ಮಾನವೀಯತೆ ಮೆರೆದ ಸಚಿವ ವಿನಯ ಕುಲಕರ್ಣಿ.
ಧಾರವಾಡ:ಧಾರವಾಡದ ಹೊಸ ಬಸ್ ನಿಲ್ದಾಣದ ಬಳಿ ಬೈಕ್ ಅಪಘಾತವಾಗಿ ರಸ್ತೆ ಮೇಲೆ ಬಿದ್ದು ಒದ್ದಾಡುತ್ತಿದ್ದ ಯುವಕನೋರ್ವನನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರು ಮಾನವೀಯತೆ ಮೆರೆದೆದಿದ್ದಾರೆ.
ಶನಿವಾರ ರಾತ್ರಿ ಸುಮಾರು ೧೦.೪೦ ರ ವೇಳೆಗೆ ಈ ಘಟನೆ ನಡೆದಿದ್ದು ಗಾಯಾಳು ಯುವಕನ ಸ್ಥಿತಿ ಗಂಬೀರವಾಗಿದ್ದು,ಮೂಲತಃ ಹಾವೇರಿಯವನು ಎಂದು ತಿಳಿದು ಬಂದಿದೆ.ಸದ್ಯ ಬೇಲೂರಿನ ಇಂಡಸ್ಟ್ರಿಯಲ್ ಒಂದರ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗುತ್ತಿದೆ.
ಹೆಸರು ಚಿಕ್ಕಪ್ಪ ಎಂದು ತಿಳಿದು ಬಂದಿದ್ದು ಕೆಲಸ ಮುಮ್ಮಿಗಟ್ಟಿಯಿಂದ ಧಾರವಾಡ ಕಡೆ ತೆರಳುವಾಗ ಹಿಂಬದಿಯಿಂದ ಚಲಿಸುತ್ತಿದ್ದ ಲಾರಿಗೆ ಗುದ್ದಿದ್ದಾನೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.