UK Suddi
The news is by your side.

ಹದಿನೆಂಟರ ತುಂಬು ಯೌವನಗಿತ್ತಿ.

ಹದಿನೆಂಟು ತುಂಬಿ ನಿಂತ 
ಹದಿ ಹರೆಯದ ಹೆಣ್ಣು,

ಫಸಲು ಬಂದು ತುಳುಕಿದಂತೆ 

ಮರದಲ್ಲಿ ಮಾವಿನ ಹಣ್ಣು.
ಗುಡುಗು ಸಿಡಿಲಿಗೆ ಪುಟಿದು ಮೊಳೆಯುವ

ಅಣಬೆಯಂತೆ ದುಷ್ಟ ಮೊಡವೆಯು

ಹರೆಯದೂರಿನ ಹಣೆಯ ಮೇಗಡೆ

ದಾಳಿ ಮಾಡಿವೆ ಬಿಡದೆ ಮೂಗನು.
ಕರಿಯ ಮೇಘವು ಜರಿದು ಬಿದ್ದಿತೊ

ಎನುವ ಅಂದದಿ ತಲೆಯ ಕೂದಲು,

ತಿದ್ದಿ ತೀಡಿದ ಹುಬ್ಬು ಬಾಗಿದೆ

ಮುದ್ದು ಗಲ್ಲವು ಉಬ್ಬಿಕೊಂಡಿದೆ
ಬಟ್ಟಲು ಕಂಗಳಿಗೆ ಕಾಡಿಗೆಯ ಅಂಚು

ಬಿರಿದ ಕೆಂದುಟಿಗಳಲ್ಲಿ ಕಾಮನೆಯ ಮಿಂಚು

ಸಂಪದ್ಭರಿತ ಹೆಣ್ತನದ ಎದೆಯಂಗಗಳನ್ನ

ಹಿಡಿದಿಟ್ಟುಕೊಂಡ ಉಡುಪುಗಳೇ ಧನ್ಯ !
ಸೌಂದರ್ಯ ಸಿರಿವಂತಿಕೆ ತುಂಬಿದ ಚೆಲುವಿಗೆ

ಕಿರು ಸೊಂಟದಲ್ಲಿ ಮಾತ್ರ ಬಡತನದ ಕಾಣಿಕೆ

ಅಂದಗಾತಿಯ ಅಂದಕೆ ಸುಗುಣಗಳ ಅಲಂಕಾರ

ಹೂ ಮನಗಳ ಸೊಗಸುಗಾತಿಯ ಮೊಗಕೆ

ಸಂಕೋಚವೇ ಶೃಂಗಾರ.

-ಕಲೆಗಾರ. ನಾವಲಗಿ,ಬಾಗಲಕೋಟ ಜಿಲ್ಲೆ

Comments