UK Suddi
The news is by your side.

‘ಲೈಟಾಗಿ ಲವ್ವಾಗಿದೆ’ ಚಲನಚಿತ್ರದ ಮುಹೂರ್ತ.

ಗೋಕಾಕ: ಪ್ರಜ್ವಲ ಸಿನಿ ಕ್ರಿಯೇಷನ್ಸ್‌ ಲಾಂಛನದಡಿ ಗುರುನಾಥ ಗದಾಡಿ ನಿರ್ಮಾಣದ ‘ಲೈಟಾಗಿ ಲವ್ವಾಗಿದೆ’ ಚಲನಚಿತ್ರದ ಮುಹೂರ್ತ ಸಮಾರಂಭ ನಗರದ ಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಗುರುವಾರದಂದು ಜರುಗಿತು. ಸರಿಗಮಪ ಖ್ಯಾತಿಯ ಚನ್ನಪ್ಪ ಹುದ್ದಾರ ನಾಯಕತ್ವದ ಚಿತ್ರಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕ್ಲ್ಯಾಪ್‌ ತೋರಿಸಿ ಚಾಲನೆ ನೀಡಿದರು. ಕುಂದರಗಿ ಅಡವಿಸಿದ್ಧೇಶ್ವರ ಮಠದ ಅಮರಸಿದ್ಧೇಶ್ವರ ಸ್ವಾಮಿಗಳು ಕ್ಯಾಮರಾ ಆನ್‌ ಮಾಡಿದರು. ಗೋಕಾಕ ತಾಲೂಕಿನ ತುಕ್ಕಾನಟ್ಟಿ ಗ್ರಾಮದ ಗುರುನಾಥ ಗದಾಡಿ ಕಥೆ-ಚಿತ್ರಕಥೆ-ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಈ ಚಿತ್ರದಲ್ಲಿ ಚೈತ್ರಾ ಶೆಟ್ಟಿ, ಅನ್ವಿತಾ ನಯ್ಯರ, ಶ್ವೇತಾ ಧಾರವಾಡ, ಸಂಜು ಬಸಯ್ಯ, ಸೋಮಶೇಖರ ಜಾಡರ, ಜ್ಯೋತಿ ಮುರೂರ ಮುಂತಾದವರು ಅಭಿನಯಿಸುತ್ತಿದ್ದಾರೆ. ಗೋಕಾಕ, ಸಂಕೇಶ್ವರ, ಕೊಪ್ಪಳ, ಬಾಗಲಕೋಟ ಮೊದಲಾದೆಡೆ ಚಿತ್ರೀಕರಣ ನಡೆಯಲಿದೆ.

Comments