UK Suddi
The news is by your side.

ರಬಕವಿ-ಬನಹಟ್ಟಿ ತಾಲೂಕಾ ಬಿ.ಜೆ.ಪಿ ವತಿಯಿಂದ ಬೂತ್ ಸಶಕ್ತಿಕರಣ ಕಾರ್ಯಾಗಾರ

 

ರಬಕವಿ-ಬನಹಟ್ಟಿ : ತಾಲೂಕಾ ಬಿ.ಜೆ.ಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೂತ್ ಸಶಕ್ತಿಕರಣ ಕಾರ್ಯಾಗಾರದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿನ ಸರಕಾರ ಅಸ್ತತ್ವಕ್ಕೆ ಬಂದ ಮೇಲೆ ಮಹತ್ತರ ಬದಲಾವಣೆಗಳಾಗಿವೆ.ಮೋದಿ ಇಂದು ಜಾಗತೀಕ ನಾಯಕರಾಗಿದ್ದಾರೆ.ಕಾಂಗ್ರೇಸ್ಸಿಗರಿಗೆ ಮೋದಿ ಮತ್ತು ಅಮಿತ್ ಶಾ ಅವರ ಹೆಸರು ಕೇಳಿದರೆ ಬೆಚ್ಚಿ ಬೀಳುತ್ತಿದ್ದಾರೆ ಎಂದು ಬಾಗಲಕೋಟ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದು ಸವದಿ ಹೇಳಿದರು.
ಅವರು ಪಟ್ಟಣದಲ್ಲಿ ರಬಕವಿ-ಬನಹಟ್ಟಿ ತಾಲೂಕಾ ಬಿ.ಜೆ.ಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೂತ್ ಸಶಕ್ತಿಕರಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಅಮಿತ್ ಶಾ ಅವರು ರಾಷ್ಟ್ರೀಯ ಅಧ್ಯಕ್ಷರಾದ ಮೇಲೆ ಪಕ್ಷವನ್ನು ಬಲಿಷ್ಠಗೊಳಿಸಲು ಕೆಳ ಹಂತದಲ್ಲಿಯೇ ಅಂದರೆ ಬೂತ್ ಮಟ್ಟದಲ್ಲಿಯೇ ಸಶಕ್ತಗೊಳಿಸಿದರೆ.ಪಕ್ಷ ಗೆಲವು ಸಾಧಿಸುವದು ಶತ ಸಿದ್ದ ಎಂದರು.

ರಾಯಬಾಗ ಕ್ಷೇತ್ರದ ಶಾಸಕ ದುರ್ಯೋಧನ ಐಹೊಳೆ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕಾರ್ಯಕರ್ತರು ಸಂಘಟಿತರಾಗಿ ಕೆಲಸ ಮಾಡಿ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಜೆ.ಪಿ ಗೆಲ್ಲುವಂತೆ ಮಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕ ಬಿ.ಜೆ.ಪಿ ಯುವ ಮೋರ್ಚಾ ಕಾರ್ಯಕರ್ತರು,ಬಿಜೆಪಿ ಕಾರ್ಯಕರ್ತರು,ಮುಖಂಡರು ಪಾಲ್ಗೊಂಡಿದ್ದರು.

 

Comments