UK Suddi
The news is by your side.

ಯಡಿಯೂರಪ್ಪನವರು ಒಬ್ಬ ಹುಟ್ಟು ಹೋರಾಟಗಾರರು:ಪಿ ರಾಜೀವ್

ಶಿವಮೊಗ್ಗ: ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾಯಿತು, ಈ ಭಾರತ ದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶ ಹಾವಾಡಿಗರ, ಭಿಕ್ಷುಕರ, ಕೊಳಗೇರಿಗಳ ದೇಶ ಎಂದು ಪರಿಚಯ ಮಾಡಿಕೊಡುತ್ತಿದ್ದರು, ಈ ಹೊಣೆಗಾರಿಕೆಯನ್ನು ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಲ್ಲಿ ಅರವತ್ತೈದು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ವಿಧಿಯಿಲ್ಲದೆ ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಕುಡಚಿ ಶಾಸಕರಾದ ಪಿ.ರಾಜೀವ್ ಕಿಡಿಕಾರಿದರು.

ಶಿವಮೊಗ್ಗ ಜಿಲ್ಲೆಯ ಹೊನ್ನಾಳಿಯಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿ, ಇತ್ತೀಚೆಗೆ ಅಮೇರಿಕಾದ ಅಧ್ಯಕ್ಷಿಯ ಚುನಾವಣೆ ನಡೆದಾಗ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಟ್ರಂಪ್ ಅವರು ತಮ್ಮ ಭಾಷಣದಲ್ಲಿ ಭಾರತ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದ ಕೇವಲ ಮೂರು ವರ್ಷದಲ್ಲಿ ಯಾವ ರೀತಿ ಆಡಳಿತವನ್ನು ಕೊಟ್ಟಿದ್ದಾರೆ ಆ ಅಡಳಿತವನ್ನು ನಾನು ಕೊಡುತ್ತೇನೆ ಎಂದು ತಮ್ಮ ಭಾಷಣವನ್ನು ಮಾಡುತ್ತಾರೆ ಎಂದು ಹೇಳಿದರು.

ಹೊನ್ನಾಳಿ ಇದಕ್ಕೆ ನಾನು ಕೊಡುವ ಅರ್ಥ ಬಂಗಾರದ ಹಾಳೆ ಎಂದು ಎಕೆಂದರೆ, ಹೊನ್ನಾಳಿಯಲ್ಲಿ ಕಾಗದದ ಮೇಲೆ ಬರೆದ ಅಕ್ಷರ ಅಳಿಸಬಹುದು, ಗೋಡೆಯ ಮೇಲೆ ಬರೆದ ಅಕ್ಷರ ಅಳಿಸಬಹುದು ಆದರೆ, ಇಲ್ಲಿನ ಜನರ ಹೃದಯದ ಬಂಗಾರದ ಹಾಳೆಯ ಮೇಲೆ ಬರೆದ ಅಕ್ಷರ ಯಾವತ್ತಿಗೂ ಅಳಿಸಲಾಗುವುದಿಲ್ಲ ಎಂದರು.

Comments