ ಪೆಸೆಂಟ್ ಅವರಿಗೆ ಈ ವಿಷಯತಿಳಿದರೆ ತೊಂದರೆ ಯಾಗುತ್ತದೆ …ನೀವೇ ಮದುವೆ ಮಾಡಿ ಕೊಡಿ ನಾವು ಎಲ್ಲಿಯಾದರೂ ಹೋಗಿ ಜೀವನ ನೆಡೆಸುವೆವು ಎಂದು ಮೊಸಳೆ ಕಣ್ಣೀರಿಟ್ಟ …… ಹಾಗೇನಾದರು ಮಾಡಿದ್ದಾರೆ ಅವನು ಆ ಹುಡುಗಿಯನ್ನು ಮಾರಿ ಹಣಸಂಪಾದಿಸುತಿದ್ದನೋ ಏನೋ !? ಅವನು ಬರಿ ಹೆಂಗಸರನ್ನೇ ತನ್ನ ಗಾಳಕ್ಕೆ ಬೀಳಿಸುಕೊಳ್ಳುತಿದ್ದ ಹೊರೆತು ಗಂಡಸರ ಬಳಿ ಮಾತಾಡಲು ಹೆದರುತ್ತಿದ್ದ.ಹುಡುಗಿಯ ತಂದೆ ಮದುವೆ ಮಾಡಿಕೊಡಲು ನಿರಾಕರಿಸಿದ/

ಅದಾದ ನಂತರ ಸುನಿಲ ಎಲ್ಲಿ ಹೋದನು ತಿಳಿಯಲೇ ಇಲ್ಲಾ ….

ನೊಂದ ಹುಡುಗಿ ದಿನವೂ ನೋವಿನಿಂದ ನರಳಿದರೆ …. ಕಷ್ಟಪಟ್ಟು ಕೂಡಿಟ್ಟ ಹಣ ಕೊಟ್ಟ ಸತ್ಯಳ ಸ್ನೇಹಿತರು ಒಬ್ಬರಿಗೊಬ್ಬರು ವಿಷಯವ ಹೇಳದೆ ಅವನ  ಚಾಡಿ ಮಾತುಗಳಿಂದ ಜಗಳವಾಡಿಕೊಂಡು ದೂರಾಗಿದ್ದರು….ಆಗಲೇ ತಿಳಿದದ್ದು ಅವನು ಎಲ್ಲರನ್ನು ತನ್ನ ಕಾಮದೃಷ್ಟಿ ಇಂದ ನೋಡುತಿದ್ದನೆಂದು … ಎಲ್ಲರ ಮುಂದಷ್ಟೇ ಅಕ್ಕ  ಅಮ್ಮ ತಂಗಿ ಎಂಬಂತೆ ನಾಟಕವಾಡುತಿದ್ದನೆಂದು … ಎಲ್ಲರು ದುಡ್ಡು ಹೋದರು ಪರವಾಗಿಲ್ಲ ಇಂಥವನಿಂದ ದೂರಇರಬೇಕೆಂದು ಒಬ್ಬರಿಗೊಬ್ಬರು ಹೇಳಿಕೊಳ್ಳಲಾಗದೆ ತಮ್ಮ ತಪ್ಪಿಗೆ ತಾವೇ ಶಪಿಸಿಕೊಳ್ಳತೊಡಗಿದ್ದರು.
 ಪರಿಚಯವಿಲ್ಲದ ಜನರೊಡನೆ ಸ್ನೇಹಬೆಳೆಸುವ ಮುನ್ನ ಸ್ವಲ್ಪ ಹೆಚ್ಚರವಹಿಸಿದರೆ ಚೆನ್ನಾ!!

.

.

(ಬರವಣಿಗೆ )

ಇವಾ ಲೇಖಾ

ನಿಮ್ಮ ಅನಿಸಿಕೆಯನ್ನು ಈ ಕೆಳಕಂಡ ಮೆಲ್ ಐ ಡಿ ಗೆ ಕಳುಹಿಸಿ ??

ivaalekha7717@gmail.com

ವಾಟ್ಸ್ ಆಪ್ no: 9741329365

Comments