UK Suddi
The news is by your side.

ಹರುಷವ ಕಿತ್ತುಕೊಳ್ಳದ ಮಾರ್ಗವ ಅನುಸರಿಸಿ

ಒಂದೊಂದು ವರುಷವು ಉರುಳಿ….!
ಬದುಕುವ ಆಸೆಯೂ ಕೆರಳಿ
ನೋವಿನ ನೆನಪುಗಳೆಲ್ಲ ಮರೆಯಾಗಲಿ ….
ನಿಲ್ಲದ ಪಯಣ!
ನಾವಿಕನು ಮೇಲಿರುವ!
ಕುಣಿಸುವವ ಅವನು!
ಕುಣಿಯುವವರು ನಾವು!
ಕೊಡುವ ತೆಗೆದುಕೊಳ್ಳುವ… ನೋವು ನಲಿವು!
ಕೊಟ್ಟಾಗ ಸಿಹಿಯ ರುಚಿ ಅನುಭವಿಸಿ!
ಕಿತ್ತುಕೊಂಡಾಗ ನೋವಿನ ರುಚಿಯ ಅನುಭವಿಸಿ!
ಸಿಹಿಯ ನೋಡಲು ಕಹಿಯ ಅನುಭವಬೇಕು!
ಬೇಡವೆಂದರೆ ನೀ…. ಬದುಕಿರುವ ಜಡವಸ್ತುಗಳ ಸಾಲಿನಲ್ಲಿ ನಿಲ್ಲಬೇಕು !
ವರುಷಗಳ ಹಾದಿಯಲ್ಲಿ …

ನೋವು, ಕಷ್ಟ ,ತಪ್ಪು, ಸಂತೋಷ, ಪ್ರೀತಿ ….

ಎಲ್ಲವನ್ನು ಅರಿಯುವಂತೆ ಮಾಡಿದವರಿಗೆಲ್ಲ…..
ಅನುಭವಗಳನ್ನು ಕೊಟ್ಟ ಎಲ್ಲರಿಗು ನಮಿಸಿ!!
ಜೀವನದ ಈ ವರುಷದ ಅಧ್ಯಾಯದ ಪಾಠವ ಮುಗಿಸಿ ….

ಮಾಡಿದ ತಪ್ಪುಗಳನ್ನು ತಿದ್ದುಕೊಳ್ಳಲು ನಿರ್ಧರಿಸಿ!
ಹೊಸದಾದ ವರುಷವು ನಿಮ್ಮ ಮನ ಮನೆಯ ಹರುಷವ ಕಿತ್ತುಕೊಳ್ಳದ ಮಾರ್ಗವ ಅನುಸರಿಸಿ!!

.

.

❤ಪ್ರೀತಿ ಇಂದ ಪ್ರೀತಿಯ ❤
❤ಹಂಚ ಬೇಕು ಮಾನವ ❤
ನಿಮ್ಮ ಅನಿಸಿಕೆಯನ್ನು 👇🏻
ಈ ವಾಟ್ಸ್ ಆಪ್ number ಗೆ ಕಳಿಸಿ
೯೯೪೫೬೪೫೯೮೫ (9945645985)
🙏🏻ಧನ್ಯವಾದಗಳೊಂದಿಗೆ 🙏🏻
😍 ವಾಣಿ ಶೆಟ್ಟಿ 😍

Comments