ಬರಿದಾಗುತ್ತಿದೆಯೆಂದು.
ಬರಿದಾಗುತ್ತಿದೆಯೆಂದು
ತೆರೆದಿರುವೆ ಹೃದಯವ
ಬಿಚ್ಚಿ ನಿಂತಿವೆ ಭಾವ ನಗ್ನವಾಗಿ.
ನದಿ ಕಾಡು ಸರೋವರ
ಮುಗಿಲು ಮಲ್ಲಿಗೆ ಪಕ್ಷಿ ಇಂಚರ
ಧರೆಗೆ ಇಳಿವ ಮಳೆ
ತುಂತುರು ಹನಿ ಆಲಿಕಲ್ಲು.
ಗುಡ್ಡದಲ್ಲಿ ಬೊರಂಗಿ ಹುಡುಕಾಟ
ಮನೆಯಲ್ಲಿ ಬೆಕ್ಕು ನಾಯಿ ಚೆಲ್ಲಾಟ
ಅಪ್ಪನ ಗದರಿಕೆಗೆ ಮುದುರುವೆ.
ಅಮ್ಮನ ಪ್ರೀತಿಗೆ ನಗುವೆ
ನಿನ್ನ ಒಲುಮೆಗೆ ಗರಿ ಗೆದರುವೆ.
ಮನ ತುಂಬಿ ಕಾಡುತ್ತಿವೆ
ಕೂಡಲು ಆಡಲು .
ಹೊರ ಹರಿಯಲು ಯತ್ನ .
ಬರಿದಾಗಲೋಲ್ಲವು ಭಾವ
ಬರಿದಾಗಲು ಬರೆಯುತ್ತಿರುವೆ
ಮತ್ತೆ ಪುಟಿದೇಳುವುದು
ವರತಿಯ ನೀರಂತೆ
ಬರುವವು ಕವನಗಳು
ತಿಳಿ ಭಾವ ನೀರು ಕುಡಿದು ಬಿಡು
ತೃಪ್ತಿಯ ತೃಷೆ ತೀರಲಿ
—————————-
ಡಾ ಶಶಿಕಾಂತ ಪಟ್ಟಣ– ಪೂನಾ