ತೆರಿಗೆ ಹಣ ದುರ್ಬಳಕೆ: ಸಿಎಂ ವಿರುದ್ಧ ಎಸಿಬಿಗೆ ದೂರು
ಹೊಸ ವರ್ಷದ ದಿನವೇ ಸಿಎಂ ವಿರುದ್ಧ ಎಸಿಬಿಗೆ ದೂರು
ಬೆಂಗಳೂರು: ಬೆಂಗಳೂರು: ಹೊಸ ವರ್ಷದ ದಿನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಸಿಬಿಗೆ ದೂರು ದಾಖಲಾಗಿದೆ. ಸರ್ಕಾರಿ ಸಾಧನೆಗಳ ಜಾಹೀರಾತಿಗೆ ಸಾರ್ವಜನಿಕ ಹಣ ಬಳಕೆ ಆರೋಪ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿರುದ್ಧ ಬೆಂಗಳೂರು ನಾಗರೀಕ ಹಕ್ಕು ಹೋರಾಟ ಸಮಿತಿ ಉಪಾಧ್ಯಕ್ಷ ಗಣೇಶ್ ಸಿಂಗ್ ದೂರವನ್ನು ನೀಡಿದ್ದಾರೆ. ಸಾರ್ವಜನಿಕರಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಹಣದಲ್ಲಿ ಸಿಎಂ ಸರ್ಕಾರಿ ಜಾಹಿರಾತನ್ನು ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.