ನಗುತ್ತೇನೆ ನಾನು.
ನಗುತ್ತೇನೆ ನಾನು .
ಅಳುವ ಮನಸಿಲ್ಲ.
ಅಳಲು ನೂರು ಕಾರಣ.
ನಗಲು ನೆಪವ ಹುಡುಕುತ್ತಿದ್ದೇನೆ.
ಕಳೆದು ಹೋಗಿರುವೆ ಗದ್ದಲದಲ್ಲಿ.
ಹುಟ್ಟು ಸಾವು ನೋವು ನಗೆಯು
ಬಣ್ಣ ಬಣ್ಣದ ಕನಸು ಹೊತ್ತು ,
ಅಳುಕ ಆತಂಕದಿ ನಡೆದಿರುವೆನು.
ನಗುವುದು ನಮ್ಮ ಧರ್ಮ
ಬೇಡ ಅಳುವ ಕರ್ಮ.
ನೋವ ಮರೆತು ನಂಜು ನುಂಗಿ
ನಗುತ ಬಾಳುವುದೆ ಜೀವ ಮರ್ಮ .
ನಗುತ್ತೇನೆಂದು ಕಸಿವಿಸಿಗೊಳ್ಳದಿರಿ .
ನಾನು ಹಾಕಿದ್ದು ನಗೆಯ ಮುಖವಾಡ.
ನೀವೂ ನಗುತ್ತಿದಿರಿ ಗೊತ್ತಿಲ್ಲ
ನಗೆ ನೈಜವೋ ಮುಖವಾಡವೋ?
ಏನೆ ಇರಲಿ ನಗುತಿರಿ ನಗಿಸಿರಿ
ಅಬ್ಬರಿಸಿ ಅಳುವು ಬಂದಾಗ
ನಗೆಯ ಮುಖವಾಡ ಹಾಕಿರಿ .
ನಗುತ್ತೇನೆ ನಾನು .
ಅಳುವ ಮನಸಿಲ್ಲ.
ಅಳಲು ನೂರು ಕಾರಣ.
ನಗಲು ನೆಪವ ಹುಡುಕುತ್ತಿದ್ದೇನೆ.
————————————
ಡಾ.ಶಶಿಕಾಂತ.ಪಟ್ಟಣ .ಪೂನಾ