UK Suddi
The news is by your side.

ಶ್ರುತಿ ಹಾಸನ್ ಕಲ್ಯಾಣ.


ನಟಿ ಶ್ರುತಿ ಹಾಸನ್  ಮೊದಲಿನಂತೆ ಸಿನಿಮಾಗಳಲ್ಲಿ ಅಷ್ಟಾಗಿ ತೊಡಗಿಸಿಕೊಳ್ಳುತ್ತಿಲ್ಲ. ಇದಕ್ಕೆ ಕಾರಣ ಏನೆಂದರೆ ಮದುವೆ. ಹೌದು ನಟ ಕಮಲ್ ಹಾಸನ್ ಪುತ್ರಿ  ಶ್ರುತಿ ಹಾಸನ್ ಮದುವೆಯಾಗಲು ನಿಧ೯ರಿಸಿದ್ದಾರೆ.ಇತ್ತೀಚಗೆ

ಚೆನ್ನೈನಲ್ಲಿ  ನಟ ಅಧವ್ ಮದುವೆ ಕಾಯ೯ಕ್ರಮದಲ್ಲಿ ನಟಿ ಶ್ರುತಿ ಹಾಗೂ ಅವರ ಬಹುಕಾಲದ ಗೆಳೆಯ ಮೈಕಲ್ ಕೋಸಲ್ ಅವರು ದೇಸಿ ಉಡುಗೆಯಲ್ಲಿ ಎಲ್ಲರ ಗಮನ ಸೆಳೆದಿದ್ದರು. ಇದೇ ವೇಳೆಗೆ ಇವರಿಬ್ಬರು ಮದುವೆಗೆ ಸಜ್ಜಾಗಿದ್ದಾರೆ ಎಂಬ ಗಾಸಿಪ್ ಕೂಡ ಹರಡಿತ್ತು, ಅದೀಗ ನಿಜ ಕೂಡ ಆಯಿತು. ಶ್ರುತಿ ಹಾಗೂ ಮೈಕಲ್ ಮದುವೆಯಾಗಲು ನಿಧ೯ರಿಸಿದ್ದು ಎರಡು ಕುಟುಂಬಗಳಿಂದ ಮದುವೆಗೆ ಒಪ್ಪಿಗೆಯನ್ನೂ ಪಡೆದುಕೊಂಡಿದ್ದಾರೆ ಶ್ರುತಿಯವರು.
2018ರ ಜೂನ್ ಒಳಗೆ ಇಬ್ಬರ ವಿವಾಹ ನೆರವೇರಲಿದೆಯಂತೆ ಮೈಕಲ್ ಅವರು ಮೂಲತಃ ಲಂಡನ್ ವರಾಗಿದ್ದು ರಂಗಭೂಮಿ ಕಲಾವಿದರು ಜೊತೆಗೆ ತಮ್ಮದೇ ಸ್ವಂತ ಮ್ಯೂಸಿಕ್ ಬ್ಯಾಂಡ ಹೊಂದಿದ್ದಾರೆ. ಇಬ್ಬರೂ ಮೂರು ತಿಂಗಳ ಕಾಲ ಡೇಟಿಂಗ್ ನಲ್ಲಿದು ಅದು ಈಗ ಮದುವೆ ಹಂತಕ್ಕೆ ಬಂದಿದೆ. ಸದ್ಯ ಶ್ರುತಿ “ಶಭಾಷ್ ನಾಯ್ಡು” ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದು ಅದರ ಕೆಲಸ ಮುಗಿಯುತ್ತಿದ್ದಂತೆ ಮದುವೆಯ ಬಗ್ಗೆ ಪ್ಲ್ಯಾನ್ ಮಾಡಲಿದ್ದಾರಂತೆ.

Comments