UK Suddi
The news is by your side.

ವೀರ ಕೇಸರಿ ಅಮಟೂರ ಬಾಳಪ್ಪನವರ 193ನೇ ಪುಣ್ಯ ದಿನೋತ್ಸವ.

ಬೆಳಗಾವಿ:ವೀರ ಕೇಸರಿ ಅಮಟೂರ ಬಾಳಪ್ಪನವರ 193ನೇ ಪುಣ್ಯ ದಿನೋತ್ಸವವನ್ನು ಬೈಲಹೊಂಗಲ ತಾಲೂಕಿನ ಅಮಟೂರ ಗ್ರಾಮದಲ್ಲಿ ಇಂದು ಆಚರಿಸಲಾಯಿತು.

ವೀರ ಕೇಸರಿ ಅಮಟೂರ ಬಾಳಪ್ಪನವರು ಕಿತ್ತೂರ ರಾಣಿ ಚನ್ನಮನ ಬಲಗೈ ಬಂಟರಾಗಿದ್ದರು,ಬಂದೂಕಿನ ಗುರಿಯನ್ನು ಇಡುವದರಲ್ಲಿ ಗುರಿಗಾರ ಪ್ರಸಿದ್ದರಾಗಿದ್ದರು.1824 ಅಕ್ಟೂಬರ 23ರ ಇಂಗ್ಲೀಷ್‌ ರ ವಿರುದ್ದದ ಕಿತ್ತೂರು ಯುದ್ಧದಲ್ಲಿ ಥ್ಯಾಕರೇಯನ್ನು ಗುಂಡಿಟ್ಟು ಕೊಂದರು, 1824ರ ಡಿಸೆಂಬರ್‍ 4 ರ ಕಿತ್ತೂರಿನ ಎರಡನೇಯ ಯುದ್ಧದಲ್ಲಿ ತಾಯಿ ಚನ್ನಮಳಿಗೇ ಗುರಿ ಇದ್ದ ಇಂಗ್ಲೀಷರ ಗುಂಡಿಗೇ ಗುಂಡಿಗೇ ಕೂಟ್ಟು ವೀರ ಮರಣ ಹೊಂದಿದರು. ಪ್ರತಿ ವರ್ಷ ಡಿಸೆಂಬರ್ 4ರಂದು ರಂದು ಅಮಟೂರ ಗ್ರಾಮದಲ್ಲಿ ವೀರ ಕೇಸರಿ ಅಮಟೂರ ಬಾಳಪ್ಪನವರ ಹುತಾತ್ಮ ದಿನಾಚರಣೆಯನ್ನು ಆಚರಿಸುತ್ತಾರೆ.

Comments