UK Suddi
The news is by your side.

ಸಿಮೆಂಟ್​ ಬ್ಯಾಗ್ ನಂತೆಯೇ ಮರಳು ಬ್ಯಾಗ್ ಜನವರಿಯಿಂದ


MSIL ನಿಂದ ಮರಳು ಮಾರಾಟಕ್ಕೆ ಸರ್ಕಾರದ ಚಿಂತನೆ ; ಜನವರಿಯಿಂದಲೇ ದೊರೆಯಲಿದೆ ನೈಸರ್ಗಿಕ ಮರಳು

ಬೆಂಗಳೂರು: ರಾಜ್ಯ ಸರ್ಕಾರ ಮಲೇಷ್ಯಾದಿಂದ ಮರಳು ಆಮದು ಮಾಡಿಕೊಂಡು ಬರುವ ಜನವರಿಯಿಂದಲೇ ನೀಡಲು ಡಿ.1ರಂದು ಪ್ರಕಟಿಸಿದೆ. ಇದರ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ ಎಂಎಸ್​ಐಎಲ್​ ಮರಳು ಹಂಚಿಕೆ ಮಾಡಲು ಸಿದ್ಧತೆ ನಡೆಸಿದೆ.

ಸಿಮೆಂಟ್​ ಬ್ಯಾಗ್ ನಂತೆಯೇ ಮರಳು ಸರಬರಾಜು ಮಾಡಲಾಗುವುದು ಎಂದು ಈ ಹಿಂದೆ ಹೇಳಿದ್ದ ರಾಜ್ಯ ಸರ್ಕಾರ ಅದನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದೆ.

ನದಿಯಿಂದ ತೆಗೆದ ನೈಸರ್ಗಿಕ ಮರಳನ್ನು 50 ಕೆ.ಜಿ. ಚೀಲದಲ್ಲಿ ತುಂಬಿ ಮಾರಾಟ ಮಾಡಲು ಸಿದ್ಧತೆ ನಡೆಸಿದೆ. ಈ ಮರಳಿಗೆ ಮೈಸೂರಿನಲ್ಲಿ 50 ಕೆ.ಜಿ.ಗೆ 200 ರೂ. ನಿಗದಿಪಡಿಸಿದ್ದರೆ, ಹುಬ್ಬಳ್ಳಿಯಲ್ಲಿ 50 ಕೆ.ಜಿ. ಮೂಟೆಗೆ 220 ರೂ. ನಿಗದಿಪಡಿಸಲಾಗಿದೆ.

ಮಲೇಷ್ಯಾದಿಂದಲೇ ಚೀಲದಲ್ಲಿ ತುಂಬಿದ ಮರಳನ್ನು ಎಂಎಸ್ಐಎಲ್ ಆಮದು ಮಾಡಿಕೊಳ್ಳಲಿದೆ. ರಾಜ್ಯದಲ್ಲಿ ಬೇಡಿಕೆಗೆ ಅನುಗುಣವಾಗಿ ಮರಳನ್ನು ಆಮದು ಮಾಡಿಕೊಂಡು ಮಾರಾಟ ಮಾಡಲು ನಿರ್ಧರಿಸಿದೆ.

Comments