UK Suddi
The news is by your side.

“ಸ್ವಚ್ಛ ಇದ್ದರೆ ಹರ, ಇಲ್ಲದಿದ್ದರೆ ಬರ” ಎಂಬ ಧ್ಯೇಯ ವಾಕ್ಯದೊಂದಿಗೆ ಸ್ವಚ್ಛ ಗ್ರಾಮ ಅಭಿಯಾನ.

ಬೆಳಗಾವಿ:ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ಕನಸಿನ ಯೋಜನೆಗಳಲ್ಲಿ ಒಂದಾದ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮವನ್ನು ಬೈಲಹೊಂಗಲ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಸವದತ್ತಿ ತಾಲೂಕಿನ ಹೊಸೂರ ಗ್ರಾಮದಲ್ಲಿ ಜರುಗಿತು.


 

ಗ್ರಾಮದ ಹಿರಿಯರಾದ ದೇಮಪ್ಪಾ ಯಡಾಲ, ಅಡಿವೆಪ್ಪ ನೇಸರಗಿ, ಅಜ್ಜಯ್ಯ ಗಣಾಚಾರಿ, ಎಸ್.ಬಿ ಗಣಾಚಾರಿ ಹಾಗೂ ಮತ್ತಿತ್ತರ ಹಿರಿಯರ “ಸ್ವಚ್ಛ ಇದ್ದರೆ ಹರ, ಇಲ್ಲದಿದ್ದರೆ ಬರ” ಎಂಬ ಧ್ಯೇಯ ವಾಕ್ಯದೊಂದಿಗೆ ಸ್ವಚ್ಛ ಗ್ರಾಮ ಎಂಬ ಅಭಿಯಾನವನ್ನು ಆರಂಭಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವಿಶ್ವನಾಥ ಪಾಟೀಲ “ಬಯಲು ಮಲ ವಿಸರ್ಜನೆ ಅನಾಗರಿಕರ ಲಕ್ಷಣ. ಮನೆಗೊಂದು ಶೌಚಾಲಯ ಕಟ್ಟಿಸಿ ಬಯಲು ಮಲ ವಿಸರ್ಜನೆ ತಡೆಯಬೇಕು.ನಮ್ಮ ಗ್ರಾಮ ಸ್ವಚ್ಚವಾಗಿರಬೇಕಾದರೆ ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತಲಿನ ಪರಿಸರ ಹಾಗೂ ಸಾರ್ವಜನಿಕ ಸ್ಥಳ ಸ್ವಚ್ಚಗೊಳಿಸಿದರೆ ಇಡೀ ಊರೇ ಸ್ವಚ್ಛ, ಅಂದ ಕಾಣಿಸುತ್ತದೆ ಎಂದು ಹೇಳಿದರು. 

ಇದಕ್ಕೆ ಸಾರ್ವಜನಿಕರ ಸಹಭಾಗಿತ್ವ ಮತ್ತು ಸಹಕಾರ ಕೋರಿರುವ ಹಿನ್ನಲೆಯಲ್ಲಿ “ಸ್ವಚ್ಛ ಭಾರತ ಅಭಿಯಾನದಡಿ ಸ್ವಚ್ಛ ಬೈಲಹೊಂಗಲ ಆಂದೋಲನ” ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಬೈಲಹೊಂಗಲ ಸ್ವಾಮಿ ವಿವೇಕಾನಂದ ಯುವ ಜಾಗೃತಿ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಇಂಗಳಗಿ ರಸ್ತೆ, ಸ.ಹಿ.ಪ್ರಾ.ಕ.ಹೆ ಮಕ್ಕಳ ಶಾಲೆ ಮತ್ತು ಸರ್ಕಾರಿ ಆಸ್ಪತ್ರೆಯ ಆವರಣವನ್ನು ಸ್ವಚ್ಛಗೊಳಿಸಲಾಯಿತು.

Comments