UK Suddi
The news is by your side.

ಧಾರ್ಮಿಕ ಕೆಲಸಗಳಿಗೆ 12 ಲಕ್ಷ ದೇಣಿಗೆ ನೀಡಿದ ಸಿಂದಗಿಯ ಕಲಾಗಾಯನ ತಂಡ.

-ಮಂಜುನಾಥ ಗದಗಿನ ಬೆಳಗಾವಿ

ಇಂಚ ಇಂಚು ಜಾಗಕ್ಕೂ, ಕವಡೆ ಕಾಸಿಗೂ ಹೊಡೆದಾಡಿ ಸಾಯೋ ಇಂತಹ ಕಾಲದಲ್ಲೂ, ಪರಿಶ್ರಮ ಪಟ್ಟು, ಮನೆ ಉದ್ಯೋಗ ಬಿಟ್ಟು ಊರ ಊರ ತಿರಗಾಡಿ  ದುಡಿದ ದುಡ್ಡನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ಕೆ ವಿನಿಯೋಗ ಮಾಡುತ್ತಿದ್ದೇ ಇಲ್ಲೊಂದ ಸಂಘ.

ಹೌದು! ಕೆಲವೊಂದು ಸಂಘ, ಸಂಸ್ಥೆಗಳು ಹಾಗೂ ಜನರು ತಾವು ಮಾಡಿದ ಕಾರ್ಯ ಇತರರಿಗೆ ತಿಳಿಯ ಬಾರದು ಎಂದು ಎಲೆ ಮರೆಯ ಕಾಯಿಂತೆ ಶ್ರಮಿಸಿ ಸಮಾಜಕ್ಕೆ ತಮಗಾದಷ್ಟು ಸಹಾಯ, ಸಹಕಾರ ಮಾಡುತ್ತಿವೆ. ಇಂತಹ ಸಂಘಗಳ ಸಾಲಿನಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಪಡಗಾನೂರು ಗ್ರಾಮದ ಲಗಮಾದೇವಿ ಜಾನಪದ ಡೊಳ್ಳಿನ ಕಲಾಗಾಯ ಸಂಘ ಕೂಡಾ ಒಂದು. ಈ ಸಂಘ ಒಂದು ದಶಕದ ಹಿಂದೆ ಅಸ್ಥಿತ್ವಕ್ಕೆ ಬಂದಿದ್ದು, ಇಲ್ಲಿವರೆಗೂ ತಾವುಗಳಿಸಿದ 12ಕ್ಕೂ ಲಕ್ಷಕ್ಕೂ ಅಧಿಕ ಹಣವನ್ನು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಿಗೆ ನೀಡಿ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ. 

12ಜನರ ತಂಡ:

10 ವರ್ಷದ ಹಿಂದೆ ಬಿಎ ಬಿಎಡ್ ಕಲಿತ ಗ್ರಾಮದ ಗುರುನಾಥ ರಾಯಗೊಂಡಪ್ಪ ಮುರಡಿ ಎಂಬ ಯುವಕನಿಂದ ಈ ತಂಡ ಅಸ್ವಿತ್ವಕ್ಕೆ ಬಂದಿತು. ಗುರುನಾಥ ಕೂಡಾ ಸಮಾಜಪರ ಕಾಳಜಿ ಹೊಂದಿದ ಯುವಕ. ಮೇಲಾಗಿ ಸಾಹಿತಿ, ಹಾಡುಗಾರ ಕೂಡಾ. ಇತನೇ ಸ್ವತ ಹಾಡುಗಳನ್ನು ರಚಿಸಿ ಅವುಗಳಿಗೆ ದಾಟಿ ಹಚ್ಚಿ ಹಾಡುತ್ತಾನೆ. ಇಲ್ಲಿವರೆಗೂ ಈತ 250ಕ್ಕೂ ಹೆಚ್ಚು ಸ್ವರಚಿಸಿ ಅವುಗಳಿಗೆ ಜೀವತುಂಬಿದ್ದಾರೆ. ಇಂತಹ ಯುವಕ ಜನಪರ ಕಾಳಜಿಯುಳ್ಳ ತಂಡ ರಚಿಸಿ ಅದರ ಮೂಲಕ ಸಮಾಜ ಕಾಳಜಿ ಮೆರೆಯುತ್ತಿದ್ದಾನೆ. ತಂಡದ 12 ಜನ ಸದಸ್ಯರು ಕೂಡಾ ವಿವಾಹಿತರು. ಕುಟುಂಬ ಸಲಹುವುದರ ಜೊತೆಗೆ ಹಾಡು ಹಾಡಿ,ನೃತ್ಯ ಮಾಡಿ ಬಂದ ಹಣವನ್ನು ಸಮಾಜಕ್ಕೆ ನೀಡುತ್ತಿರುವುದು ಹೆಮ್ಮೆಯ ವಿಷಯವೇ ಸರಿ.

ಕುಟುಂಬಕ್ಕೆ ಕೃಷಿಯೇ ಆಧಾರ:

ಈ ತಂಡದಲ್ಲಿ ಇರುವ 12 ಜನರ ಮೂಲ ಕಸಬು ಕೃಷಿ. ಕೃಷಿಯಲ್ಲಿ ಬಂದ ಹಣವನ್ನು ಸಂಸಾರ ನಡೆಸಲು ವಿನಿಯೋಗಿಸುತ್ತಾರೆ. ಇನ್ನೂ ಸಂಘದ ಮೂಲಕ ಕಳಿಸಿದ ದುಡ್ಡನ್ನು ಯಾರೋಬ್ಬರು ತೆಗೆದುಕೊಳ್ಳದೇ ಸಮಾಜಿಕ, ಧಾರ್ಮಿಕ ಸೇವೆ ನೀಡುತ್ತಿದ್ದಾರೆ. ಸಂಘದ ಮೂಲಕ ನಡೆಯುವ ಬಹುತೇಕ ಕಾರ್ಯಕ್ರಮಗಳು ರಾತ್ರಿ ಹೊತ್ತಲಿ ಇರುವುದರಿಂದ ಹಗಲು ಹೊಲದಲ್ಲಿ ದುಡಿದು ರಾತ್ರಿ ಹಾಡು, ನೃತ್ಯ ಮಾಡಲು ಹೋಗುತ್ತಿದ್ದಾರೆ. ಇಲ್ಲಿವರೆಗೂ ಈ ಸಂಘದಿಂದ 1500ಕ್ಕೂ ಹೆಚ್ಚು ಪ್ರದರ್ಶನಗಳು ನಡೆದಿರುವುದು ವಿಶೇಷ. ಈ ತಂಡದಿಂದ ಆಧ್ಯಾತ್ಮ, ಪೌರಾಣಿಕ, ತತ್ವಪದ, ಡೊಳ್ಳು ಕುಣಿತಗಳಂತಹ ನಾನಾ ಕಲೆಗಳನ್ನು ಪ್ರಸ್ತುತ ಪಡಿಸುವ ಮೂಲಕ ಜನಪರ ಕಾಳಜಿಯೊಂದಿಗೆ ಕಲಾ ಪೋಷಣೆಯನ್ನು ಮಾಡುತ್ತಿದೆ. 

ಹೊರ ರಾಜ್ಯದಲ್ಲೂ ಸಂಚಲನ:

ಈ ತಂಡ ಜನಪದ ಪ್ರದರ್ಶನ ಕೇವಲ ರಾಜ್ಯಕ್ಕೆ ಮಾತ್ರ ಸಿಮೀತವಾಗಿಲ್ಲ. ಈ ತಂಡ ಸಾಂಗ್ಲಿ, ಮಿರಜ್, ಮುಂಬೈ. ಪುಣೆ, ಸೊಲ್ಲಾಪುರ, ಅಕ್ಕಲಕೋಟಗಳಿಗೂ ಹೋಗಿ ಕಲಾ ಪ್ರದರ್ಶನ ನೀಡಿ ಅಲ್ಲಿ ಜನರ ಮನಸ್ಸನ್ನು ಗೆದ್ದಿದೆ. ರಾಜ್ಯದ ಬಾಗಲಕೋಟೆ, ಕಲಬುರ್ಗಿ, ಬೀದರ, ಬೆಳಗಾವಿ, ಕೊಪ್ಪಳ, ರಾಯಚೂರು, ಗದಗ, ಹುಬ್ಬಳ್ಳಿ, ದಾವಣಗೇರೆ, ಬೆಂಗಳೂರು, ಹಾಸನ ಹೀಗೆ ರಾಜ್ಯದ ಬಹುತೇಕ ಕಡೆಗಳಲ್ಲಿ ಪ್ರದರ್ಶನ ನೀಡಿ ಬಂದ ಹಣದಿಂದ ಧಾರ್ಮಿಕ, ಸಾಮಾಜಿಕ ಸೇವೆ ಮಾಡುತ್ತಿದೆ.

ಅರಸಿ ಬಂದ ಪ್ರಶಸ್ತಿ:

ಈ ತಂಡ ಕಲಾ ಪೋಷಣೆ ಹಾಗೂ ಸಾಮಾಜಿಕ, ಧಾರ್ಮಿಕ ಕಾಳಜಿ ನೋಡಿ ಬೆಳಗಾವಿಯ ಸಿರಿಗನ್ನಡ ರಾಜೋತ್ಸವ ಪ್ರಶಿಸ್ತಿ, ಬಾಗಲಕೋಟೆಯ ಸರಸ್ವತಿ ಶ್ರೀ ಪ್ರಶಸ್ತಿ, ಮುಧೋಳದ ಸಮಾಜ ಸೇವಾ ಪ್ರಶಸ್ತಿ, ಕರ್ನಾಕಟ ರಾಜ್ಯ ಭೂಷಣ ಪ್ರಶಸ್ತಿ, ಸದ್ಬಾವನಾ ಪ್ರಶಸ್ತಿ, ಬಸವ ಜ್ಯೋತಿ ಪ್ರಶಸ್ತಿ, ಬಸವ ಭೂಷಣ ಪ್ರಶಸ್ತಿ, ಕಲಾ ಚೇತನ ಪುರಸ್ಕಾರಗಳು ದೊರೆತಿವೆ.

ಇವರ ಸಮಾಜ ಹಾಗೂ ಕಲಾ ಸೇವೆ ಹೀಗೆ ಮುಂದುವರೆಯಲಿ ಎಂಬುವುದು ನಮ್ಮೇಲ್ಲರ ಆಶಯ.

Comments