UK Suddi
The news is by your side.

ಸನ್ಮಾನ್ಯ ಮುಖ್ಯ ಮಂತ್ರಿಗಳೇ ಉತ್ತರಿಸಿರಿ.


ವೇದ ಶಾಸ್ತ್ರ ಆಗಮಗಳನ್ನು ಧಿಕ್ಕರಿಸಿದ ಮಹಾ ಸಮಾಜವಾದಿ ಸಮತೆಯ ಹರಿಕಾರ ಕ್ರಾಂತಿಕಾರಿ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಶಾಸನ ಬದ್ಧ ಮಾನ್ಯತೆ ಹಾಗೂ ಅಲ್ಪ ಸಂಖ್ಯಾತ ಸ್ಥಾನಮಾನ ನೀಡುವ ಬಗ್ಗೆ ಎದ್ದಿರುವ   ಕೂಗು ಇಂದು ನಿನ್ನೆಯದಲ್ಲ ಶತಮಾನದಷ್ಟು ಹಳೆಯದ್ದು .ವೇದ ಶಾಸ್ತ್ರ ಆಗಮಗಳನ್ನು ಸಾರಾಸಗಟಾಗಿ ತಿರಸ್ಕರಿಸಿ ಅವಕಾಶ ವಂಚಿತ ಬಡವರಿಗೆ ದಲಿತರಿಗೆ ದಮನಿತರಿಗೆ ಮಹಿಳೆಯರಿಗೆ  ಲಿಂಗಾಯತ   ಎಂಬ ಹೊಸ ಧರ್ಮವನ್ನು ಕೊಟ್ಟ ಧೀಮಂತ ನಾಯಕ. 

ವೇದಕ್ಕೆ ಒರೆಯ ಕಟ್ಟುವೆ 

ಆಗಮದ ಮೂಗ ಕೊಯ್ಯುವೆ ,

ನೋಡಯ್ಯ ಮಹಾದಾನಿ ಕೂಡಲ  ಸಂಗಮದೇವ ,

ಮಾದರ ಚೆನ್ನಯ್ಯನ ಮನೆ ಮಗ ನಾನಯ್ಯ,”
ವೇದಗಳಲ್ಲಿರುವ ವಿಷಯಗಳನ್ನು ಒಪ್ಪದ ಬಸವಣ್ಣ ಅವುಗಳಿಗೆ ಚರ್ಮದ ಒರೆ ಕಟ್ಟಿ ಹಾಕುವೆನು.ಶಾಸ್ತ್ರಕ್ಕೆ ನಿಗಳ ಅಂದರೆ ಕೀಲಿ ಹಾಕುವುದು ಅಂತ. ಆಗಮದ ಮೂಗ ಕೊಯ್ಯುವೆ., ಲಿಂಗ ಸಮಾಜ ಸಾಕ್ಷಿಯಾಗಿ ತಾನು ಮಾದಾರ ಚೆನ್ನಯನ ಮಗನು ಎಂದು ಅತ್ಯಂತ ಕಿಂಕರ ಭಾವದಿಂದ ಆತ್ಮ ನಿವೇದನೆ ಮಾಡಿಕೊಳ್ಳುತ್ತಾನೆ ಬಸವಣ್ಣ.ಸನಾತನ ವ್ಯವಸ್ಥೆ ಜಿಡ್ಡುಗಟ್ಟಿ ಮಲೀನವಾಗಿ  ಮೃತಪ್ರಾಯ ಪರಿಸ್ಥಿತಿಯಲ್ಲಿ ಬಸವಣ್ಣ ಭಾರತ ದೇಶಕ್ಕೆ ಅದರಲ್ಲೂ ದಕ್ಷಿಣ ಭಾರತದ ಮೂಲನಿವಾಸಿಗಳ ಆಶಾ ದೀಪವಾಗಿ ಬಂದನು ಬಸವಣ್ಣ .
ಲಿಂಗಾಯತ ಧರ್ಮಕ್ಕೆ ಮಾನ್ಯತೆ ದೊರೆಯಬೇಕಾದದ್ದು ನ್ಯಾಯ ಸಮ್ಮತ ಹಾಗೂ ಕಾನೂನು ಸಮ್ಮತವಾಗಿದೆ.

ತಾವೊಬ್ಬ ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ಜನರ ಮನವಿಯನ್ನು ಸ್ವೀಕರಿಸಿ ಅವರಿಗೆ ಪರಿಹಾರ ಕೊಡುವ ಜವಾಬ್ದಾರಿ ಮುಖ್ಯಮಂತ್ರಿ ಕರ್ತವ್ಯ .

ಆದರೆ ಲಿಂಗಾಯತ ಧರ್ಮಕ್ಕೆ ಶಾಸನ ಬದ್ಧ ಮಾನ್ಯತೆ  ಹಾಗು ಅಲ್ಪ ಸಂಖ್ಯಾತ ಸ್ಥಾನಮಾನ ದೊರಕಿಸಿಕೊಡಬೇಕೆನ್ನುವ ನಿಟ್ಟಿನಲ್ಲಿ ನಿಮಗೆ 

ವಿಶ್ವ ಲಿಂಗಾಯತ ಸಮಿತಿಯ ಸದಸ್ಯರು ಪದಾಧಿಕಾರಿಗಳು ದಿನಾಂಕ 23 ಮಾರ್ಚ 2017 ರಂದು ಬೆಂಗಳೂರಿನ ತಮ್ಮ ಕಚೇರಿಗೆ ಬಂದು ಲಿಂಗಾಯತ ಧರ್ಮಕ್ಕೆ ಮಾನ್ಯತೆ ಬೇಡಿಕೆಯ ಮನವಿಯ ಪ್ರತಿಯನ್ನು ಎಲ್ಲಾ ದಾಖಲೆಗಳ ಜೊತೆಗೆ ಲಗತ್ತಿಸಿ ಕೊಡಲಾಗಿತ್ತು. ಅದರ ಜ್ಞಾಪನ ಮರು ಪಾವತಿ ನಮಗೆ ತಮ್ಮ ಮುಖ್ಯ ಮಂತ್ರಿಯವರ ಕಾರ್ಯಾಲಯದಿಂದ ದಿನಾಂಕ 1 ಏಪ್ರಿಲ್ 2017 ಕ್ಕೆ ನಮಗೆ ತಲುಪಿದೆ .

ಈ ಮಧ್ಯೆ ಕರ್ನಾಟಕ ಸರಕಾರವು ತಜ್ಞರ ಸಮಿತಿಯನ್ನು ರಚಿಸಿದ್ದು  ಅಲ್ಲಿ ಕರ್ನಾಟಕ ಸರಕಾರಕ್ಕೆ ಕೊಟ್ಟಂತಹ ಎಲ್ಲ ಅರ್ಜಿ ಮನವಿಗಳನ್ನು  ಮುಂದಿಟ್ಟು 

ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕು.

ಆದರೆ ಅತ್ಯಂತ ನೋವಿನ ಸಂಗತಿಯೆಂದರೆ ಮುಖ್ಯ ಮಂತ್ರಿಗಳಿಗೆ ಅಧಿಕೃತವಾಗಿ ಕೊಟ್ಟ ಮನವಿಯ ಅರ್ಜಿಯು ಕಡತದಲ್ಲಿ ನಾಪತ್ತೆಯಾಗಿದ್ದು ನಾಡಿನ ದುರಂತದ ಸಂಗತಿಯಾಗಿದೆ .ಅಷ್ಟೇ ಅಲ್ಲ ಬೀದರ ಹುಬ್ಬಳ್ಳಿ ಗುಲಬರ್ಗಾ ಬೆಳಗಾವಿ ಮುಂತಾದ ಕಡೆಗಳಲ್ಲಿ ಕೊಟ್ಟ ಮನವಿಯ ಅರ್ಜಿಗಳು ನಾಪತ್ತೆಯಾಗಿವೆ. ಕೇವಲ ವೀರಶೈವರು ಕೊಟ್ಟ ಅರ್ಜಿಗಳು ಮಾತ್ರ ಪ್ರಮುಖವಾಗಿ ಕಾಣುತ್ತವೆ 

ಐತಿಹಾಸಿಕ ದಾಖಲೆಗಳು  ಕಾನೂನಿನ ಪತ್ರಗಳು ಉಲ್ಲೇಖ ಸಾಕ್ಶಿ ಪುರಾವೆ ಹೊಂದಿದ ಪೂರ್ಣ ಪ್ರಮಾಣದ ಅರ್ಜಿಯ ಪ್ರತಿಗಳನ್ನು ನಾವು ವಿಶ್ವ ಲಿಂಗಾಯತಸಮಿತಿಯವರು ಮುಖ್ಯ ಮಂತ್ರಿಯವರ ಕಾರ್ಯಾಲಯಕ್ಕೆ ಹಾಗೂ ಅಲ್ಪ ಸಂಖ್ಯಾತ ಕಾರ್ಯಾಲಯಕ್ಕೆ ಅವಗಾಹನೆಗೆ ಕಳುಹಿಸಿಕೊಡಲಾಗಿದೆ .

ಕಾಟಾಚಾರಕ್ಕೆ ಸಮಿತಿ ರಚಿಸಿ ಹಾಗು ನಮ್ಮೆಲ್ಲರ ಮನವಿಗಳನ್ನು ಕಸದ ಬುಟ್ಟಿಗೆ ಹಾಕಿ ಲಿಂಗಾಯತ  ಹೋರಾಟವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಬೇಡಿರಿ 

ಈ ಕೂಡಲೇ ತಮ್ಮ ಕಾರ್ಯಾಲಯದ ಒಟ್ಟು ಪ್ರತಿಗಳನ್ನು ತರಿಸಿ ಸರಿಯಾಗಿ ಪರಿಶೀಲಿಸಿ ಅವುಗಳನ್ನು ತಜ್ಞರ ಸಮಿತಿಯ ಮುಂದೆ ಇಡಬೇಕು.

ಲಿಂಗಾಯತ ಧರ್ಮಬೇಡಿಕೆ  ರಾಜಕೀಯ ದಾಳವಾಗದಿರಲಿ.

ಒಂದು ವೇಳೆ ಇಂತಹ ಅವಘಡಗಳು ಸಂಭವಿಸಿದರೆ ನಮ್ಮ ಹೋರಾಟ ನಿಶ್ಚಿತ ಮತ್ತು ನಿರಂತರ .

ಇಂತಹ ಲೋಪದೋಷಗಳನ್ನು ಸರಿಪಡಿಸಿಕೊಂಡು ತಾವು ನಮ್ಮ ಅರ್ಜಿಯನ್ನು ಈ ಕೂಡಲೇ ತರಿಸಿಕೊಂಡು ಲಿಂಗಾಯತ ಧರ್ಮ ಮಾನ್ಯತೆಗೆ 

ನ್ಯಾಯ ಒದಗಿಸಿಕೊಡಬೇಕು ತಮ್ಮಲ್ಲಿ ವಿನಂತಿಸುತ್ತೇವೆ 
ಅನಂತ ವಂದನೆಗಳು
ತಮ್ಮ ವಿಶ್ವಾಸಿಕ 

ಡಾ .ಶಶಿಕಾಂತ.ಪಟ್ಟಣ 

ಕಾರ್ಯಾಧ್ಯಕ್ಷರು

ವಿಶ್ವ ಲಿಂಗಾಯತ ಸಮಿತಿ ಧಾರವಾಡ

Comments