UK Suddi
The news is by your side.

ದಾನಮ್ಮಳ ಮನೆಗೆ ಬೇಟಿ ನೀಡಿ,ಸಾಂತ್ವನ ಹೇಳಿದ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ.

ವಿಜಯಪುರ:ವಿಜಯಪುರದಲ್ಲಿ ಇತ್ತೀಚೆಗೆ ಕ್ರೂರಿಗಳಿಂದ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ದಾನಮ್ಮಳ ಮನೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ ಭೇಟಿ ನೀಡಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು ಅನಿರೀಕ್ಷಿತವಾಗಿ ನಡೆದ ಅಮಾನವೀಯ ಘಟನೆಯಿಂದ ದಾನಮ್ಮಳ ಮನೆಯವರು ಇನ್ನೂ ಕೂಡ ಚೇತರಿಸಿಕೊಂಡಿಲ್ಲ.ಅವರು ನ್ಯಾಯಕ್ಕಾಗಿ ದಾರಿ ಕಾಯುತ್ತಿದ್ದಾರೆ.ಅಪರಾಧಿಗಳು ಎಷ್ಟೇ ಪ್ರಬಲರಾಗಿದ್ದರೂ, ಯಾರೇ ಆಗಿದ್ದರೂ ಅವರೆಲ್ಲರಿಗೂ ವಯಸ್ಸಿನ ಮಿತಿಯಿಲ್ಲದೇ ನೇರ ಮರಣದಂಡನೆ ಶಿಕ್ಷೆ ನೀಡಬೇಕು. ಕಾನೂನನ್ನು ತಮ್ಮಿಷ್ಟದಂತೆ ಬಳಸುವ ಇಂತಹ ಕ್ರಿಮಿಗಳಿಗೆ ಕಠಿಣ ಶಿಕ್ಷೆ ನೀಡಿದಾಗ ಮಾತ್ರ ಸಮಾಜದಲ್ಲಿ ಅಮಾಯಕರು ಬದುಕಲು ಸಾದ್ಯ ಎಂದು ಹೇಳಿದರು.

Comments