UK Suddi
The news is by your side.

ವಿರಾಟ್ ಭರ್ಜರಿ ದ್ವಿಶತಕ


ಹೊಸದಿಲ್ಲಿ: ಫಿರೋಜ್‌ ಷಾ ಕೋಟ್ಲಾ ಅಂಗಳದಲ್ಲಿ ಪ್ರವಾಸಿ ಶ್ರೀಲಂಕಾ  ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಸರಣಿಯ ಅಂತಿಮ ಪಂದ್ಯದ ಭಾನುವಾರದ 2 ನೇ ದಿನದಾಟ ಲ್ಲಿ ಭಾರತ ತಂಡದ ಕಪ್ತಾನ ವಿರಾಟ್‌ ಕೊಹ್ಲಿ ಭರ್ಜರಿ  ದ್ವಿಶತಕ ಸಿಡಿಸಿ  ಹೊಸ ದಾಖಲೆಗೆ ಭಾಜನರಾಗಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ 6 ದ್ವಿಶತಕ ಸಿಡಿಸಿದ ಮೊದಲ ನಾಯಕ ಎಂಬ ದಾಖಲೆಗೆ ಕೊಹ್ಲಿ ಭಾಜನರಾಗಿದ್ದಾರೆ. ಬ್ರ್ಯಾನ್‌ ಲಾರಾ ಮತ್ತು ಗ್ರೇಮ್‌ ಸ್ಮಿತ್‌ ಅವರ ತಲಾ 5 ಶತಕಗಳ ದಾಖಲೆಯನ್ನು ಮುರಿದಿದ್ದಾರೆ. 

ಸಚಿನ್‌ ತೆಂಡುಲ್ಕರ್‌ ಮತ್ತು ಸೆಹವಾಗ್‌ ಅವರ 6 ದ್ವಿಶತಕ ಸಿಡಿಸಿದ ದಾಖಲೆಗಳನ್ನು ಸರಿಗಟ್ಟಿದ್ದಾರೆ.

Comments