UK Suddi
The news is by your side.

15ನೇ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನ

ಶಿರಸಿ: ಸುಗಮ ಸಂಗೀತ ಪರಿಷತ್ ವತಿಯಿಂದ ರಾಜ್ಯಮಟ್ಟದ 15ನೇ ಸಮ್ಮೇಳನದ ಕಾವ್ಯ ದಿಬ್ಬಣ ಮೆರವಣಿಗೆಗೆ ನಗರಸಭೆ ಅಧ್ಯಕ್ಷ ಪ್ರದೀಪ ಶೆಟ್ಟಿ ಚಾಲನೆ ನೀಡಿದರು.

ಮಾರಿಕಾಂಬಾ ದೇವಾಲಯದ ಎದುರು ನೂರಾರು ಕಲಾವಿದರ ಸಮ್ಮುಖದಲ್ಲಿ ಕಾವ್ಯ ದಿಬ್ಬಣಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ನಾಡಿನ ಸಂಸ್ಕೃತಿ ಬಿಂಬಿಸುವ ಡೊಳ್ಳು ಕುಣಿತ, ಯಕ್ಷಗಾನ, ಕುಚಿಪುಡಿ ನೃತ್ಯಗಳು ಗಮನ ಸೆಳೆದವು. ಖ್ಯಾತ ಕಲಾವಿದರಾದ ಹಾಸಣಗಿ ಗಣಪತಿ ಭಟ್ಟ, ಕಿಕ್ಕೇರಿ ಕೃಷ್ಣಮೂರ್ತಿ, ಸಮ್ಮೇಳನದ ಸರ್ವಾಧ್ಯಕ್ಷೆ ಎಂ.ಕೆ.ಜಯಶ್ರೀ, ಎಚ್.ಎಸ್.ವೆಂಕಟೇಶ ಮೂರ್ತಿ ಹಾಗೂ ಇತರರು ಮೆರವಣಿಗೆಗೆ ಸಾಥ್ ನೀಡಿದರು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು.

ಶಿರಸಿ ನಗರದ ವಿಕಾಸಾಶ್ರಮ ಬೈಲ್ ನಲ್ಲಿ ನಡೆಯುತ್ತಿರುವ ಎರಡು ದಿನದ ಸಮ್ಮೇಳನ ನಡೆಯುತ್ತಿದೆ. ರಾಜ್ಯ ಮಟ್ಟದ ಸುಗಮ ಸಂಗೀತ ಸಮ್ಮೇಳನದಲ್ಲಿ ಸಹಸ್ರಕಂಠಗಳಿಂದ ನಾಡಗೀತೆ ಗಾಯನ ಪ್ರಸ್ತುತಪಡಿಸಲಾಯಿತು. ಲಯನ್ಸ್ ಶಾಲೆ, ಮಂಚಿಕೇರಿ ರಾಜರಾಜೇಶ್ವರಿ ಶಾಲೆ, ಎಂಇಎಸ್ ಶಾಲೆ, ಮಾರಿಕಾಂಬಾ ಪ್ರೌಢಶಾಲೆ, ಉಂಚಳ್ಳಿ, ಯಡಳ್ಳಿ, ಓಣಿಕೇರಿ ಶಾಲೆಯ 1೦೦೦ ಮಕ್ಕಳು ಭಾಗಿಯಾಗಿದ್ದಾರೆ.

Comments