‘ಅಂಜನಿಪುತ್ರ’ ಚಿತ್ರ ಪ್ರದರ್ಶನಕ್ಕೆ ತಡೆ
ಬೆಂಗಳೂರು: ಗುರುವಾರ ತೆರೆಕಂಡ ‘ಅಂಜನಿಪುತ್ರ’ ಪ್ರದರ್ಶನಕ್ಕೆ ಸಿಟಿ ಸಿವಿಲ್ ಕೋರ್ಟ್ ತಡೆ ನೀಡಿದೆ. ಚಿತ್ರದಲ್ಲಿ ವಕೀಲರ ಕುರಿತು ಅವಹೇಳನಕಾರಿ ಬಳಸಲಾಗಿದೆ, ಆ ಮೂಲಕ ವಕೀಲರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಸಿಟಿ ಸಿವಿಲ್ ಕೋರ್ಟ್ಗೆ ವಕೀಲ ನಾರಾಯಣಸ್ವಾಮಿ ಎಂಬವರು ಅರ್ಜಿ ಸಲ್ಲಿಸಿದ್ದರು. ಅಲ್ಲದೇ, ಸಿನಿಮಾದ ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದರು. ಅರ್ಜಿ ಕೈಗೆತ್ತಿಕೊಂಡ ನ್ಯಾಯಾಲಯ, ಚಿತ್ರಕ್ಕೆ ಜನವರಿ 2ರವರೆಗೆ ತಡೆ ನೀಡಿದೆ.
ನಟ ರವಿಶಂಕರ್ ಸಂಭಾಷಣೆ ಹೇಳುತ್ತಾರೆ. ಚಿತ್ರದಲ್ಲಿ ವಿಲನ್ ಪರವಾಗಿ ಇರುವ ಲಾಯರ್ಗೆ ಪೊಲೀಸ್ ಪಾತ್ರದ ರವಿಶಂಕರ್ ಹೇಳುವ ಡೈಲಾಗ್ ಇದಾಗಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಹರ್ಷ ‘ನಾವು ಯಾರಿಗೂ ನೋಯಿಸುವ ದೃಷ್ಟಿಯಿಂದ ಸಂಭಾಷಣೆ ಸೇರಿಸಿಲ್ಲ. ಅದಕ್ಕೆ ಸೆನ್ಸಾರ್ನವರು ಕೂಡ ಆಕ್ಷೇಪ ವ್ಯಕ್ತಪಡಿಸಿಲ್ಲ. ಸಿನಿಮಾದ ಆ ಸಂದರ್ಭಕ್ಕೆ ತಕ್ಕಂತೆ ಸಂಭಾಷಣೆ ಬಳಸಲಾಗಿದೆ. ಅದು ಕೆಟ್ಟ ಮಾತಿನಲ್ಲಿ ಹೇಳಿಲ್ಲ’ ಎಂದಿದ್ದಾರೆ.