UK Suddi
The news is by your side.

ವಿಧಾನ ಸಭೆ ಚುನಾವಣಾ ಆಖಾಡಕ್ಕೆ ಸಜ್ಜಾದ ಸಕ್ಕರೆ ಜಿಲ್ಲೆ ಬೆಳಗಾವಿ.

ಬೆಳಗಾವಿ ಜಿಲ್ಲೆ ಸಕ್ಕರೆ ಜಿಲ್ಲೆ ಕೃಷ್ಣೆ ಮಲಪ್ರಭೆ ಘಟಪ್ರಭಾ ಹಿರಣ್ಯ ಕೇಶ ವೇದಗಂಗಾ ಮಹದಾಯಿ ಕಳಸಾ ಮುಂತಾದ ನದಿಗಳು ಹೊಂದಿರುವ ಸುಂದರ ಪರಿಸರ ಸಕ್ಕರೆಯನ್ನು ಹೆಚ್ಚಿಗೆ ಉತ್ಪಾದಿಸುವ  ಜೊತೆಗೆ  ಉಣ್ಣೆ ,ಖಾದಿ ,ನೂಲು ಚರ್ಮ ತಯಾರಿಸುವ ಹೆಮ್ಮೆಯ ಜಿಲ್ಲೆ .ದೇಶದಲ್ಲಿಯೇ ಹೆಚ್ಚಿನ ತಂಬಾಕು ಬೆಳೆವ ನಿಪ್ಪಾಣಿ ಗಡಿ ಮಹಾರಾಷ್ಟ್ರಕ್ಕೆ ಹೊಂದಿಕೊಂಡ ವಿಧಾನ ಸಭೆ ಕ್ಷೆತ್ರ.. ಚುನಾವಣೆ ಕೇವಲ ನೆಪಗಳು ಇಲ್ಲಿ ಪಾರಂಪರಿಕ ವಂಶ ಕುಟುಂಬ ರಾಜಕಾರಣ ಸಾಮಂತರೆನಿಸುವವರ ಪಾರುಪತ್ಯ ಎಂದು ನಂಬಿದ್ದರೂ ಬದಲಾದ ರಾಜಕೀಯ ಲೆಕ್ಕಾಚಾರ ನೋಟು ಬ್ಯಾನ ಮಾತು ಜಿ ಎಸ ಟಿ ಮಾರಕ ಹೊಡೆತ ಕಳೆದ ನಾಲ್ಕು ವರ್ಷಗಳ ಬರ ಮತ್ತು ರಾಜ್ಯ ಸರಕಾರದಿಂದ ಐವತ್ತು ಸಾವಿರ ಹಣ ಸಾಲ ಮನ್ನಾ .ಕೇಂದ್ರದ ಕಳಸಾ ಭಂಡೂರಿ ಯೋಜನೆಯ ನಿರ್ಲಕ್ಷ ಮುಂತಾದ ಕಾರಣಗಳಿಂದ ಅನಿರೀಕ್ಷಿತ ಬದಲಾವಣೆ ಖಂಡಿತ ಸಾಧ್ಯವೆಂದು ಹೇಳಬಹುದು. ಜಿಲ್ಲೆಯಲ್ಲಿ ಎಲ್ಲ ಹದಿನೆಂಟು ಮತ ಕ್ಷೇತ್ರಗಳಲ್ಲಿ ಕಂಗೆಸು ಮತ್ತು ಬಿಜೆಪಿ ನೇರ ಹಣಾ ಹನಿ ಇದ್ದರೂ 

ಬೆಳಗಾವಿ ದಕ್ಷಿಣ ಖಾನಾಪುರದಲ್ಲಿ ಎಂ ಈ ಎಸ ಪ್ರಾಭಲ್ಯ ಮೆರೆಯುವ ಸಾಧ್ಯತೆಗಳಿವೆ.  

ಗಡಿ ಸಮಸ್ಯೆ ,ಭಾಷಾ ಸಮಸ್ಯೆ ,ನೆರೆಯ ಗೋವಾದವರ   ಕಳಸಾ ಬಂಡೂರಿಯನದಿ ನೀರು ಹಂಚಿಕೆಯಲ್ಲಿನ  ಮೊಂಡುತನ, ಬೆಳಗಾವಿ ಸುತ್ತಲಿನ ಮರಾಠಿ ಭಾಷಿಕರ ತಂಟೆಗಳು.ಇಂತಹ ಹಲವಾರು ಜ್ವಲಂತ ಸಮಸ್ಯೆಗಳ ಮಧ್ಯೆ ಬೆಳಗಾವಿ ಜಿಲ್ಲೆ ಯಾವಾಗಲೂ ಅಚ್ಚರಿಯ ಫಲಿತಾಂಶ ನೀಡುತ್ತಾ ಬಂದಿದೆ. ಕರ್ನಾಟಕದ ಪ್ರತಿಶತ 12 % ಶಾಸಕರನ್ನು ಹೊಂದಿರುವ ಅಂದರೆ 18  ವಿಧಾನ ಸಭಾ ಕ್ಷೇತ್ರ ಗಳನ್ನೂ ಬೆಳಗಾವಿ ಹೊಂದಿದೆ.
2018  ರ ಚುನಾವಣಾ ಕರ್ನಾಟಕಕ್ಕೇ ಒಂದು ಹೊಸ ಅಧ್ಯಾಯವಾಗುವುದು  . ಆಡಳಿತ ಪಕ್ಷದ ದುರಾಡಳಿತ ( anti  encumbrance factor )
ಯಾವಾಗಲೂ ಚುನಾವಣಾ ಸಮೀಕ್ಷೆಯ ಆಧಾರ ಅಳತೆಗೋಲು. ಕ್ಷೇತ್ರಗಳ ಅಭಿವೃದ್ಧಿ ,ಶಾಸಕರು ಜನರ ಸಮಸ್ಯೆಗೆ ಪರಿಹಾರ ಕಂಡುಕೊಂಡ ಕ್ರಮಗಳು .
ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕರು ಕೈಕೊಂಡ ಜನಪರ ಅಭಿವೃದ್ಧಿ ಕಾರ್ಯಕ್ರಮಗಳು , ಬರ ಪರಿಹಾರ ನೆಲ ಜಲ ರಕ್ಷಣೆಗೆ ಕೈಕೊಂಡ ಪ್ರಗತಿಪರ ಯೋಜನೆಗಳು. ಚುನಾವಣೆಯ ಫಲಿತಾಂಶಗಳ ಮಾನದಂಡ.
 
ವಿಧಾನ ಸಭಾ ಕ್ಷೇತ್ರವಾರು  ಚುನಾವಣಾ ವಿಶ್ಲೇಷಣೆ   
——————————————————
ಬೆಳಗಾವಿ ಗಡಿ ಜಿಲ್ಲೆಯಲ್ಲಿ ಒಟ್ಟು  18  ವಿಧಾನ ಕ್ಷೇತ್ರಗಳಿದ್ದು ಅವುಗಳಲ್ಲಿ 2013  ರ ಚುನಾವಣಾ  ಫಲಿತಾಂಶವು ಈ ರೀತಿ ಇದೆ .ಕಾಂಗ್ರೆಸು  ಆರು ಕ್ಷೇತ್ರಗಳಲ್ಲಿ , ಬಿಜೆಪಿ ಎಂಟು  ಕ್ಷೇತ್ರಗಳಲ್ಲಿ , ಎರಡು ಎಂ ಈ ಎಸ , ಒಂದು ಕೆ ಜಿ ಪಿ ,ಒಂದು  ಬಿ ಎಸ ಆರ್ ಪಕ್ಷಗಳಿಗೆ ಜಯವನ್ನು ನೀಡಿ ವಿಧಾನ ಸಭೆಗೆ ಆಯ್ಕೆ ಮಾಡಿದ್ದಾರೆ ಮತದಾರ ಪ್ರಭುಗಳು.
ಬಹುತೇಕ ಬಿಜೆಪಿ ಜಿಲ್ಲೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸುವುದರ ಮೂಲಕ  ತನ್ನ ಒಲವು ಬಿಜೆಪಿಗೆ ಸ್ಪಷ್ಟವಾಗಿ ತೋರಿಸಿದೆ.
ಕಳೆದ ಐದು ವರ್ಷಗಳಲ್ಲಿ ಶಾಸಕರ ಕಾರ್ಯ ವೈಖರಿ ಕ್ಷೇತ್ರಗಳ ಅಭಿವೃದ್ಧಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ನಡೆದ ಚುನಾವಣೆಯು ಜಿಲ್ಲೆಯ ರಾಜಕೀಯ ಲೆಕ್ಕಾಚಾರದ ಮೇಲೆ ಪ್ರಭಾವ ಬೀರುತ್ತದೆ.

ನಿಪ್ಪಾಣಿ .
—————-
 ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ಮಹಿಳಾ ಶಾಸಕಿಯಾಗಿ ಹಾಲಿ ಎಂ ಎಲ್ ಏ ಕಾಕಾಸಾಹೇಬ್ ಪಾಂಡುರಂಗ ಪಾಟೀಲ್ ಕಾಂಗ್ರೆಸು ಅವರನ್ನು  18,662  ಮತಗಳ ಅಂತರದಿಂದ ಸೋಲಿಸಿ ಮೊದಲಬಾರಿಗೆ  ಕನ್ನಡದ ಮಹಿಳಾ ಅಭ್ಯರ್ಥಿ ಆಯ್ಕೆಯಾದದ್ದು ದೊಡ್ಡ ಸುದ್ಧಿಯಾಗಿತ್ತು.
ಕಾಕಾಸಾಹೇಬ್ ಪಾಂಡುರಂಗ ಪಾಟೀಲ್ ಮಾತು ವೀರುಕುಮಾರ ಪಾಟೀಲ್ ಇವರು ಹಲವು ವರುಷಗಳನ್ನು ತಮ್ಮ ಹಿಡಿತದಲ್ಲಿದ್ದಕೊಂಡ ನಿಪ್ಪಾಣಿಯನ್ನು 
ಲಿಂಗಾಯತ ಸಮಾಜದ ಕನ್ನಡತಿ   ಜಯವನ್ನು ತಂದು ಜನಾನುರಾಗಿ ನಾಯಕಿ ಎನಿಸಿಕೊಂಡಳು.. ಗಡಿಭಾಗದಲ್ಲಿ ಮರಾಠಿ ಕನ್ನಡಗಳ ಘರ್ಷಣೆ ಈಗಲೂ ನಗರ ಸಭೆ ಎಂ ಈ ಎಸ ಇವರ ಕೈಯಲ್ಲಿದೆ. 
ನಿಪ್ಪಾಣಿ ಈಗ ಹಲವಾರು ಜನಪರ ಯೋಜನೆಯಡಿ ಸುಧಾರಿತಗೊಂಡಿದೆ . ಜೆ ಎಂ ಎಫ್ ಸಿ ಕೋರ್ಟ್ ಕಟ್ಟಡ    ಅತ್ಯಾಧುನಿಕ .ಬಸ್ ಸ್ಟಾಂಡ್ ರಸ್ತೆ ಚರಂಡಿ ನೀರು ಪೂರೈಕೆಯಲ್ಲಿ ಒಳ್ಳೆಯ ಹೆಸರನ್ನು ಮಾಡಿದ್ದಾರೆ . ಒಳ್ಳೆಯ ಕಾಂಗ್ರೆಸು ನಾಯಕರ ಕೊರತೆ ಒಳ ಜಗಳದಿಂದ ಬರುವ 2018  ರ ಚುನಾವಣೆಯಲ್ಲಿ    ಶಶಿಕಲಾ ಅವರ ಗೆಲವು ಬಹುತೇಕ ಖಚಿತವೆನಿಸಿದರೂ ಅಭ್ಯರ್ಥಿ  ಆಯ್ಕೆ ಪಕ್ಷಗಳ ಸೀಟ್ ಹೊಂದಾಣಿಕೆ ಅಥವಾ ಪ್ರಭಲ ಕಾಂಗ್ರೆಸು ಅಭ್ಯರ್ಥಿ ಕಣಕ್ಕೆ ಇಳಿದರೆ 
ಖಂಡಿತ ಮತ್ತೊಮ್ಮೆ ತುರಿಸಿನ ಸ್ಪರ್ಧೆ ಏರ್ಪಡುವದರಲ್ಲಿ ಎರಡು ಮಾತಿಲ್ಲ.ಕಾಂಗ್ರೆಸ್ನಲ್ಲಿ ಈಗ ಒಗ್ಗಟ್ಟು ಇದೆ ಹೊಸ ಲಿಂಗಾಯತ ಅಭ್ಯರ್ಥಿಯನ್ನು ಕಾಂಗೆಸ್ಸ ಪಕ್ಷ ಹಾಕಿದರೆ ಶಶಿಕಲಾ ಅವರ ಜಯ ಪ್ರಯಾಸವೆಂದೆನ್ನಬಹುದು.

ಚಿಕ್ಕೋಡಿ ಸದಲಗಾ ಕ್ಷೇತ್ರ .
—————————–
ರಾಜ್ಯದಲ್ಲಿಯೇ ಅತ್ಯಂತ ಹೆಚ್ಚಿನ ಮತಗಳ ಅಂತರ 76000  ಮತಗಳ ಅಂತರದಿಂದ ಗೆಲುವು ಸಾಧಿಸಿದ ಸೋಲಿಲ್ಲದ ಸರದಾರ ಶ್ರೀ ಪ್ರಕಾಶ  ಬಾಬಣ್ಣ ಹುಕ್ಕೇರಿ ತಮ್ಮ ಪ್ರತಿಸ್ಪರ್ಧಿ ಬಿ ಅರ ಸಂಗಪ್ಪಗೋಳ ಭಾರತೀಯ ಜನತಾ ಪಕ್ಷ ಅವರನ್ನು ಸೋಲಿಸಿ ಜಯದ ದಾಖಲೆ ಮುಂದುವರೆಸಿದರು. ಮುಂದೆ 2014  ರ ಪಾರ್ಲಿಮೆಂಟ್ ಚುನಾವಣೆಯಲ್ಲಿ ಚಿಕ್ಕೋಡಿ ಪಾರ್ಲಿಮೆಂಟ್ ಕ್ಷೇತ್ರದಿಂದ ಹಾಲಿ ಎಂ ಪಿ ಶ್ರೀ ರಮೇಶ ಕತ್ತಿ ಅವರ ವಿರುದ್ಧ ಪಕ್ಷದ ಹೈ ಕಮಾಂಡ್ ಆದೇಶದಂತೆ  ಒಲ್ಲದ ಮನಸಿನಿಂದ ಸ್ಪರ್ಧಿಸಿ ಅಲ್ಲಿ ಕಾಂಗ್ರೆಸಿಗೆ ಜಯವನ್ನು ತಂದು ಕೊಟ್ಟರು.ಸದಲಗಾ ಕ್ಷೇತ್ರಕ್ಕೆ ಶ್ರೀ ಪ್ರಕಾಶ್ ಹುಕ್ಕೇರಿಯವರ ಕೊಡುಗೆ ಅಪಾರ.
ಖಾಲಿ ಇರುವ ಶಾಸಕ ಸ್ಥಾನಕ್ಕೆ ಮುಂದೆ ತಮ್ಮ ಮಗ  ಯುವಕ ಗಣೇಶ ಹುಕ್ಕೇರಿ   ಕಣಕ್ಕೆ ಇಳಿದರು. ಹಾಲಿ ಎಂ ಎಲ್ ಸಿ  ಮತ್ತು ಬಿಜೆಪಿ ಪಕ್ಷದ ಶಿಸ್ತಿನ
ಕಾರ್ಯಕರ್ತ ಶ್ರೀ ಮಹಾಂತೇಶ ಕವಟಗಿಮಠರು   32000  ಮತಗಳ ಅಂತರದಿಂದ ಪರಾಭವಗೊಂಡರು. ಕಾಂಗ್ರೆಸಿನ ಪ್ರಕಾಶಾಹುಕ್ಕೇರಿ ಅವರ ಅತ್ಯಧಿಕ ಅಂತರವನ್ನು ಕೊಂಚ ಕಡಿಮೆ ಮಾಡಿದ ಸಾಧನೆ ಕವಟಗಿಮಠ ಅವರದ್ದು. ಈ ಸಲ ಅಣ್ಣಾಸಾಹೇಬ ಜೊಲ್ಲೆ ಚಿಕ್ಕೋಡಿಯಿಂದ ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಬಿಜೆಪಿ ಅಭ್ಯರ್ಥಿಯಾಗುವ ಎಲ್ಲ ಸಾಧ್ಯತೆಗಳಿದ್ದು ಚುನಾವಣೆ ತುರುಸಿನಿಂದ ಕೂಡಿದರೂ ಗೆಲವು ಗಣೇಶ ಹುಕ್ಕೇರಿ ಅವರಿಗೆ ನಿಶ್ಚಿತ ಎಂದು ಮತದಾರರು ಹೇಳುತ್ತಿದ್ದಾರೆ.
ಗಣೇಶ ಹುಕ್ಕೇರಿ ತಂದೆಯಂತೆ ತುಂಬಾ ಉತ್ಸಾಹಿ ತರುಣ ಎಲ್ಲ ಸಮುದಾಯದವರನ್ನು ಒಟ್ಟಿಗೆ ಒಯ್ಯುವ ಮತ್ತು ತಂದೆಯಂತೆ ರಾಜಕೀಯದಲ್ಲಿ ಒಳ್ಳೆಯ   ಹೆಸರು ಮಾಡುವ ಕನಸುಕಾಣುವ ಗಣೇಶ ಹುಕ್ಕೇರಿ ಅವರ ಗೆಲ್ಲುವು ಕಟ್ಟಿಟ್ಟ ಬುತ್ತಿ. ಇಲ್ಲಿ ಯಾವುದೇ ಪಕ್ಷದ ಯಾವುದೇ ಹೊಂದಾಣಿಕೆ ಮಾಡಿಕೊಂಡರೂ ಗಣೇಶ ಹುಕ್ಕೇರಿ ಅವರು ಗೆಲ್ಲುವುದು ಖಚಿತ.

ಅಥಣಿ.
————
ಚರ್ಮ ಉದ್ಧಿಮೆ ಕೃಷಿ ವ್ಯಾಪಾರವನ್ನು ನಂಬಿ ಬದುಕುವ ಜನತೆ  ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡ ಐತಿಹಾಸಿಕ ಕ್ಷೇತ್ರ ಅಥಣಿ. ಇಲ್ಲಿ ಲಿಂಗಾಯತ ಧರ್ಮದ ಮಹಾ ತಪಸ್ವಿ ಶ್ರೀ ಮುರುಗೇಂದ್ರ ಶ್ರೀಗಳ  ತಪೋ ಭೂಮಿ . ಅಷ್ಟೊಂದು ಸುಧಾರಣೆ ಕಾಣದ ಹಿಂದುಳಿದ ಕ್ಷೇತ್ರವಾಗಿದೆ. ಕಳೆದ ಮೂರು ಚುನಾವಣೆಗಳಲ್ಲಿ ಹೈ ಟ್ರಿಕ್ ಸಾಧಿಸಿದ ಶ್ರೀ ಲಕ್ಷ್ಮಣ ಸವದಿ ಕ್ರಿಯಾಶೀಲ ಶಾಸಕ. ಅಸ್ಸೆಂಬಲಿಯಲ್ಲಿ ಬ್ಲೂ ಫಿಲಂ ಚಿತ್ರ ನೋಡಿದ್ದರ ಹಿನ್ನೆಯಲ್ಲಿ 2012  ರಲ್ಲಿ   ತಮ್ಮ ಮಂತ್ರಿಯ ಪದಕ್ಕೆ ರಾಜೀನಾಮೆ ಕೊಡಬೇಕಾಗಿ ಬಂತು. 
ಇಂತಹ ಕಳಂಕ ಹೊತ್ತ ಇವರಿಗೆ ಮತ್ತೆ ಬಿ ಜೆ ಪಿ ಪಾರ್ಟಿ ಟಿಕೆಟು ಕೊಟ್ಟು   ಅಭಾರ್ತಿಯನ್ನಾಗಿ ಮಾಡಿತು . ಇವರ ಪ್ರಬಲ ಪ್ರತಿ ಸ್ಪರ್ಧಿ ಮಹೇಶ ಈರನಗೌಡ ಕುಮಟಹಳ್ಳಿ  ತುರುಸಿನ ಸ್ಪರ್ಧೆ ಒಡ್ಡಿದರು ಸಹಿತ 24000  ಮತಗಳ ಅಂತರದಿಂದ ಲಕ್ಶ್ಮಣ ಸವದಿ ಗೆಲುವು ಸಾಧಿಸಿದರು.
ಕಾಂಗ್ರೆಸಿನ ಭದ್ರ ಕೋಟೆ ಎಣಿಸಿದ ಅಥಣಿ ಮತ ಕ್ಷೇತ್ರವು   ಮೊದಲ ಬಾರಿಗೆ 1985  ರಲ್ಲಿ ಶ್ರೀಮತಿ ಲೀಲಾದೇವಿ ಪ್ರಸಾದ ಅವರ ಸ್ಪರ್ಧೆಯಿಂದ ಜನತಾ ಪರಿವಾರದವರ ಪಾಲಾಯಿತು. 2004 ರಿಂದ ಈಚೆಗೆ ಅದನ್ನು ಬಿ ಜೆ ಪಿಯ ಶ್ರೀ ಲಕ್ಶ್ಮಣ ಸವದಿ ಅವರು ತಮ್ಮದಾಗಿಸಿಕೊಂಡಿದ್ದಾರೆ.
ಶ್ರೀ ಲಕ್ಶ್ಮಣ ಸವದಿ ಒರಟು ಸ್ವಭಾದವರೆನಿಸಿದರು ಒಳ್ಳೆಯ ಸ್ನೇಹ ಜೀವಿ  ಪಕ್ಷಕ್ಕೆ ಅತ್ಯಂತ ನಿಷ್ಠೆಯಿಂದ ಇದ್ದವರು.
ಈ ಸಲವೂ ಇವರೇ ಪಕ್ಷದ ಅಭ್ಯರ್ಥಿಯಾಗುವದರಲ್ಲಿ ಮತ್ತು ಗೆಲುವು ಕೂಡ ಇವರದೇ ಎನ್ನುವದರಲ್ಲಿ   ಸಂದೇಹವಿಲ್ಲ.ಆದರೆ ಜಾತ್ಯತೀತ ಪಕ್ಷಗಳ ಹೊಂದಾಣಿಕೆ ಮತ್ತು ಪ್ರಬಲ   ಕಾಂಗ್ರೆಸು ಅಭ್ಯರ್ಥಿ ಆಯ್ಕೆಯಾದಲ್ಲಿ ಪ್ರಾಯಶ ಲಕ್ಶ್ಮಣ ಸವದಿ ಅವರಿಗೆ ಗೆಲುವು  ಕಷ್ಟವೆನಿಸಬಹುದು.
ತಕ್ಕ ಮಟ್ಟಿಗೆ ಕೆಲಸ ಮಾಡಿದರು ಅಥಣಿಯ ಜಮಖಂಡಿ ರಸ್ತೆ ,ಕಾಗವಾಡಕ್ಕೆ ಹೋಗುವ ದಾರಿ ಸಂಪೂರ್ಣ ಹದಗೆಟ್ಟಿದೆ., ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಸುವಲ್ಲಿ ಶಾಸಕರ ಸಮರ್ಪಕವಾಗಿ ಕೆಲಸ ಮಾಡಿಲ್ಲ.

ಕಾಗವಾಡ .
————–
ಕಾಗವಾಡ ಶಾಸಕ ಭರಮು ಅಲಗೌಡ ಕಾಗೆ ಕಳೆದ ಎರಡು ವಿಧಾನ ಸಭೆಯ ಚುನಾವಣೆಯಲ್ಲಿ ಸತತ ಗೆಲುವು ಸಾಧಿಸಿದ್ದಾರೆ. 2013  ರಲ್ಲಿ ತಮ್ಮ ಪ್ರತಿ ಸ್ಪರ್ಧಿ ಜೆ ಡಿ ಎಸ ಪಕ್ಶದ ಶ್ರೀಮಂತ ಬಾಳಾಸಾಹೇಬ  ಪಾಟೀಲ್ ಅವರನ್ನು ಕೇವಲ 2887 ಮತಗಳ ಅಂತರದಿಂದ ಸೋಲಿಸಿ ಕ್ಷೇತ್ರವನ್ನು ತಮ್ಮದಾಗಿಸಿಕೊಂಡರು.
ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಿ ,ಇತ್ತ್ತೀಚೆಗೆ ಗುಂಡಾ ವರ್ತನೆಗೆ ಜೈಲು ವಾಸಿಯಾದ ಶಾಸಕರು ಭರಮು ಅಲಗೌಡ ಕಾಗೆ ಹಾಗು ಆತನ ಕುಟುಂಬದವರ 
ವರ್ತನೆಗೆ ಜನ ಬೇಸತ್ತಿದ್ದಾರೆ.ಜೆ ಡಿ ಎಸ ಪಕ್ಶದ ಶ್ರೀಮಂತ ಬಾಳಾಸಾಹೇಬ  ಪಾಟೀಲ್ ಅವರು ಈ ಸಲ  ತಮ್ಮ ಅಧೃಷ್ಟವನ್ನು ಪರೀಕ್ಷಿಸಿಸಲು ಮತ್ತೊಮ್ಮೆ ಕ್ಷಣಕ್ಕೆ ಇಳಿದರೆ ಅವರಿಗೆ ಗೆಲುವು ನಿಶ್ಚಿತ .ಕಾಂಗ್ರೆಸು ಮತ್ತು ಜೆ ಡಿ ಎಸ ಹೊಂದಾಣಿಕೆಯಾದಲ್ಲಿ  ಕಾಗವಾಡದಲ್ಲಿ   ಬಿ ಜೆ ಪಿ ಗೆ 2018  ಚುನಾವಣೆ ಕಷ್ಟ ಸಾಧ್ಯವೆನ್ನ ಬಹುದು . ಬಿಜೆಪಿ ಪಕ್ಷವು ಕೂಡ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದಲ್ಲಿ ಗೆಲುವು ಬಿಜೆಪಿ ಪರ ಎನ್ನಬಹುದು. ಆದರೆ ಸಧ್ಯದ ಪರಿಸ್ಥಿತಿಯಲ್ಲಿ 
ಬಿ ಜೆ ಪಿ ಗೆ ಕಾಗವಾಡ ಮತದಾರರು ಮುನಿಸಿಕೊಂಡಿದ್ದಾರೆ ಎಂದರೆ ತಪ್ಪಾಗದು.ಭರಮು ಕಾಗೆ ಅವರ ಹುಂಬುತನ ಗುಂಡಾ ಪ್ರವೃತ್ತಿ ಅಸಮಪರ್ಪಕ ಕಾರ್ಯದಿಂದ ಮತದಾರ ಪ್ರಭುಗಳು ರೋಶಿ ಹೋಗಿದ್ದಾರೆ. ಬದಲಾವಣೆ ಬಯಸುವದರಲ್ಲಿ ತಪ್ಪಿಲ್ಲ ಎಂದೆನ್ನುತ್ತಾರೆ.ಇಲ್ಲಿ ಬಿಜೆಪಿ ತನ್ನ ನೇಲ್ಯನ್ನು ಕಳೆದುಕೊಂಡಿದೆ ಕಾಂಗ್ರೆಸಿಗೆ ಅನುಕೂಲವಾಗಿ ಕಾಣುತ್ತಿದೆ.

ಕುಡಚಿ 
—————-
ಕುಡಚಿ  ಮತ ಕ್ಷೇತ್ರವು 2008  ರಲ್ಲಿ ಶ್ಯಾಮ ಘಾಟಗೆ ಅವರ ಕಾಂಗ್ರೆಸನವರ ಅಧೀನದಲ್ಲಿತ್ತು. ಮುಂದೆ ಬಿ ಎಸ ರಾಮಲು ಅವರ ಬಿ ಎಸ ಆರ ಪಕ್ಷದ 
ಪಿ ರಾಜೇವ ಎಂಬ ಯುವಕನನ್ನು ಕಣಕ್ಕೆ ಇಳಿಸಲಾಯಿತು. 2013  ಚುನಾವಣೆಯಲ್ಲಿ ಪಿ ರಾಜೀವ ಅವರು ಕಾಂಗ್ರೆಸ ಅಭ್ಯರ್ಥಿ ಮತ್ತು ಹಾಲಿ ಶಾಸಕ ಶ್ಯಾಮ ಘಾಟಗೆ ಅವರನ್ನು 25000  ಮತಗಳ ಅಂತರದಿಂದ ಆಯ್ಕೆಯಾದರು. ಇಲ್ಲಿ ಜೆ ಡಿ ಎಸ ಒಳ ಒಪ್ಪಂದ ಮಾಡಿಕೊಂಡಿತ್ತು ಎಂದು ಗುಸುಗುಸು 
 ಚರ್ಚೆಯಿತ್ತು. ಪತ್ರಿಕೆ ಮಾಧ್ಯಮದಲ್ಲಿ ಸುದ್ಧಿ ಮಾಡುವ ಪಿ ರಾಜೇವ  ಕಾರ್ಯ ಕ್ಷೇತ್ರದಲ್ಲಿ ಸಂಚರಿಸಿ ಮಿಂಚನ್ನು ಉಂಟು ಮಾಡಿದವರು .ಅವರು ಜಾತ್ಯತೀತ   ನಿಲುವಿನವರು.ಹೀಗಾಗಿ ಅವರು ಮುಂಬರುವ ಚುನಾವಣೆಯಲ್ಲಿ ಯಾಕೆ ಪಕ್ಷದ ಜೊತೆ ಗುರುತಿಸಿಕೊಳ್ಳುತ್ತಾರೆ ಮತ್ತು ಪಕ್ಷದ ಅಧಿಕೃತ ಹುರಿಯಳಾಗುತ್ತಾರೆ ಎಂದೆನ್ನುವದರ ಮೇಲೆ ಕುಡುಚಿ ಕ್ಷೇತ್ರದ ಭವಿಷ್ಯ ನಿರ್ಧಾರವಾಗುವದು.
ಅಭಿವೃದ್ಧಿಗಿಂತ ಪತ್ರಿಕೆ ಮಾಧ್ಯಮದಲ್ಲಿ ಸುದ್ಧಿ ಮಾಡಿದ್ದಂತೂ ನಿಜ , ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ಬೈದು ವಿವಾದಕ್ಕೀಡಾಗಿದ್ದಾರೆ.
ಸಿಡುಕುತನ ಮುಂಗೋಪ ಅಹಂಭಾವ ಹೊಂದಿದ ಪಿ ರಾಜೇವ ಅವರಿಗೆ  ಬಿ ಜೆ ಪಿ ಪಕ್ಷದ ಟಿಕೆಟು ಸಿಗುವುದು ಕಷ್ಟವೆಂದೆನ್ನಬಹುದು.
ಸಧ್ಯದ ಪರಿಸ್ಥಿತಿಯಲ್ಲಿ ಶ್ರೀ ರಾಮಲು ಅವರು ಬಿ ಜೆ ಪಿ ಯಲ್ಲಿ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ ಲ್ಲಿ    ಉತ್ತಮ ಅಭ್ಯರ್ಥಿಗಳ ಕೊರತೆ.ಶ್ಯಾಮ ಘಾಟಗೆ ಅವರ ಬದಲಾಗಿ ಇನ್ನೊಬ್ಬ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದಲ್ಲಿ ತೀವ್ರ ಪೈಪೋಟಿ ಏರ್ಪಡುವುದು ನಿಜ. ಇಲ್ಲದಿದ್ದರೆ ಬಿ ಜೆ ಪಿ ಅಭ್ಯರ್ಥಿಗೆ ಹೆಚ್ಚಿನ ಒಲವನ್ನು ಮತದಾರರು ತೋರುತ್ತಾರೆ.

ರಾಯಬಾಗ 
———————
ರಾಯಬಾಗ ಹುಲಿಯೆಂದೇ ಪ್ರತೀತಿ ಪಡೆದ ವಿ ಎಲ್ ಪಾಟೀಲ ಅವರ ಕ್ಷೇತ್ರವು ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಬಿ ಜೆ ಪಿ ಗೆ ಗೆಲುವು ಮಾಡಿಕೊಟ್ಟಿದೆ.ಪ್ರಸ್ಕತ ಹಾಲಿ ಶಾಸಕ ಶ್ರೀ ದುರ್ಯೋಧನ ಐಹೊಳೆ ಅವರು.2013  ರಲ್ಲಿ ಪಕ್ಷೇತರ ಅಭ್ಯರ್ಥಿ  ಪ್ರದೀಪ ರಾಮು ಮಾಳಗಿ ಅವರನ್ನು ಕೇವಲ 829  ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾದರು.
ರಾಯಭಾಗದಲ್ಲಿ ಈಗ ಚಿತ್ರಣ ಬದಲಾಗಿದೆ ವಿವೇಕರಾವ ಪಾಟೀಲರು ಕಾಂಗ್ರೆಸಿನ ಅಧಿಕೃತ ಎಂ ಎಲ್ ಸಿ  ಅಭ್ಯರ್ಥಿ   ಶ್ರೀ ವೀರುಕುಮಾರ ಪಾಟೀಲ ಅವರನ್ನು ಸೋಲಿಸಿದ ಪಕ್ಷೇತರ ಅಭ್ಯರ್ಥಿ  ಕುರುಬ ಸಮಾಜಕ್ಕೆ ಸೇರಿದ ಪ್ರಭಾವಿ ನಾಯಕರ ಮಗ ಶ್ರೀ ವಿವೇಕರಾವ ಪಾಟೀಲ ಅವರು ಕಾಂಗ್ರೆಸಿನ ಅಭ್ಯರ್ಥಿಯಾದರೆ ಬಿಜೆಪಿಗೆ ಗೆಲುವು ಕಬ್ಬಿಣದ ಕಡಲೆ ಎಂದೆನ್ನ ಬಹುದು. ರಾಯಭಾಗವನ್ನು ಮತ್ತೆ ಕಾಂಗ್ರೆಸಿನ ಭದ್ರ ಕೋಟೆ ಮಾಡಲು ಪಕ್ಷ ಚಿಂತಿಸುತ್ತಿದೆ. ಇಲ್ಲಿ ಪಕ್ಷ ರಾಜಕಾರಣಕ್ಕಿಂತ ಕುಟುಂಬ ರಾಜಕಾರಣ ಮುಖ್ಯ. ವಿ ಎಲ್ ಪಾಟೀಲರು ರಾಮಕೃಷ್ಣ ಹೆಗಡೆ ಅವರ ಕ್ಯಾಬಿನೆಟ್ ನಲ್ಲಿ ಕಂದಾಯ ಸಚಿವರಾಗಿದ್ದವರು. ಕಾಂಗ್ರಸ್ನಲ್ಲಿ ಗುರುತಿಸಿಕೊಂಡು ರಾಜಕಾರಣ ಮಾಡಿದ ಅಮರಸಿಂಹ ಪಾಟೀಲ ಬೆಳಗಾವಿಯ ಎರಡು ಸಲ ಲೋಕ ಸಭಾ ಸದಸ್ಯರಾಗಿದ್ದರು . ಆದರೆ ಅವರೀಗ ಬಿ ಜೆ ಪಿ ಯಲ್ಲಿದ್ದು ಮುಂಬರುವ ದಿನಗಳಲ್ಲಿ ಟಿಕೆಟು ಪಡೆಯುವ ಅಭ್ಯರ್ಥಿ ಮತ್ತು ಪಕ್ಷಗಳ ಹೊಂದಾಣಿಕೆ  ಮತ್ತು ಜಾರಕಿಹೊಳೆ ಸಹೋದರರ  ಅಭಯ ಹಸ್ತವಿದ್ದವರಿಗೆ  ಮಾತ್ರ ರಾಯಭಾಗದ  ಗೆಲುವಿನ ನಿರ್ಧಾರವೆಂದರೆ ತಪ್ಪಾಗಲಾರದು.ರಾಯಬಾಗವು ಸಧ್ಯದದ ಪರಿಸ್ಥಿತಿಯಲ್ಲಿ ಕಾಂಗ್ರೆಸಿಗೆ ಹೆಚ್ಚು ಲಾಭವಾಗಲಿದೆ.

 ಹುಕ್ಕೇರಿ
———————-
 ಹುಕ್ಕೇರಿ ಕ್ಷೇತ್ರವು 1983 ರಲ್ಲಿ ಶ್ರೀ ವಿಶ್ವನಾಥ  ಕತ್ತಿ ಅವರ ಪಾಲಾಗಿತ್ತು  ಅವರ ಅಕಾಲಿಕ ನಿಧನದ ನಂತರ ಅವರ ಮಗ ಶ್ರೀ ಉಮೇಶ ಕತ್ತಿ ಅವರು ಕಳೆದ ಮೂವತ್ತು ವರ್ಷದಿಂದ ಮೊದಲು ಜನತಾಪರಿವಾರ ನಂತರ ಕಾಂಗ್ರೆಸಿನಲ್ಲಿ ಸೇರಿ 2004  ರಲ್ಲಿ ಒಮ್ಮೆ ಮಾತ್ರ ಶಶಿಕಾಂತ ಅಕ್ಕಪ್ಪಾ ನಾಯಕ ಅವರಿಗೆ ಸೋತಿದ್ದನು  ಬಿಟ್ಟರೆ ಮುಂದೆ ಎಂದೂ ಸೋಲಿಲ್ಲದ ಸರದಾರ ಎಂದು ಖ್ಯಾತಿ ಪಡೆದ ಶ್ರೀ ಉಮೇಶ ಕತ್ತಿ ಅವರು ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಸ್ವಂತ ವರ್ಚಸು ಕಾರ್ಯ ಕ್ಷಮತೆ ಮೆಚ್ಚುವಂತದ್ದು. ಸದಾ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಅನೇಕ ಸಲ ಗಟ್ಟಿಯಾಗಿ ಧ್ವನಿ ಎತ್ತಿ ನಿಂತ ಏಕೈಕ ನಾಯಕನೆಂದರೆ ಶ್ರೀ ಉಮೇಶ ಕತ್ತಿ ಅವರು.
ಜನತಾ ಸರಕಾರದಲ್ಲಿ ಮತ್ತು ಬಿ ಜೆ ಪಿ ಸರಕಾರದಲ್ಲಿ ಮಂತ್ರಿ ಹುದ್ದೆ ಪಡೆದ ಶ್ರೀ ಉಮೇಶ ಕತ್ತಿ ಅವರು ಸ್ನೇಹ ಜೀವಿ. ಶುಗರ ಫ್ಯಾಕ್ಟರಿ , ರಸ್ತೆ ಕುಡಿಯುವ ನೀರಿನ ಸೌಲಭ್ಯವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದ್ದಾರೆ.
ಹುಕ್ಕೇರಿ ಮತ ಕ್ಷೇತ್ರವು ಈಗ ಸಂಪೂರ್ಣ ಶ್ರೀ ಉಮೇಶ ಕತ್ತಿ ಅವರ ಕೈಯಲ್ಲಿದೆ. ಅವರು ಪಕ್ಷವನ್ನು ಮೀರಿ ಬೆಳೆದ ಜನನಾಯಕರು .ಎಲ್ಲ ಸಮುದಾಯದವರ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಯಶವನ್ನು ಕಂಡ ಉಮೇಶ ಕತ್ತಿ ತಮ್ಮ ಸ್ವಂತ ಶಕ್ತಿಯಿಂದ ಮತ್ತೊಮ್ಮೆ ಜಯಭೇರಿ ಬಾರಿಸುವದರಲ್ಲಿ ಎರಡು ಮಾತಿಲ್ಲ. ಇವರ ಪ್ರತಿ ಸ್ಪರ್ಧಿಯಾಗಿ   ಸ್ಪರ್ಧಿಸಿದ   ಶ್ರೀ ಏ  ಬಿ ಪಾಟೀಲರಿಗೆ ಈಗ ಬೇರೆ ಕ್ಷೇತ್ರಗಳ ಹುಡುಕಾಟದಲ್ಲಿದ್ದಾರೆ.
ಇಲ್ಲಿ ಚುನಾವಣೆ ನೈಪಥ್ಯಕ್ಕೆ ಮಾತ್ರ ಎಂದರೆ ತಪ್ಪಾಗಲಾರದು ಶ್ರೀ ಉಮೇಶ ಕತ್ತಿ ಅವರ ಗೆಲುವು ನೂರಕ್ಕೆ ನೂರು ಖಚಿತ.

ಅರಭಾವಿ .
——————
ಒಂದೊಮ್ಮೆ ಕಾಂಗ್ರೆಸಿನ ಭದ್ರ ಕೋಟೆ ಎಂದೇ ಪರಿಗಣಿಸಿದ  ಅರಭಾವಿ ಕ್ಷೇತ್ರವು ಕೌಜಲಗಿ ಕುಲಗೋಡ ಮುಂತಾದ ದೊಡ್ಡ ದೊಡ್ಡ ಊರುಗಳನ್ನು ಹೊಂದಿದೆ. ಶ್ರೀ ವಿ ಎಸ ಕೌಜಲಗಿ ಅವರ ತವರು ಕ್ಷೇತ್ರವಾದ ಅರಭಾವಿ ಮತ ಕ್ಷೇತ್ರವು ಈಗ ಸಂಪೂರ್ಣ ಭಾಲಚಂದ್ರ ಜಾರಕಿಹೊಳಿ ಅವರ ಹತೋಟಿ ಯಲ್ಲಿದೆ ಎಂದರೆ ತಪ್ಪಾಗಲಾರದು. ಸುಮಾರು 75000  ಮತಗಳ  ನಂತರದಿಂದ ತಮ್ಮ ಪ್ರತಿಸ್ಪರ್ಧಿ ಊಟಗಿ ರಾಮಪ್ಪ ಅವರನ್ನು ಸೋಲಿಸಿ ಆಯ್ಕೆಯಾದರು  . ಇವರು ಬಿಜೆಪಿ ಸರಕಾರದಲ್ಲಿ ಮಂತ್ರಿಗಿರಿ ಪಡೆದವರು ಸಾಕಷ್ಟು ಅಭಿವೃದ್ಧಿ ಕಾರ್ಯವನ್ನು ಮಾಡಿದ್ದಾರೆ.ಒಪೆರಶನ ಕಮಲದಲ್ಲಿ ಇವರು ಬಿಜೆಪಿ ಗೆ ಬಂದವರು. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಜೊತೆಗೆ ಎಲ್ಲ ವರ್ಗದವರ ಜೊತೆ ಸೌಹಾರ್ದ ಸಂಬಂಧ ಹೊಂದಿದ್ದಾರೆ. ಇಲ್ಲಿ ಚುನಾವಣಾ ಒಂದು ನೆಪವಷ್ಟೇ . ಶಾಸನ ಸಭೆಗೆ ಭಾಲಚಂದ್ರ ಜಾರಕಿಹೋಳಿ ಅವರ ಆಯ್ಕೆ ನೂರಕ್ಕೆ ನೂರರಷ್ಟು ನಿಚ್ಚಳ.

ಗೋಕಾಕ 
————–
2004  ರಿಂದ ನಿರಂತರವಾಗಿ ಗೋಕಾಕ ಕ್ಷೇತ್ರವನ್ನು ಶ್ರೀ ರಮೇಶ ಜಾರಕಿಹೋಳಿ ಅವರು ಸಂಪೂರ್ಣ ತಮ್ಮ ಹತೋಟಿಯಲ್ಲಿ ಇಟ್ಟುಕೊಂಡಿದ್ದಾರೆ.
ಸೋಲು ಎಂಬುದು ಇವರ ಜಾಯಮಾನದಲ್ಲಿಲ್ಲ ಎಂಬುದನ್ನು ಕಳೆದ ನಾಲ್ಕು ಚುನಾವಣೆಯಲ್ಲಿ  ಸಾಬೀತುಪಡಿಸಿದ್ದಾರೆ.ರಮೇಶ ಜಾರಕಿ ಹೋಳಿ ತಮ್ಮ ಕುಟುಂಬದಲ್ಲಿಯೇ ಅತ್ಯಂತ ಸೂಕ್ಷ್ಮ ಮತ್ತು ಕೆಸುಮಾಗ್ರತೆ ಹೊಂದಿದ ಪ್ರಭುದ್ದರು. ಗೋಕಾಕ ಕ್ಷೇತ್ರವು ಕೂಡ ಕುಟುಂಬ ರಾಜಕಾರಣಕ್ಕೆ ಮತ ಹಾಕುತ್ತಿದೆ.
ಉತ್ತಮ ರಸ್ತೆ ನವೀನಕರಣಗೊಳ್ಳುತ್ತಿರುವ ಬಸ್ ಸ್ಟಾಂಡ್ ಕ್ರೀಡಾಂಗಣ ಕುಡಿಯುವ ನೀರು ಪೂರೈಕೆಗೆ ಆಧ್ಯತೆ ನೀಡಿದ್ದಾರೆ.
2013  ರ ಚುನಾವಣೆಯಲ್ಲಿ ಜೆ ಡಿ ಎಸ ಪಕ್ಷದ ಅಶೋಕ ನಿಂಗಯ್ಯ ಸ್ವಮು ಪೂಜಾರ ಅವರನ್ನು ೨೮೦೦೦ ಮತಗಳ ಅಂತರದಿಂದ ಸೋಲಿಸಿದ್ದಾರೆ.
ಸಧ್ಯ ಸಿದ್ಧರಾಮಯ್ಯನವರ ಸರಕಾರದಲ್ಲಿ ಮಂತ್ರಿಯಾಗಿರುವ ಶ್ರೀ ರಮೇಶ ಜಾರಕಿಹೊಳಿ ಅವರ ಗೆಲುವು ನಿಚ್ಚಳ.

ಯಮಕನ ಮರಡಿ.
————————
ಶ್ರೀ ಸತೀಶ ಜಾರಕಿ ಹೋಳಿ ಅತ್ಯಂತ ಸಣ್ಣ ವಯಸ್ಸಿನಲ್ಲಿ ರಾಜಕಾರಣಕ್ಕೆ ಬಂದ ಉತ್ತರ ಕರ್ನಾಟಕದ ಅತ್ಯಂತ ಪ್ರಗತಿಪರ ಮತ್ತು ಪ್ರಭಾವಿ ರಾಜಕಾರಣಿ 
ಸಾಮಾಜಿಕ ಬದ್ಧತೆ ಬುದ್ಧ ಬಸವ ಅಂಬೇಡ್ಕರವಾದವನ್ನು ಪ್ರತಿಪಾದಿಸುವ ಸೈದ್ಧಾಂತಿಕ ಹಿನ್ನೆಲೆಯಲ್ಲಿ ರಾಜಕಾರಣ ಮಾಡುವ ಗುಣ ಮಟ್ಟದ ಮತ್ತು 
ಕ್ರಿಯಾಶೀಯ್ಲ್ಯಾ ರಾಜಕಾರಣಿ. ಇವರು  ಸಿದ್ಧು   ಸರಕಾರದಲ್ಲಿ ಮತ್ರಿಗಳಾಗಿ ಹಲವು ಜನಪರ ಯೋಜನೆಗಳನ್ನು ಕಾರ್ಯ ರೂಪಕ್ಕೆ ತಂದಿದ್ದಾರೆ.
ಯಮಕನ ಮರಡಿ ಚುನಾವಣೆಯು ಕೂಡ ಕಾಂಗ್ರೆಸಿಗೆ ವಾರವಾಗಲಿದೆ. ಸತೀಶ ಜಾರಕಿ ಹೋಳಿ ಅವರು ಕಾಂಗ್ರೆಸು ತೊರೆದು ಜೆ ಡಿ ಎಸ ಸೇರಲಿದ್ದಾರೆ ಎಂಬ ಉಹಾಪೋಹವಿದ್ದರೂ ಜತುಅತೀತ ಮತಗಳ ವಿಭಜನೆಯಲ್ಲಿ ವಿರೋಧವಿರುವ ಶ್ರೀ ಸತೀಶ ಜಾರಕಿಹೊಳಿ ಅವರು ಖಂಡಿತ ಮುಂದಿನ ಚುನಾವಣೆಯಲ್ಲಿ ಯಶವನ್ನು ಕಾಣುವರು.
ಇವರಲ್ಲದೆ ಡಾ ಭೀಮಶಿ ಜಾರಕಿಹೊಳಿ ಮತ್ತು ಶ್ರೀ  ಲಖನ  ಜಾರಕಿಹೊಳಿ ಅವರು ಸಹ ರಾಜಕೀಯ ಅಖಾಡಕ್ಕೆ ಧುಮುಕುವ ಸಾಧ್ಯತೆ ಇದೆ.

ಬೆಳಗಾವಿ ಉತ್ತರ .
——————-
ಬೆಳಗಾವಿ ಉತ್ತರ ಎಂ ಈ ಎಸ ,ಕಾಂಗ್ರೆಸು  ಹೀಗೆ ಬೇರೆ ಬೇರೆ ಪಕ್ಷದವರ ಪಾಲಾಗಿದೆ. ಸಧ್ಯ ಕಾಂಗ್ರೆಸಿನ ಶ್ರೀ ಫಿರೋಜ ಸೇಠ್ ಹಾಲಿ ಶಾಸಕರು.
ಈ ಹಿಂದೆ  ರಮೇಶ ಕುಡಚಿ ಎರಡು ಬಾರಿ ಶಾಸಕರಾಗಿದ್ದರು.ನಂತರ ಶ್ರೀ ಫಿರೋಜ ಸೇಠ್ ಅವರು ಶ್ರೀ ಅನಿಲ ಪೋತದಾರ ಅವರ ಬೆಂಬಲದಿಂದ 
ಎಂ ಈ ಎಸ ದಿಂದ ಕಾಂಗ್ರೆಸಿಗೆ  ಟಿಕೆಟು ತಂದು ಎರಡು ಬಾರಿ ಶಾಸಕರಾಗಿದ್ದಾರೆ.2008  ರಲ್ಲಿ ಶಂಕರಗೌಡ ಪಾಟೀಲ್ ರನ್ನು ಅತ್ಯಲ್ಪ ಅಂತರದಿಂದ ಸೋಲಿಸಿ ಆಯ್ಕೆಯಾದರು. ಮುಂದೆ 2013  ರಲ್ಲಿ ರೇಣು ಕಿಲ್ಲೆಕರ ಅವರನ್ನು 18000  ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾದರು.
ಅಷ್ಟೊಂದು ಹೇಳಿಕೊಳ್ಳುವ ಕೆಲಸ ಮಾಡದಿದ್ದರೂ ಜನರ ಸಂಪ್ರಕ ಸಧ್ಯ ದೊರೆತಿರುವ ನಿಗಮದ ಅಧ್ಯಕ್ಷಗಿರಿ ಸ್ವಲ್ಪ ಮಟ್ಟಿಗೆ  ಕೆಲಸವನ್ನು ಮಾಡಲು ಅನುಕೂಲವಾಗಬಹುದು . ಆದರೆ ಅವರ ಕಾರ್ಯ ವೈಖರಿ ಬಗ್ಗೆ ಬೇಸತ್ತ ಜನತೆ ಬದಲಾವಣೆ ಬಯಸಿದರೆ ಮತ್ತು ಉತ್ತಮ ಬಿಜೆ ಪಿ ಅಭ್ಯರ್ಥಿ ದೊರೆತಲ್ಲಿ ಖಂಡಿತ ಚುನಾವಣೆ ಫಿರೋಜ್ ಸೇಠ್ ಅವರಿಗೆ ಗೆಲುವು ಕಷ್ಟವಾಗ ಬಹುದು. ಮುಸ್ಲಿಂ ಸಮುದಾಯದವರ ಮತಗಳ ಮೇಲೆ ಅವಲಂಬಿತರಾದ 
ಶ್ರೀ ಫಿರೋಜ್ ಸೇಠ್ ಅವರಿಗೆ ಈ ಸಲದ ಚುನಾವಣೆ ಅಗ್ನಿ ಪರೀಕ್ಷೆ ಎನ್ನಬಹುದು.ಶಂಕರಗೌಡ ಪಾಟೀಲ ಡಾ ಸತೀಶ ಪಾಟೀಲ ಮತ್ತು ಪ್ರೊ ರಾಜೇಂದ್ರ ಹರಕುಣಿ 
ಬಿಜೆಪಿ ಪ್ರಬಲ ಆಕಾಂಕ್ಷಿಗಳು.ಆದರೆ ಲಿಂಗಾಯತ ಧರ್ಮ ಮಾನ್ಯತೆಗೆ ಯಾವ ಬಿಜೆಪಿ ಪಕ್ಷದ ಶಾಸಕರು ನಾಯಕರು ಬೆಂಬಲ ಸೂಚಿಸದೆ ಇರುವ ಕಾರಣ ಹಾಗು ನಗರದ ಪ್ರಸಿದ್ಧ ಮಠಗಳ ವಿರುದ್ಧ ಸಂಸದ ಸುರೇಶ ಅಂಗಡಿ ಬೇಕಾ ಬಿತ್ತಿ ಮಾತಾಡಿ ಜನರ ಭಾವನೆಗಳಿಗೆ ನೋವು ಮಾಡಿದ್ದಾರೆ.  
ಬೆಳಗಾವಿ ದಕ್ಷಿಣ 
———————–
ಶ್ರೀ ಸಂಭಾಜಿ ಲಕ್ಶ್ಮಣ ಪಾಟೀಲ ಅವರು 2013  ರಲ್ಲಿ ಹಾಲಿ ಶಾಸಕ ಶ್ರೀ ಅಭಯ ಪಾಟೀಲ್ ಅವರನ್ನು ೬೦೦೦ ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾದವರು . ಬರಿ ಗಡಿ ತಂಟೆ ವಿವಾದ ಹುಟ್ಟಿಸಿ ಮರಾಠಿ ಭಾಷಿಕರ ಭಾವನೆಗಳನ್ನು   ಕೆರಳಿಸುವದನ್ನು ಬಿಟ್ಟರೆ ಇವರ ಕಾರ್ಯ ಶೂನ್ಯ .
ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಒಂದೇ ಗುರಿಯನ್ನು ಹೊಂದಿ ಎಲ್ಲ ಅನುಕೂಲಗಳನ್ನು ಪಡೆದು ಒಮ್ಮೊಮ್ಮೆ ಕನ್ನಡ ಪರ ಸಂಘಟನೆಗೂ ಒಳ ಒಪ್ಪಂದ ಮಾಡಿಕೊಂಡು ಬೆಳಗಾವಿಯ ಮಹಾನಗರ ಪಾಲಿಕೆಯ ಮಹಾಪುರಾತ್ವವನ್ನು ಮತ್ತು ಎಂ ಈ ಎಸ ನ ಪ್ರಶ್ನಾತೀತ ನಾಯಕನೆನ್ನುವದರಲ್ಲಿ ಎರಡು ಮಾತಿಲ್ಲ. ಆದರೆ ಬೆಳಗಾವಿ ಕ್ಷೇತ್ರಕ್ಕೆ ಅನೇಕ ಜನ ಪರ ಅಭಿವೃದ್ಧಿ ಕೆಲಸ ಆಡಿರುವ ಶ್ರೀ ಅಭಯ ಪಾಟೀಲ ಅವರು ಈ ಸ್ಲ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದಲ್ಲಿ ವಿಜಯ ಲಕ್ಷ್ಮಿ ಅವರ ಕೈ ಹಿಡಿಯುವ ಸಾಧ್ಯತೆ ಇದೆ. ಇವರನ್ನು ತಮ್ಮತ್ತ ಸೆಳೆಯಲು ಕಾಂಗ್ರೆಸು ಮತ್ತು ಬಿಜೆಪಿ ನಿರಂತರ ಪ್ರಯತ್ನ ಮಾಡುತ್ತಿವೆ.
ಬಿಜೆ ಪಿಯ ಆಂತರಿಕ ಸ್ಥಾನಿಕ ನಾಯಕರ ಕಚ್ಚಾಟದಿಂದ ಅಭಯ ಪಾಟೀಲ ಸೋಲು ಅನುಭವಿಸಬೇಕಾಯಿತು.ಈ ಸಲ ಅಭ್ಯರ್ಥಿ ಆಯ್ಕೆ ಮತ್ತು ಜನರು ನಿರ್ಧರಿಸದರೆ ಬೆಳಗಾವಿ ದಕ್ಷಿಣ ಮತ್ತೆ ಬಿಜೆಪಿ ಪಾಲಾಗುವದು.

ಬೆಳಗಾವಿ ಗ್ರಾಮಾಂತರ .
—————————
2008  ಮತ್ತು 2013  ರ ಚುನಾವಣೆಯಲ್ಲಿ ಸತತವಾಗಿ ಶ್ರೀ ಸಂಜಯ ಪಾಟೀಲ್ ಅವರು ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದಾರೆ.
2013  ರಲ್ಲಿ ಎಂ ಈ ಎಸ ಪಕ್ಷದ ಮನೋಹರ ಕಿಣಿಕರ   ಅವರನ್ನು ಅತ್ಯಂತ ಅಲ್ಪ ಮತಗಳ ಅಂತರದಲ್ಲಿ  ಸೋಲಿಸಿದ್ದಾರೆ.ಗ್ರಾಮಾಂತರ ಪ್ರದೇಶಗಳ ಭೂ ಮಾಫಿಯಾ ಮತ್ತು ಅಸಮಪರ್ಪಕ ನಿರ್ವಹಿಣೆಯಿಂದಾಗಿ  ಜನರು ಬದಲಾವಣೆ ಬಯಸಿದರೆ ತಪ್ಪಿಲ್ಲ ಎಂದೂ ಜನ ಮಾತನಾಡಿಕೊಳ್ಳುತ್ತಿದ್ದಾರೆ. 
ಬಿಜೆಪಿಯನ್ನು ಹೊರತು ಪಡಿಸಿದರೆ ಇಲ್ಲಿ ಕಾಂಗ್ರೆಸಿಗೆ ನೆಲೆಯಿಲ್ಲ. ಮರಾಠಿ ಭಾಷಿಕರ ಮತಗಳನ್ನು ಸಂಜಯ ಮತ್ತೆ ಸೆಳೆದಲ್ಲಿ ಯಶವನ್ನು ಕಾಣಬಹುದು. ಎಂ ಈ ಎಸ ಮತ್ತು ಬಿಜೆಪಿ ಮಧ್ಯ ಪೈಪೋಟಿ ಕಂಡು ಬರುತ್ತದೆ.

ಕಿತ್ತೂರು .
————-
ದೇಶದಲ್ಲಿ ಮೊಟ್ಟ ಮೊದಲ ಎಸ ಟಿ ಡಿ ಸೌಲಭ್ಯ ಹೊಂದಿಂದ ಐತಿಹಾಸಿಕ ಕ್ಷೇತ್ರ ಕಿತ್ತೂರು. ರಾಣಿ ಚೆನ್ನಮನ ಶೌರ್ಯ ಪರಾಕ್ರಮ ದೇಶವೆಂದೂ ಮರೆಯಲಾರದು.
ಕಿತ್ತೂರು ಕ್ಷೇತ್ರವನ್ನು ಐದು ಬಾರಿ ಪ್ರತಿನಿಧಿಸಿದ ಶ್ರೀ ಡಿ ಬಿ ಇನಾಮದಾರ ಅವರು ಅಂತಹ ಹೇಳಿಕೊಳ್ಳುವ ಕಾರ್ಯವನ್ನು ಮಾಡಿಲ್ಲ. 2004  ಮತ್ತು 2008 
ರಲ್ಲಿ ಕಿತ್ತೂರು ಕ್ಷೇತ್ರವನ್ನು ಮೊದಲ ಬಾರಿಗೆ ಶ್ರೀ ಸುರೇಶ ಶಿವಪುತ್ರಪ್ಪ ಮಾರಿಹಾಳ ಅವರು ತಮ್ಮ ಬಿಜೆಪಿ ಪಕ್ಷದ ಸುಪರ್ಧಿಗೆ ಒಳಪಡಿಸಿದರು. ಐದು ಸಲ  ಗೆದ್ದು ಮೂರು ಸಲ  ಸೋತು ಆದರೂ ಚುನಾವಣೆಗೆ ಸಿದ್ಧರಾಗುವ ಶ್ರೀ ಡಿ ಬಿ ಇನಾಮದಾರ ಅವರಿಗೆ ಮುಂದಿನ ಸಲ ಗೆಲವು ಕಷ್ಟ .  ಶ್ರೀ ದೊಡ್ಡಗೌಡರು ಅವರು ಬಿಜೆಪಿಗೆ ಟಿಕೆಟು ಆಕಾಂಕ್ಷಿಯಾಗಿದ್ದಾರೆ.ರೋಹಿಣಿ ಪಾಟೀಲರ ಹೆಸರು ಕೇಳಿ ಬರುತ್ತಿದೆ ಕಿತ್ತೂರು ಬಿಜೆಪಿಯಲ್ಲಿ  ಮಹಿಳಾ ಸೀಟ್ ಎಂತಾದರೆ ರೋಹಿಣಿ ಪಾಟೀಲರ ಗೆಲುವು ಸುಲಭ.
ಕಿತ್ತೂರಿನ ಎರಡು ಬರಿ ಶಾಸಕರಾದ ಶ್ರೀ ಶ್ರೀ ಸುರೇಶ ಶಿವಪುತ್ರಪ್ಪ ಮಾರಿಹಾಳ ಸಾಕಷ್ಟು ಕೆಲಸ ಮಾಡಿದ್ದಾರೆ.ಆದರೆ ಕಳೆದ ಚುನಾವಣೆಯಲ್ಲಿ ಸುಮಾರು 18000  ಮತಗಳ ಅಂತರದಲ್ಲಿ ಸೋತಿದ್ದು ಬಿಜೆಪಿ ಟಿಕೆಟು ಸಿಗುವುದು ಕಷ್ಟವೆಂಬ ವದಂತಿ ಇದೆ.ಅವರಿಗೆ ಮತ್ತೆ ಟಿಕೇಟು ಸಿಕ್ಕಲ್ಲಿ ತುರುಸಿನ ಪೈಪೋಟಿಯಾಗುವದರಲ್ಲಿ ಸಂಶಯವಿಲ್ಲ.ಆದರೆ ಏನೆ ಇದ್ದರು ಕಾಂಗ್ರೆಸಿಗೆ ಉತ್ತಮ ವಾತಾವರಣವಿಲ್ಲ. 

ಖಾನಾಪುರ 
————–
ಮರಾಠಿ ಭಾಷಿಕರ ಪ್ರಬಲ ಕ್ಷೇತ್ರ ಖಾನಾಪುರ . ಹೆಚ್ಚು ಕಡಿಮೆ ಎಂ ಈ ಎಸ ಮತ್ತು ಪಕ್ಷೇತರ  ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.ಒಮ್ಮೆ ಬಿಜೆಪಿ ಕೂಡ ತನ್ನ ಅಧೃಷ್ಟ ಪರಿಸ್ಕಸುವಲ್ಲಿ ಯಶವು ಕಂಡಿದೆ,ಖಾನಾಪುರಿನ ಕುಳುಕುಂಬಿಯಲ್ಲಿ ಮಲಪ್ರಭೆ ಉಗಮಿಸಿದ್ದಾಳೆ. ಖನಿಜ ಕಟ್ಟಿಗೆ ಸಾಗವಾನಿ ಮತ್ತೆ ಕೃಷಿಗೆ ಹೆಸರಾದ ಖಾನಾಪುರ ಭಾಷ ಗಡಿ ತಂಟೆಯಲ್ಲಿ ಸುಧಾರಿಸಿಲ್ಲ.
2013  ರ ಚುನಾವಣೆಯಲ್ಲಿ  ಎಂ ಈ ಎಸ ಮಹಾರಾಷ್ಟ್ರ  ಏಕೀಕರಣ ಸಮಿತಿ  ಶ್ರೀ.ಅರವಿಂದ ಪಾಟೀಲರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸಿನ ರಫಿಕಾ ಖಾನಪುರಿಯವರನ್ನು ಸುಮಾರು 16000  ಮತಗಳ ಅಂತರದಿಂದ ಸೋಲಿಸಿದ್ದಾರೆ 
ಉತ್ತಮ ವ್ಯಕ್ತಿ ರಾಷ್ಟ್ರೀಯ ಪಕ್ಷಕ್ಕೆ ಸಿಕ್ಕಲ್ಲಿ ಖಂಡಿತ ಕಾಂಗ್ರೆಸ ಅಥವಾ ಬಿಜೆಪಿ ಗೆಳ ಬಹುದು. ಆದರೆ ಎಂ ಈ ಎಸ ಪ್ರಬಲವಾಗಿರುವದರಿಂದ ಮತ್ತೆ ಅವರಿಗೆ ಗೆಲುವ ಹೆಚ್ಚಿನ ಸಾಧ್ಯತೆಯಿದೆ.

ಬೈಲಹೊಂಗಲ 
——————
ಬೈಲಹೊಂಗಲ ನಾಡಿನಲ್ಲಿ ಅತ್ಯಂತ ಪ್ರತಿಷ್ಠಿತ ಕ್ಷೇತ್ರವು . ಶಿವಾನಂದ ಕೌಜಲಗಿ ಅವರ ತಂದೆ ಶ್ರೀ ಹೇಮಪ್ಪ ಕೌಜಲಗಿ ಮತ್ತುಮಗ ಮಹಾಂತೇಶ ಕೌಜಲಗಿ ಅವರು ಮೂರು ತಲೆಮಾರಿನ ರಾಜಕಾರಣ ಮಾಡಿದ್ದಾರೆ. ಕೌಜಲಗಿ ಅವರ ಭದ್ರ ಕೋಟೆಯಿಂದ ಮೊದಲ ಬಾರಿಗೆ ತಮ್ಮ ವಶಕ್ಕೆ ಪಡೆದುಕೊಂಡವರು ಶ್ರೀ ವಿರುಪಾಕ್ಷಿ ( ಜಗದೀಶ ಮೆಟಗುಡ್ )  2004  ರಲ್ಲಿ ತೀವ್ರ ಪೈಪೋಟಿಯಲ್ಲಿ ಗೆಲುವನ್ನು ತಮ್ಮದಾಗಿಸಿಕೊಂಡರು. ಮುಂದೆ ಇವರ ಜಯದ ಸವಾರಿ 2008ರಲ್ಲೂ ಮುಂದುವರೆಯಿತು. ಜನಪರ ಶಾಸಕರೆಂದು ಪ್ರಸಿದ್ಧಿ ಪಡೆದು ತಕ್ಕ ಮಟ್ಟಿಗೆ ಕೆಲಸವನ್ನು ಮಾಡಿದ್ದಾರೆ. 2013  ರಲ್ಲಿ ಕೆಜಿಪಿ ಪಕ್ಷದಅಭ್ಯರ್ಥಿ  ಸಧ್ಯ ಹಾಲಿ ಶಾಸಕ ಡಾ .ವಿಶ್ವನಾಥ್ ಪಾಟೀಲ್ ಅವರು ತುಂಬಾ ಪೈಪೋಟಿಯ ಮಧ್ಯ ಬಿಜೆಪಿಯ ಶ್ರೀ ವಿರುಪಾಕ್ಷಿ ( ಜಗದೀಶ ಮೆಟಗುಡ್ )ಅವರನ್ನು 3600 
ಮತಗಳ ಅಂತರದಿಂದ ಸೋಲಿಸಿ ಶಾಸನ ಸಭೆಗೆ ಆಯ್ಕೆಯಾದರು. ಈಗ ಬೆಳಗಾವಿ ಜಿಲ್ಲಾ ಬಿಜೆಪಿ ಪಕ್ಷದ ಅಧ್ಯಕ್ಷರಾಗಿರುವ ಶಾಸಕ ಡಾ .ವಿಶ್ವನಾಥ್ ಪಾಟೀಲ್ ಅವರು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಸೌಮ್ಯ ಸ್ವಭಾದವರಾದ ಡಾ ವಿಶ್ವನಾಥ್ ಪಾಟೀಲ್ ಅವರು ಮುಂಬರುವ 2018  ರ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸಿನಲ್ಲಿ ಪ್ರಬಲ ಅಭ್ಯರ್ಥಿಸಿಕ್ಕಲ್ಲಿ ಚುನಾವಣೆಗೆ ರಂಗು ಬರುತ್ತದೆ. ಆದರೂ ಬೈಲಹೊಂಗಲ ವಿಧಾನ ಸಭೆಯ ಮತದಾರ ತನ್ನ ಗುಟ್ಟನ್ನು ಎಂದೂ ಬಿಟ್ಟು ಕೊಡುವದಿಲ್ಲ.

ಸವದತ್ತಿ ( ಎಲ್ಲಮ್ಮ )
————-
ಸವದತ್ತಿ ಅತ್ಯಂತ ಕೂತುಹಲ  ದಾಯಾದಿಗಳ ಸ್ಪರ್ಧೆ ಶ್ರೀಮಂತ ರಾಜಕಾರಣಿಗಳ ಅಬ್ಬರ ಕಂಡು ಬರುತ್ತದೆ. ಮಾಮನಿ ಮತ್ತು ಕೌಜಲಗಿ ಅವರ ಮನೆತನದ ಸ್ಪರ್ಧೆಯಿಂದ ಈಗ ಸಂಪೂರ್ಣ ಮಾಮನಿ ಮನೆಯವರ ಸೊತ್ತಾಗಿದೆ ಸವದತ್ತಿ  ಕ್ಷೇತ್ರವು..
ಸಧ್ಯದ ಶಾಸಕ   ಶ್ರೀ ಆನಂದ ಅಲಿಯಾಸ ವಿಶ್ವನಾಥ ಮಾಮನಿಯವರು ತುಂಬಾ ಕ್ರಿಯಾಶೀಲ ಶಾಸಕರು. ಒಳ್ಳೆಯ ಕೆಲಸ ಮಾಡಿದ್ದಾರೆ. ಎಲ್ಲ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.2008  ಚುನಾವಣೆಯಲ್ಲಿ   ಶ್ರೀ ಎಸ ಎಸ ಕೌಜಲಗಿ ಅವರ ವಿರುದ್ಧ  ಕೇವಲ ೪೫೦೦ ಮತಗಳ ಅಂತರದಲ್ಲಿ ಗೆದ್ದ ಶ್ರೀ ಆನಂದ ಮಾಮನಿ ಅವರು 2013   ರಲ್ಲಿ  ಕಾಂಗ್ರೆಸ   ಅಭ್ಯರ್ಥಿ ಶ್ರೀ ರವೀಂದ್ರ ಯಲಿಗಾರ ಅವರಿಗಿಂತ 16000  ಮತಗಳ ಅಂತರದಿಂದ ಗೆದ್ದಿದ್ದಾರೆ. ಉದ್ಯಮಿ ಶ್ರೀ ಆನಂದ ಚೋಪ್ರಾ  ಮತ್ತು  ಶ್ರೀ ಅವಿನಾಶ ವೈದ್ಯ ಅವರು ಕಾಂಗ್ರೆಸಿನ ಅಭ್ಯರ್ಥಿಗಳ ಆಕಾಂಕ್ಷಿಗಳಾಗಿದ್ದಾರೆ. ಹಾಗಾದಲ್ಲಿ ಜಾತಿಯ ಲೆಕ್ಕಾಚಾರ ಹಾಲಿ ಶಾಸಕರಿಗೆ ಲಾಭವಾಗುವದರಲ್ಲಿ ಎರಡು ಮಾತಿಲ್ಲ. ಸವದತ್ತಿಯಲ್ಲಿ ಮತ್ತೆ ಆನಂದ ಮಾಮನಿ ಅವರು ಬಿಜೆಪಿ ಮೂಲಕ ಮತ್ತೊಮ್ಮೆ ಜಯಭೇರಿ ಹೊಡೆಯಲಿದ್ದಾರೆ.ಬೈಲಹೊಂಗಲದ ಶ್ರೀ ಮಹಾಂತೇಶ ಕೌಜಲಗಿ ಅವರು ಸವದತ್ತಿಯಲ್ಲಿ ಕಾಂಗ್ರೆಸಿನ ಅಭ್ಯರ್ಥಿಯಾದರೆ ಸ್ವಲ್ಪ ಮಟ್ಟಿಗೆ ಪೈಪೋಟಿ ಏರ್ಪಡಬಹುದು. ಬಹುತೇಕ ಆನಂದ ಮಾಮನಿ ಅವರಿಗೆ ಗೆಲುವು ಸಾಧ್ಯವೆನಿಸಿದರೂ ಸಹಿತ ಇತ್ತೀಚಿಗೆ ಲಿಂಗಾಯತ ಧರ್ಮ ಮಾನ್ಯತೆಯ ವಿರುದ್ಧ ಹೇಳಿಕೆ ನೀಡಿ ವಿವಾದಕ್ಕೆ ಮತ್ತು ಲಿಂಗಾಯತರ ಕೋಪಕ್ಕೆ ಗುರಿಯಾಗಿದ್ದಾರೆ.ಲಿಂಗಾಯತರ ಒಳಪಂಗಡಗಳು   ಕುರುಬರು ಮುಸ್ಲಿಮರು ಈ ಸಲ ಕಾಂಗ್ರೆಸಿಗೆ ಬೆಂಬಲಿಸಿದರೂ ಅಚ್ಚರಿ ಪಡಬೇಕಿಲ್ಲ.

ರಾಮದುರ್ಗ.
————–

ರಾಮದುರ್ಗವು ದೇಶದ ಇತಿಹಾಸದಲ್ಲಿ ಸಂಸ್ಥಾನಗಳ ವಿಲೀನೀಕರದಲ್ಲಿ 1939  ರಲ್ಲಿಯೇ ಆಳರಸರ ವಿರುದ್ಧ ಬಂಡೇದ್ಧ  ಕ್ರಾಂತಿಕಾರಿ ಮತಕ್ಷೇತ್ರ 
1956 ರಲ್ಲಿ  ಅಂದಿನ ಮೈಸೂರಿನ ಕಾಂಗ್ರೆಸಿನ ಅಧ್ಯಕ್ಷರಾದ ಶ್ರೀ ಹೂಲಿ ವೆಂಕರಡ್ಡಿ ಅವರನ್ನು ಸೋಲಿಸಿ ಪ್ರಜಾ ಪಕ್ಷದ ಶ್ರೀ ಮಹದೇವಪ್ಪ ಪಟ್ಟಣ ಅವರು ಆಯ್ಕೆಯಾಗಿ ರಾಮದುರ್ಗಕ್ಕೆ ಅಧ್ಭುತ ಕೊಡುಗೆ ನೀಡಿದ್ದಾರೆ. ಮುಂದೆ ಶ್ರ ಅರ ಎಸ ಪಾಟೀಲರು ಶಾಸಕರಾದರು. 1967  ರಾಲಿ ಮತ್ತೆ ಶ್ರೀಮತಿ ಶಾರದಮ್ಮ ಪಟ್ಟಣ ಅವರು ಸಂಸ್ಥಾ ಕಾಂಗ್ರೆಸಿನ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು ನಿಜಲಿಂಪ್ಪನವರ ಬಣದಲ್ಲಿ ಗುರುತಿಸಿಕೊಂಡವರು. ಮುಂದೆ ಶ್ರೀ   ಆರ್ ಎಸ ಪಾಟೀಲರು ಶಾಸಕರಾಗಿ ಮಂತ್ರಿಯಾಗಿದ್ದರು   . 2008  ರಲ್ಲಿ ಕೇವಲ 384 ಮತಗಳ ಅಂತರದ;ಲಿ ಆಯ್ಕೆಯಾದ ಸಧ್ಯದ ಹಾಲಿ ಶಾಸಕರು ಮತ್ತು ಸರಕಾರಿ ಮುಖ್ಯ ಸಚೇತಕರು ಶ್ರೀ ಅಶೋಕ ಪಟ್ಟಣ ವರು 2013  ರಲ್ಲಿ 5000  ಮತಗಳ ಅಂತರದಲ್ಲಿ ಗೆದ್ದು ಎರಡನೆಯ ಬಾರಿಗೆ ಆಯ್ಕೆಯಾದರು.
ಕಳೆದ ಐವತ್ತು ವರುಷಗಳಲ್ಲಿ ಮಾಡದ ಅಭಿವೃದ್ಧಿಯ ಕಾರ್ಯವನ್ನು ಶ್ರೀ ಅಶೋಕ ಪಟ್ಟಣ ಅವರು ಮಾಡಿದ್ದಾರೆ ನದಿಯ ಅಗಲೀಕರಣ ಹೂಳು ಎತ್ತುವುದು ನಿರಂತರ ಕುಡಿಯುವ ನೀರಿನ ಯೋಜನೆ ರಸ್ತೆ ಚರಂಡಿ ಹಳ್ಳಿಗಳಲ್ಲಿ ನದಿಗೆ ಬ್ಯಾರೇಜು ಹೀಗೆ ವೀರಭದ್ರೇಶ್ವರ ಏತ  ನೀರಾವರಿ  ಯೋಜನೆ ಹೀಗೆ ಸಾವಿರಾರು ಕೋಟಿ ಹಣದಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡಿದ್ದಾರೆ. ತೊರಗಲ್ಲ ಮತ್ತು ಕಿಲಬನೂರು ತೂಗು ಸೇತುವೆ ಉತ್ತಮ ಕಾರ್ಯಕ್ಕೆ ಶ್ರಮಿಸಿದ್ದಾರೆ.
ಅಶೋಕ ಪಟ್ಟಣ   ಅವರು ಈ ಸಲವೂ ಗೆಲ್ಲುತ್ತಾರೆ ಎಂದೂ ಮತದಾರರ ಅಭಿಪ್ರಾಯ .ಆದರೆ ಬಿಜೆಪಿ ಅಭ್ಯರ್ಥಿ ಆಯ್ಕೆಯ ಮೇಲೆ ಅವಲಂಬಿತ ಕಳೆದ ಚುನಾವಣೆಯಲ್ಲಿ ಕೆಜೆಪಿ ಸ್ಪರ್ಧಿಸಿತ್ತು ಹೀಗಾಗಿ ಸುಮಾರು 15000  ಮತಗಳು ಬಿಜೆಪಿಗೆ ಹೊಡೆತ ಕೊಟ್ಟವು. ಈ ಸಲ ಹೇಗಾದರೂ ಮಾಡಿ ಬಿಜೆಪಿ ತರಬೇಕೆಂಬ ಪ್ರಯತ್ನದಲ್ಲಿ  ಕೇಂದ್ರ ಮತ್ತು ರಾಜ್ಯ ನಾಯಕರು ಪ್ರಯತ್ನಿಸುತ್ತಿದ್ದಾರೆ. .ಹೀಗಾಗಿ ತುರುಸಿನ ಪೈಪೋಟಿ ಏರ್ಪಡುವದರಲ್ಲಿ ಸಂದೇಶವಿಲ್ಲ. ಗೆಲುವು ನಿಶ್ಚಿತವಾದರೂ  ಹಾದಿ ತುಂಬಾ ಪ್ರಯಾಸವಾಗಿದೆ ಎಂದೇ ಹೇಳ ಬಹುದು.

ರಾಜಕಾರಣದಲ್ಲಿ  ಸಾಮಾಜಿಕ ಅಭಿವೃದ್ಧಿಗಳ ಗಮನ ಕೊಡುವ ಯಾವ ಪಕ್ಷದವನಾದರೂ ಸರಿ ಜನರು ಆಯ್ಕೆ ಮಾಡುತ್ತಾರೆ.ಚುನಾವಣೆ ಒಂದು ರೀತಿಯಲ್ಲಿ ಜೂಜು ತುರುಸಿನ ಸ್ಪರ್ಧೆಯಾಗಿದೆ . ಹಣ ಬಲ ತೋಳ್ಬಲ ಮತ್ತು ಪಾಳೆಯಗಾರರ ಸಾಮ್ರಾಜ್ಯಶಾಹಿ ಮತಗಳು ಜಿಲ್ಲೆಯಲ್ಲಿ ನಿರ್ಧಾರ ನೀಡ ಬಲ್ಲವು .
ಒಟ್ಟಾರೆ ಜಿಲ್ಲೆ ಕೆಲವರಿಗೆ ಸಿಹಿ ಇನ್ನು ಕೆಲವರಿಗೆ ಕಹಿ ಸುದ್ಧಿಕೊಡಲಿದೆ. ರಾಜ್ಯ ರಾಜಕಾರಣದಲ್ಲಿ ಬೆಳಗಾವಿ ತನ್ನದೇ   ಸ್ಥಾನಮಾನ  ಹೊಂದಿದೆ. ಸುವರ್ಣ ಸೌಧ 
ನಿರ್ಮಾಣ ಮತ್ತು ಇನ್ನು ಅನೇಕ ಅಭಿವೃದ್ಧಿಕಾರ್ಯಗಳು ಎಲ್ಲ ಸರಕಾರದಲ್ಲಿ ತಕ್ಕ ಮಟ್ಟಿಗೆ ನಡೆದಿವೆ.ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಂತಹ ಕಾರ್ಯವು ಮತ್ತೆ ಮತ್ತೆ ಜರುಗಲಿ.
——————————————————–
  ಡಾ.ಶಶಿಕಾಂತ ಪಟ್ಟಣ -ರಾಮದುರ್ಗ  

Comments