UK Suddi
The news is by your side.

ರಾಮನಗರ ಮತ್ತು ಮಾರ್ಕಂಡೆಯ ನಗರಗಳ ಅಭಿವೃದ್ಧಿಯ ಕಾಮಗಾರಿಗಳಿಗೆ ಚಾಲನೆ.

ಬೆಳಗಾವಿ:ಕರ್ನಾಟಕ ಸರ್ಕಾರದ ನೂರು ಕೋಟಿ ಅನುದಾನದಲ್ಲಿ ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಡಾವಣೆಗಳಾದ ರಾಮನಗರ ಮತ್ತು ಮಾರ್ಕಂಡೆಯ ನಗರಗಳ ಅಭಿವೃದ್ಧಿಯ ಕಾಮಗಾರಿಗಳಿಗೆ ಕರ್ನಾಟಕ ರಾಜ್ಯದ ಸಹಕಾರ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿಯವರ ನೇತೃತ್ವದಲ್ಲಿ ಭೂಮಿ ಪೂಜೆಯನ್ನು ಸಕಲ ಪೂಜಾ ವಿಧಿ ವಿಧಾನಗಳಿಂದ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ಭಾಗದ ಶಾಸಕರಾದ ಫಿರೋಜ್ ಸೇಟ್,ಲಕ್ಷ್ಮಿ ಹೆಬ್ಬಾಳಕರ್ ಹಾಗೂ ನಗರಗಳ ಮುಖಂಡರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು..

Comments