UK Suddi
The news is by your side.

ಸಹನೆಯ ಸಾಕಾರ ಮೂರ್ತಿ,ಅಭಿವೃದ್ಧಿಯ ಹರಿಕಾರ ಮಹಾಂತೇಶ ಕೌಜಲಗಿ.

ಸರಳ ಸಜ್ಜನಿಕೆಯ ಧೀಮಂತ ನಾಯಕ, ಬಡವರ ಬಂಧು, ರೈತಪರ ನಾಯಕ, ಅಭಿವೃದ್ಧಿಯ ಹರಿಕಾರ, ಸಹನೆಯ ಸಾಕಾರ ಮೂರ್ತಿ,ಹೃದಯ ಶ್ರೀಮಂತಿಕೆಯ ಮಾಜಿ ಶಾಸಕ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಶಿವಾನಂದ ಕೌಜಲಗಿ ಅವರನ್ನು ಕ್ಷೇತ್ರದ್ಯಂತ ಜನ ಪ್ರೀತಿಯಿಂದ,ಅಭಿಮಾನದಿಂದ ‘ಮಹಾಂತೇಶ ಅಣ್ಣಾ’ ‘ಮಹಾಂತ ಅಣ್ಣಾ’ ಎಂದೇ ಕರೆಯುತ್ತಾರೆ.

ಸಹನೆಯ ಸಾಕಾರ ಮೂರ್ತಿ:

ಸತತ ಎರಡು ಬಾರಿ ಬೈಲಹೊಂಗಲ ಮತ ಕ್ಷೇತ್ರದ ಶಾಸಕರಾಗಿ,ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಆಗಿದ್ದಾರೆ.ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಎನ್ನದೆ ಶ್ರಮಸಿದ್ದಾರೆ. ಕ್ಷೇತ್ರದಲ್ಲಿ ಯಾರ ವಿರುದ್ಧವು ಅಸಮಧಾನ ವ್ಯಕ್ತ ಪಡಿಸದೆ ಸಹನೆ,ಸಮಾದಾನ,ನಿಷ್ಠೆಯ ಸಾಕಾರ ಮೂರ್ತಿ ಎಂದೆನಿಸಿಕೊಂಡಿದ್ದಾರೆ.
ರಾಜಕೀಯದಲ್ಲಿ ಛಾಪು ಮೂಡಿಸಿದ ಪ್ರತಿಷ್ಠಿತ ಮನೆತನ:

ಬೆಳಗಾವಿ ಜಿಲ್ಲೆಯಲ್ಲಿಯೇ ಕೌಜಲಗಿಯವರದು ಒಂದು ಪ್ರತಿಷ್ಠಿತ ಕುಟುಂಬ. ಈ ಮನೆತನದ ಹಿರಿಯರಾದ ದಿ. ಎಚ್.ವ್ಹಿ ಕೌಜಲಗಿಯವರು ಒಂದು ಬಾರಿ ಬೈಲಹೊಂಗಲ ಕ್ಷೇತ್ರದಿಂದ ಹಾಗೂ ಎರಡು ಬಾರಿ ಸವದತ್ತಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದವರು ಶ್ರೀ ವಿರೇಂದ್ರ ಪಾಟೀಲರ ನೇತ್ರತ್ವದ ಕರ್ನಾಟಕ ಸರ್ಕಾರದಲ್ಲಿ ಕಂದಾಯ ಹಾಗೂ ಕಾನೂನು ಸಚಿವರಾಗಿ ಸೇವೆ ಸಲ್ಲಿಸಿ ಅನೇಕ ಜನಪರ ಕೆಲಸ-ಕಾರ್ಯಗಳನ್ನು ಮಾಡಿದವರು.ಅಲ್ಲದೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಆರಿಸಿ ಬಂದು ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಪ್ರತಿಷ್ಠಿತ ಕೆ.ಎಲ್.ಇ ಸಂಸ್ಥೆಯ ಅಧ್ಯಕ್ಷರಾಗಿ, ಬೆಳಗಾವಿ ಲೋಕಲ್ ಬೋರ್ಡಿನ ಚೇರಮನ್‍ರಾಗಿ, ಕಿತ್ತೂರ ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ಶಾಲೆಯ ಚೇರಮನ್‍ರಾಗಿ ಸೇವೆ ಸಲ್ಲಿಸಿದವರು . ಮಲಪ್ರಭಾ ಹಿನ್ನೀರಿನಿಂದ ರೈತರ ಹೊಲಗಳಿಗೆ ನೀರಾವರಿ ಒದಗಿಸಲು ಎಂಟು ಏತ ನೀರಾವರಿ ಯೋಜನೆಗಳನ್ನು ಆರಂಭಸಿದ ಕೀರ್ತಿ ಇವರದು.

ಇವರು ಸವದತ್ತಿ ಕ್ಷೇತ್ರದಿಂದ  ವಿದಾನಸಭೆಗೆ ಆರಿಸಿ ಬಂದ ಕಾಲಕ್ಕೆ ಇವರು ಹಾಗೂ  ಶ್ರೀ ವೆಂಕರೆಡ್ಡಿ ಹೂಲಿಯವರು ಕೂಡಿಕೊಂಡು ಮಲಪ್ರಭಾ ಯೋಜನೆಗೆ ಚಾಲನೆ ನೀಡಿದರು. ಹಾಗೂ ಇವರು ಕಂದಾಯ ಮಂತ್ರಿಗಳು ಇದ್ದ ಕಾಲಕ್ಕೆ ತ್ವರಿತವಾಗಿ ಈ ಕೆಲಸ ಮುಗಿಯುವಂತೆ ಮಾಡಿದರಲ್ಲದೆ ದೇಶದಲ್ಲಿ ಪ್ರಪ್ರಥಮವಾಗಿ ಶ್ರೀ ಎಸ್.ಜಿ.ಬಾಳೇಕುಂದರಗಿ ಇಂಜನೀಯರರ ಸಹಾಯದಿಂದ ಮಲಪ್ರಭಾ ಹಿನ್ನೀರಿನಿಂದ ರೈತರ ಹೊಲಗಳಿಗೆ ಜಾಕವೆಲ್ ಮುಖಾಂತರ ನೀರಾವರಿ ಒದಗಿಸಲು ಎಂಟು ನೀರಾವರಿ ಯೋಜನೆಗಳಾದ 1) ಹೊಸೂರು-ವಕ್ಕುಂದ 2) ಮಲ್ಲೂರ-ಮಾಟೊಳ್ಳಿ 3) ಏಣಗಿ-ಹಿಟ್ಟಣಗಿ 4) ಸುತಗಟ್ಟಿ 5) ಸಿಂಗಾರಗೊಪ್ಪ 6) ಜಾಲಿಕೊಪ್ಪ 7) ಕೆಂಗಾನೂರು 8) ಬೂದಿಹಾಳ ಇವುಗಳನ್ನು ಪ್ರಾರಂಭಿಸಿದ ಕೀರ್ತಿ ಇವರದು.

ಇವರು ಸವದತ್ತಿ ತಾಲೂಕಿನ ವಿಧಾನಸಭಾ ಸದಸ್ಯರಿದ್ದಾಗ ಶ್ರೀ ಕ್ಷೇತ್ರ ಯಲ್ಲಮ್ಮನಗುಡ್ಡದ ಅಭಿವೃದ್ದಿ ಮಾಡಿದರು. ಅದೂ ಅಲ್ಲದೆ ಪ್ರಪ್ರಥಮವಾಗಿ ಶ್ರೀ ಕ್ಷೇತ್ರ ಸೊಗಲ  ದೇವಸ್ಥಾನದ ಜೀರ್ಣೋದ್ದಾರ ಕೆಲಸವನ್ನು ಕಂದಾಯ ಮಂತ್ತಿಗಳು ಇದ್ದಾಗ ಮಾಡಿದರು. 

ಈ ಭಾಗದ ಜನರ ಅನುಕೂಲತೆಗಾಗಿ ನೀರಾವರಿ ಸೌಲಭ್ಯ ಒದಗಿಸುವ ಸಲುವಾಗಿ ಸವದತ್ತಿ ತಾಲೂಕಿನ ಇಂಚಲ, ಹಿರೇಕೊಪ್ಪ, ಮಳಗಲಿ ಮರಕುಂಬಿ ಚಳಕೊಪ್ಪ ಗ್ರಾಮಗಳಲ್ಲಿ ನೀರಾವರಿ ಕೆರೆಗಳನ್ನು ಕಟ್ಟಿಸಿದ್ದಾರೆ. ಮತ್ತು ಮಲಪ್ರಭಾ ನದಿಗೆ ಜಾಲಿಕೊಪ್ಪ ಗ್ರಾಮದ ಹತ್ತಿರ ಬ್ರೀಜ್ ಕಟ್ಟಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಸಿಕೊಟ್ಟಿದ್ದಾರೆ. 

ಇವರಂತಯೇ ಇವರ ಮಗನಾದ ಶಿವಾನಂದ ಕೌಜಲಗಿಯವರು ಕರ್ನಾಟಕ ವಿಧಾನಸಭೆಗೆ ಮೂರು ಬಾರಿ ಬೈಲಹೊಂಗಲ ಮತಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಶಿಕ್ಷಣ, ಧಾರ್ಮಿಕ, ಕೃಷಿ. ಹಾಗೂ ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಸಾಕಷ್ಟು ಕೆಲಸ ಮಾಡಿ ಜನ ಸೇವೆ ಮಾಡಿದ್ದಾರೆ. ಇವರು ಶ್ರೀ ಎಚ್.ಡಿ ದೇವೆಗೌಡ ನೇತ್ರತ್ವದ ಕರ್ನಾಟಕ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿ ಇವರ ಮಾಡಿದ ಸೇವೆ ಅವಿಸ್ಮರಣೀಯ. ಇವರ ಕಾಲದಲ್ಲಿ ಹಲವಾರು ನೂತನ ಯೋಜನೆಗಳನ್ನು ಜಾರಿಗೊಳಿಸಿದ್ದು, ಹುಬ್ಬಳ್ಳಿ-ಧಾರವಾಡ ನಗರ ರಸ್ತೆಯನ್ನು ಸುಸಜ್ಜಿತಗೊಳಿಸಿದ್ದು ಜನ ಮಾನಸದಲ್ಲಿ ಇನ್ನೂ ಹಸಿರಾಗಿದೆ. ಸವದತ್ತಿ ತಾಲೂಕಿನ ಶ್ರೀ ಕ್ಷೇತ್ರ ಸೊಗಲ ಹಾಗೂ ತೆನಿಕೊಳ್ಳದಲ್ಲಿ ಯುಥ ಹಾಸ್ಟೇಲ್ ಕಟ್ಟಡ ಕಟ್ಟಿಸಿ ಯುವಕರಿಗೆ ಅನುಕೂಲ ಮಾಡಿರುವರು .ಅಲ್ಲದೆ ಇವರು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಕೇಂದ್ರ ಸರ್ಕಾರದಲ್ಲಿ ಮುಖ್ಯ ಸಚೇತಕರಾಗಿ ಕೆಲಸ ಮಾಡಿದ್ದಾರೆ.

ಇವರ ಆಡಳಿತ ಕಾಲದಲ್ಲಿ ಕಿತ್ತೂರಿನಿಂದ ಧಾರವಾಡದವರೆಗೆ ಬೈಲಹೊಂಗಲ-ಶ್ರೀ ಕ್ಷೇತ್ರ ಸೊಗಲ ಯಲ್ಲಮ್ಮನಗುಡ್ದ ರೇಲ್ವೆ ಮಾರ್ಗದ ಸಮೀಕ್ಷೆ ಮಾಡಿಸಿ ಆಗಿನ ಪ್ರಧಾನಿ ಎಚ್.ಡಿ,ದೇವೆಗೌಡರಿಂದ ಶಿಲಾನ್ಯಾಸ ಮಾಡಿಸಿರುವುದನ್ನು ಮರೆಯಲಾಗದು. ಅಲ್ಲದೆ ಕಿತ್ತೂರ ರಾಣಿ ಚನ್ನಮ್ಮ  ಬಾಲಕಿಯರ ಸೈನಿಕ  ಶಾಲೆಯ ಚೇರಮನ್‍ರಾಗಿ ಸೇವೆ ಸಲ್ಲಿಸಿ ಈಗ ಕೆ.ಎಲ್,ಇ ಸಂಸ್ಥೆಯ ಅಧ್ಯಕ್ಷರಾಗಿ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಇಂಥಹ ರಾಜಕೀಯ ಪರಂಪರೆಯ ಕುಟುಂಬದಲ್ಲಿ 1971ರ ಜನೇವರಿ 10 ರಂದು ಜನಿಸಿದವರು ಮಹಾಂತೇಶ ಶಿವಾನಂದ ಕೌಜಲಗಿ. ಇವರ ರಾಜಕೀಯ ಪ್ರವೇಶವೇ ಆಕಸ್ಮಿಕ. ಇವರ ತಂದೆ ಶಿವಾನಂದ ಕೌಜಲಗಿ ಇವರು ಬೈಲಹೊಂಗಲ ಮತಕ್ಷೇತ್ರದಿಂದ ಶಾಸಕರಾಗಿ ಆಯ್ಕೆಗೊಂಡು ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿ ಸೇವೆ ಸಲ್ಲಿಸುತ್ತಿರುವಾಲೇ ನಡೆದ ಕೇಂದ್ರ ಸರ್ಕಾರದ ಚುನಾವಣೆಗೆ ಬೆಳಗಾವಿ ಕ್ಷೇತ್ರದಿಂದ ಆರಿಸಿ ಬಂದು ಲೋಕಸಭಾ ಸದಸ್ಯರಾದರು. ಇದರಿಂದ ತೆರವಾದ ಬೈಲಹೊಂಗಲ ಮತಕ್ಷೇತ್ರದ ಉಪ ಚುನಾವಣೆಯಲ್ಲಿ ಮಹಾಂತೇಶ ಕೌಜಲಗಿ ಜನತಾದಳ ಪಕ್ಷದಿಂದ ಆರಿಸಿ ಬಂದು ಕರ್ನಾಟಕ ವಿಧಾನಸಭೆಯಲ್ಲಿಯೇ ಅತೀಕಿರಿಯ ವಯಸ್ಸಿನ ಶಾಸಕರು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಬೈಲಹೊಂಗಲ ಮತಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಹಾಗೂ ಒಂದು ಬಾರಿ ವಾಯವ್ಯ ಪದವಿಧರ ಮತಕ್ಷೇತ್ರದಿಂದ ಚುನಾಯಿತರಾಗಿ ವಿಧಾನ ಪರಿಷತ್ತಿನ ಸದಸ್ಯರಾದರು. 

ಇವರು ಸಹ ತಮ್ಮ ತಂದೆ ಹಾಗೂ ಅಜ್ಜನವರು ನಡೆದುಕೊಂಡು ಬಂದ ದಾರಿಯಲ್ಲಿಯೇ ಸಾಗುತ್ತಾ ಕ್ರೀಯಾಶೀಲರಾಗಿ ಕೆಲಸ ಮಾಡುತ್ತಾ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ಶ್ರಮಿಸಿದವರು. ಇವರು ಶಾಸಕರಿದ್ದಾಗ ಅನೇಕ ಜನಪರಕೆಲಸ-ಕಾರ್ಯಗಳನ್ನು ಮಾಡಿರುತ್ತಾರೆ.
ಅಭಿವೃದ್ಧಿಯ ಪಕ್ಷಿನೋಟ:

ಮಹಾಂತೇಶ ಕೌಜಲಗಿ ಅವರು ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಈವರೆಗೆ ಅವರು ಮಾಡಿದಂತಹ ಅಭಿವದ್ಧಿ ಕೆಲಸಗಳ ವಿವರ ಇಲ್ಲಿದೆ.
ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿಯ ಕೆಲಸಗಳು:

ಈ ಭಾಗದಲ್ಲಿ ಶಿಕ್ಷಣ ಸೌಲಭ್ಯಗಳು ಇಲ್ಲದೆ ಇರುವುದನ್ನು ಗಮನಿಸಿ ಇವರು ಹಿಂದುಳಿದ ವರ್ಗಗಳ ಹಾಗೂ ಪರಿಶಿಷ್ಠ ಜಾತಿ-ಜನಾಂಗದ ಮತ್ತು ಇತರೇ ಜನರ ಅನುಕೂಲತೆಗಾಗಿ ಸರ್ಕಾರಿ ಪ್ರೌಡಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಹಾಗೂ ಪದವಿ ಕಾಲೇಜುಗಳನ್ನು ಪ್ರಾರಂಭಿಸಿದರು. 

ಬೈಲಹೊಂಗಲ ತಾಲೂಕಿನ ದೇವಲಾಪೂರ (ಶಾಲಾ ಕಟ್ಟಡ) ವಣ್ಣೂರ ಬೈಲವಾಡ ವಕ್ಕುಂದ ನಯಾನಗರ ಕೆಂಗಾನೂರು ತುರಕರಶೀಗಿಹಳ್ಳಿ ಮುರ್ಕಿಭಾವಿ ಮಲ್ಲಾಪೂರ ಕೆ.ಎನ್ ಬೈಲವಾಡ, ಆನಿಗೋಳ ನೇಸರಗಿ, ಮೇಕಲಮರ್ಡಿ ಬೇವಿನಕೊಪ್ಪ, ಅಮಟೂರು ಚಿಕ್ಕಬೆಳ್ಳಿPಟ್ಟಿ, ಗೋವನಕೊಪ್ಪ, ಹಾಗೂ ಸವದತಿ ತಾಲೂಕಿನ ಸುತಗಟ್ಟಿ ಹಿರೇಬೂದನೂರು ಮಲ್ಲೂರ, ಚಿಕೊಪ್ಪ ಹಾರುಗೊಪ್ಪ ಗ್ರಾಮಗಳಲ್ಲಿ ಸರ್ಕಾರಿ ಪ್ರೌಡಶಾಲೆಗಳನ್ನು ಪ್ರಾರಂಭಿಸಿದರು. ಅಲ್ಲದೆ ಆ ಶಾಲೆಗಳಿಗೆ ಸುಸಜ್ಜಿತವಾದ ಕಟ್ಟಡ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಿದರು ಮತ್ತು  ಬೈಲಹೊಂಗಲ ನಗರದಲ್ಲಿ ಸರ್ಕಾರಿ ಉರ್ದು ಪ್ರೌಡಶಾಲೆ ಪ್ರಾರಂಭಿಸಿದರು. ಹಾಗೂ ಪಟ್ಟಿಹಾಳ ಕೆ.ಬಿ ಮತ್ತು ಬುಡರಕಟ್ಟಿ ಗ್ರಾಮಗಳಲ್ಲಿರುವ ಖಾಸಗಿ ಪ್ರೌಡಶಾಲೆಯನ್ನು ಪ್ರಾರಂಭಿಸಲು ಅನುಮತಿ ದೊರಕಿಸಿಕೊಟ್ಟರು.

ಬೈಲಹೊಂಗಲ ತಾಲೂಕಿನ ವಕ್ಕುಂದ ಬೈಲವಾಡ ದೊಡ್ಡವಾಡ ನೇಸರಗಿ ವಣ್ಣೂರ  ಹಾಗೂ ಸವದತ್ತಿ ತಾಲೂಕಿನ ಚಿಕ್ಕೊಪ್ಪ  ಗ್ರಾಮಗಳಲ್ಲಿ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜು ಪ್ರಾರಂಭಿಸಿದರು. ಬೈಲಹೊಂಗಲ ತಾಲೂಕಿನ  ಬೈಲಹೊಂಗಲದಲ್ಲಿ  ಹಾಗೂ ನೇಸರಗಿಯಲ್ಲಿ ಪದವಿ ಕಾಲೇಜನ್ನು ಪ್ರಾರಂಭಿಸಲಾಯಿತು. ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಸುಸಜ್ಜಿತವಾದ ಹಾಗೂ ಸ್ವತಂತ್ರವಾದ ಕಟ್ಟಡ ಆಟದ ಮೈದಾನ ಒದಗಿಸಲಾಗಿದೆ. 

ಬೈಲಹೊಂಗಲ ನಗರದಲ್ಲಿ ನವೋದಯ ಶಾಲೆಯ ಕಟ್ಟಡಕ್ಕೆ 3 ಕೋಟಿ 80 ಲಕ್ಷ ಅನುದಾನ ಕೊಡಿಸಲಾಗಿದೆ. 

ಶಿವಾನಂದ  ಕೌಜಲಗಿ ಹಾಗೂ ಮಹಾಂತೇಶ ಕೌಜಲಗಿ ಇವರ ಕಾಲದಲ್ಲಿ ಬೈಲಹೊಂಗಲ ಮತಕ್ಷೇತ್ರದಲ್ಲಿ 39 ಸರ್ಕಾರಿ ಹೈಸ್ಕೂಲ್, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು, ಗ್ರಂಥಾಲಯ, ಸಮುದಾಯ ಭವನಗಳು, ಆಸ್ಪತ್ರೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಗೊಂಡವು. ಇಷ್ಟೊಂದು ಅತೀ ಹೆಚ್ಚಿನ ಸರ್ಕಾರಿ ಪ್ರೌಡಶಾಲೆಗಳು, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳು ರಾಜ್ಯದ ಯಾವುದೇ ಭಾಗದಲ್ಲಿ ಇರುವುದಿಲ್ಲವೆಂಬುದು ಗಮನಿಸಬೇಕಾದ ಸಂಗತಿ. ಉತ್ರರ ಕರ್ನಾಟಕದಲ್ಲಿ ಏಕೈಕ ಸರ್ಕಾರಿ ಮಹಿಳಾ ಪದವಿ ಕಾಲೇಜು ಬೈಲಹೊಂಗಲದಲ್ಲಿ ಹಾಗೂ ಗ್ರಾಮೀಣ ಪ್ರದೇಶವಾದ ನೇಸರಗಿಯಲ್ಲಿ ಸರ್ಕಾರಿ ಪದವಿ ಕಾಲೇಜು ಹಾಗೂ ಸರ್ಕಾರಿ ಐ.ಟಿ.ಐ ಕಾಲೇಜು ಇರುವುದು. 

ಆರೋಗ್ಯ ಕ್ಷೇತ್ರದಲ್ಲಿ ಜನಪರ ಕೆಲಸಗಳು:

ಜನರಿಗೆ ಶಿಕ್ಷಣ ಎಷ್ಟು ಮಹತ್ವದ್ದೂ ಅಷ್ಟೇ ಮಹತ್ವದ್ದು ಆರೋಗ್ಯ ಎಂಬುದನ್ನು ಮನಗಂಡು ಶ್ರೀ ಶಿವಾನಂದ ಎಚ್ ಕೌಜಲಗಿ ಹಾಗೂ ಶ್ರೀ ಮಹಾಂತೇಶ ಶಿವಾನಂದ ಕೌಜಲಗಿ ಆರೋಗ್ಯದ ಕಡೆಗೆ ಗಮನ ಕೊಟ್ಟರು.

ಬೈಲಹೊಂಗಲ ತಾಲೂಕಿನ ಬುಡರಕಟ್ಟಿ, ಉಡಿಕೇರಿ, ವಣ್ಣೂರ ಸಂಗೊಳ್ಳಿ, ಬೆಳವಡಿ, ದೊಡವಾಡ, ಮತ್ತು ಸವದತ್ತಿ ತಾಲೂಕಿನ ಚಚಡಿ, ಇಂಚಲ, ಹೊಸೂರು ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪ್ರಾರಭಿಸಿದರು.  ಅಲ್ಲದೆ ಈ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಒಳ್ಳೆಯ ಕಟ್ಟಡಗಳನ್ನು ಸರ್ಕಾರದಿಂದ ಕಟ್ಟಿಸಿದರು. ಅಲ್ಲದೆ ಬೈಲಹೊಂಗಲದಲ್ಲಿನ ಸರ್ಕಾರಿ ಆಸ್ಪತ್ರೆಗೆ ಹೊಸ ಕಟ್ಟಡ ಮತ್ತು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಶ್ರಮಿಸಿದ್ದಾರೆ, ಬೈಲಹೊಂಗಲ ನಗರ ಹಾಗೂ ತಾಲೂಕಿನ  ಬೈಲವಾಡ, ಕೆಂಗಾನೂರು ವಕ್ಕುಂದ   ಹಾಗೂ ಸವದತ್ತಿ ತಾಲೂಕಿನ ಸುತಗಟ್ಟಿ, ಹಿರೇಬೂದನೂರು  ಗ್ರಾಮಗಳಲ್ಲಿ ಸರ್ಕಾರಿ ಆಯುರ್ವೆದ ಆಸ್ಪತ್ರೆಗಳನ್ನು ಪ್ರಾರಂಭಿಸಿದರು. ಹಾಗೂ ಸವದತ್ತಿ ತಾಲೂಕಿನ ಮಲ್ಲೂರ ಹಾಗೂ ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮಗಳಲ್ಲಿ ಹೋಮಿಯೋಪಥಿಕ್ ಆಸ್ಪತ್ರೆಗಳನ್ನು ಪ್ರಾರಂಬಿಸಲಾಯಿತು 

ರಾಜ್ಯದ ಯಾವುದೇ ಮತಕ್ಷೇತ್ರದಲ್ಲಿ ಇಷ್ಟೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಪಶು ಆರೋಗ್ಯ ಕೇಂದ್ರಗಳು ಬೇರೆ ಯಾವುದೇ ಕಡೆಗೆ ಇರುವುದಿಲ್ಲ. 

ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು:

ಜನರ ಆರೋಗ್ಯ ಎಷ್ಟು ಮಹತ್ವವೋ ಅಷ್ಠೇ ಜಾನುವಾರುಗಳ ಆರೋಗ್ಯ ಮಹತ್ವದ್ದು ಎಂಬುದನ್ನು ಅರಿತ ಇವರು ಜಾನುವಾರುಗಳ ಆರೋಗ್ಯದ ಹಿತದೃಷ್ಠಿಯಿಂದ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ, ಬೈಲವಾಡ, ಮಾಸ್ತಮರ್ಡಿ, ಕೆಂಗಾನೂರು ದೇವಲಾಪೂರ, ಹಾಗೂ ಸವದತ್ತಿ ತಾಲೂಕಿನ ಚಿಕ್ಕೊಪ್ಪ ಸುತಗಟ್ಟಿ ಮಲ್ಲೂರ ಹಾಗೂ ಮರಕುಂಬಿ ಗ್ರಾಮಗಳಲ್ಲಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳನ್ನು ಪ್ರಾಂಬಿಸಿದರು.

ಅಲ್ಲದೆ ದೊಡ್ಡವಾಡ, ನೇಸರಗಿ, ಚಚಡಿ, ಹೊಸೂರು, ಗ್ರಾಮಗಳಲ್ಲಿರುವ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿದರು. 
ಪ್ರವಾಸೋದ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆ:

ಶ್ರೀ ಕ್ಷೇತ್ರ ಸೊಗಲ, ಶ್ರೀ ಕ್ಷೇತ್ರ ತೆನಿಕೊಳ್ಳ, ಶ್ರೀ ಕ್ಷೇತ್ರ ಬೈಲವಾಡ ವರ್ತಿ ಹಾಗೂ ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಶಿವಯೋಗಮಂದಿರ ಕ್ಷೇತ್ರವನ್ನು ಅಭಿವೃದ್ದಿ ಪಡಿಸಿ ಇವು ಪ್ರವಾಸೋದ್ಯಮ ಇಲಾಖೆಯ ಭೂ ಪಟದಲ್ಲಿ ಸೇರುವಂತೆ ಮಾಡಿದರು. ಅಲ್ಲದೆ ಬೈಲಹೊಂಗಲ ತಾಲೂಕಿನ ದೇವಲಾಪೂರ, (ಕುಲಭೂಷನ ನಗರ) ಸವದತ್ತಿ ತಾಲೂಕಿನ ಮುರಗೋಡ-ಕೇಂಗೇರಿ ಗಳಲ್ಲಿ ಪ್ರವಾಸೋದ್ಯಮ ಇಲಾಖೆಯಂದ ಯಾತ್ರಿ ನಿವಾಸ ಕಟ್ಟಿಸಿದರು. 

ಸವದತ್ತಿ ತಾಲೂಕಿನ ಮುನವಳ್ಳಿ  ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಹತ್ತಿರ ಹಾಗೂ ರಾಯಭಾಗ ತಾಲೂಕಿನ ಹಾರೂಗೇರಿ ಗ್ರಾಮದ ಶ್ರೀ ಚನ್ನವೃಷಬೇಂದ್ರ ಸ್ವಾಮಿ ದೇವಸ್ಥಾನದ ಹತ್ತಿರ ಹಾಗೂ ಬೈಲಹೊಂಗಲ ತಾಲೂಕಿನ ಮಲ್ಲಾಪೂರ ಕೆಎನ್ ಗ್ರಾಮದ ಶ್ರೀ ಗಾಳೇಶ್ವರ ದೇವಸ್ಥಾನದ ಹತ್ತಿರ ಯಾತ್ರಿ ನಿವಾಸ ಕಟ್ಟಲಾಗಿದೆ. 
ಶಿವಯೋಗಮಂದಿರದ ಅಭಿವೃದ್ದಿ:

ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಶಿವಯೋಗಮಂದಿರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸ ಕಾರ್ಯಗಳನ್ನು ಮಾಡಿರುತ್ತಾರೆ. ಇವರ ಕೆಲಸ ಕಾರ್ಯಗಳಿಗೆ ಮೆಚ್ಚಿ ಶಿವಯೋಗಮಂದಿರದ ಶ್ರೀಮದ್ವೀರಶೈವ ಶಿವಯೋಗಮಂದಿರ ಸಂಸ್ಥೆಯವರು “ ಗೌರವ ಸನ್ಮಾನ” ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. 
ಮೂಲತಃ ರೈತ ಕುಟುಂಬದಿಂದಲೇ ಬೆಳೆದು ಬಂದ ಇವರು ರೈತರ ಸಂಕಷ್ಟ,ಸಮಸ್ಯೆಗಳನ್ನು ಹತ್ತಿರದಿಂದಲೇ ಕಂಡ ಮಹಾಂತೇಶ ಕೌಜಲಗಿ. ಭಾಗದ ಜನತೆ ಸತತ ಬರಗಾಲದಿಂದ ತತ್ತರಿಸಿದ ರೈತಾಪಿ ಕುಟುಂಬಗಳಿಗೆ ಮಹಾಂತೇಶ ಅವರು ಸರ್ಕಾರದ ಮೇಲೆ ಒತ್ತಡ ಹೇರಿ ಬೈಲಹೊಂಗಲ ಹಾಗು ಸವದತ್ತಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಕೆರೆಗಳಿಗೆ ನೀರು ತುಂಬಿಸುವ ಮಹೋನ್ನತ ಯೋಜನೆ ರೂಪಿಸಿದ್ದಾರೆ.
ನೀರಾವರಿ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು:

1) ಚಿಕ್ಕ ಬೂದನೂರು ನೀರಾವರಿ ಕೆಲಸ ನೆನೆಗುದಿಗೆ ಬಿದ್ದಿದ್ದು ಅದನ್ನು ಪೂರ್ಣ ಗೊಳೀಸಲಾಯಿತು,ಮಿದರಿಂದ ಸುಮಾರು 1100 ಎಕರೆ ಜಮೀನು ನೀರಾವರಿ ಆಗಿದೆ.

2) ದೇವಲಾಪೂರ ಏತ ನೀರಾವರಿ ಯೋಜನೆಗೆ 

3) ಮಾರ್ಕಂಡೇಯ ಯೋಜನೆಯ ಕೆಲಸಕ್ಕೆ ಮಂಜೂರಾತಿ ದೊರಕಿಸಿದ್ದು ಇದರಿಂದ ಬೈಲಹೊಂಗಲ ಹಾಗೂ ಸವದತ್ತಿ ತಾಲೂಕಿನ ಜಮೀನುಗಳಿಗೆ ನೀರಾವರಿ ಆಗುವದು.

4) ಬಳ್ಳಾರಿ ನಾಲಾದಿಂದ ಬೈಲಹೊಂಗಲ ಮತಕ್ಷೇತ್ರದಲ್ಲಿ ಬರುವ ಸವದತ್ತಿ ತಾಲೂಕಿನ ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಒದಗಿಸಿದೆ. 

5) ಸವದತ್ತಿ ತಾಲೂಕಿನ ಕಾರಿಮನಿ ಹತ್ತಿರ ಇಂಗುಕೆರೆ ಕೇವಲ ಮೂರು ತಿಂಗಳಲ್ಲಿ ನಿರ್ಮಿಸಿ ರಾಜ್ಯದಲ್ಲಿಯೇ ಅತ್ಯುತ್ತಮವಾದ ನೀರಾವರಿ ಕೆರೆ ಎಂದು ಹೆಸರು ಗಳಿಸಲಾಗಿದೆ.
6) ಬೈಲಹೊಂಗಲ ತಾಲೂಕಿನ ದೇವಲಾಪೂರ ಏತ ನೀರಾವರಿ, ಬೇವಿನಕೊಪ್ಪ  ಏತ ನೀರಾವರಿ ಸವದತ್ತಿ ತಾಲೂಕಿನ ಮುರಗೋಡ ಏತ ನೀರಾವರಿ ಹಾಗೂ  ಚಚಡಿ ಏತ ನೀರಾವರಿ ಯೋಜನೆ.
7) ಬೈಲಹೊಂಗಲ ತಾಲೂಕಿನ ವಕ್ಕುಂದ ಹಾಗೂ ಸವದತ್ತಿ ತಾಲೂಕಿನ ಮಾಟೊಳ್ಳಿ ಗ್ರಾಮಗಳಲ್ಲಿ ಅಮಗಂಟೇಶನ್ ಆಫ್ ಲಿಫ್ಟ ಇರಿಗೇಶನ್ ಕೆಲಸಕ್ಕೆ ಮಂಜೂರಾತಿ 
8) ಹರಿನಾಲಾ ಯೋಜನೆಗೆ ಮಂಜೂರಾತಿ ಪಡೆದು ಸಾಣಿಕೊಪ್ಪ ಗ್ರಾಮದ ಜನರಿಗೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ಸಿದ್ಧಸಮುದ್ರ, ಪಟ್ಟಿಹಾಳ, ಕೆ.ಬಿ 
9) ನಯಾನಗರ ಹತ್ತಿರ ಮಲಪ್ರಭಾ ನದಿಗೆ 1,37 ಕೋಟಿರೂಗಳ ನಮ್ಮೂರಬಾಂದಾರ ಯೋಜನೆಯಡಿಯಲ್ಲಿ ಬ್ರೀಜ್ ಕಟ್ಟಡ ಕಟ್ಟುವ ಕೆಲಸಕ್ಕೆ ಮಂಜೂರಾತಿ, ಇದರಿಂದ ಬೈಲಹೊಂಗಲ ಹಾಗೂ ಸವದತ್ತಿ ತಾಲೂಕಿನ ಹಳ್ಳಿಗಳಿಗೆ ನೀರಾವರಿ ಆಗುವುದಲ್ಲದೆ ಕುಡಿಯುವ ನೀರು ಪೂರೈಸಲಾಗುವುದು.
ಮಲಪ್ರಭಾ ನದಿಯಿಂದ ಕೆರೆಗಳನ್ನು ತುಂಬಿಸುವ ಯೋಜನೆ:

ಮಲಪ್ರಭಾ ನದಿಯಿಂದ ಕೆರೆಗಳನ್ನು ತುಂಬಿಸುವ ಯೋಜನೆ:
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿಧ್ದರಾಮಯ್ಯನವರು ಜಲಸಂಪನ್ಮೂಲ ಸಚಿವರಾದ ಶ್ರೀ ಎಂ.ಬಿ ಪಾಟೀಲರವರು, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ರಮೇಶ ಜಾರಕಿಹೊಳಿಯವರು  ಹಾಗೂ ಮಾನ್ಯ ಕಿತ್ತೂರು ಮತಕ್ಷೇತ್ರದ ಶಾಸಕರಾದ ಶ್ರೀ ಡಿ.ಬಿ ಇನಾಮದಾರ ಇವರೆಲ್ಲರ ಸಹಕಾರದಿಂದ ಮಲಪ್ರಭಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಮಾಡಲಾಗಿದೆ.
ಈ ಯೋಜನೆಗೆ ರೂ 240 ಕೋಟಿ ಅನುದಾನ ಮಂಜೂರಾಗಿರುತ್ತದೆ. ಬೈಲಹೊಂಗಲ ತಾಲೂಕಿನ ದೇವಲಾಪೂರ, ಸಾಣಿಕೊಪ್ಪ, ಬೈಲವಾಡ, ಸಿದ್ಧಸಮುದ್ರ, ಬಿದರಗಡ್ಡಿ, ದೊಡ್ಡವಾಡ ಹೊಳಿನಾಗಲಾಪೂರ, ಹಾಗೂ ಸವದತ್ತಿ ತಾಲೂಕಿನ ಇಂಚಲ,ಚಚಡಿ, ಹಾರುಗೊಪ್ಪ,ಮುರಗೋಡ,( ಮೂರು ಕೆರೆಗಳು) ಹಿರೇಬೂದನೂರು, ಮಳಗಲಿ, ಚಿಕ್ಕಬೂದನೂರು, ಹಿರೇಕೊಪ್ಪ, ಮರಕುಂಬಿ, ಗೋಂತಮಾರ, ಮುತವಾಡ, ಕೇಂಗೇರಿ ಕೆರೆಗಳು.
ಹೊಸ ನೀರಾವರಿ ಕೆರೆಗಳು:

ಬೈಲಹೊಂಗಲ ತಾಲೂಕಿನ ದೇವಲಾಪೂರ, ಸವದತ್ತಿ ತಾಲೂಕಿನ ಸೊಗಲ, ಸುತಗಟ್ಟಿ, ಹಿಟ್ಟಣಗಿ, ಇಂಚಲ, ಹಾರುಗೊಪ್ಪ, ಹೊಸೂರು ಚಿಕ್ಕಬೂದನೂರು. ಹೊಸ ನೀರಾವರಿ ಕೆರೆಗಳನ್ನು ಮಾಡಿ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. 

ಬಡ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯಗಳು:
ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆಯಿಂದ ಸವದತ್ತಿ ತಾಲೂಕಿನ ಮುರಗೋಡ ಹಾರುಗೊಪ್ಪ ಚಿಕ್ಕೊಪ್ಪ ಚಚಡಿ ಸುತಗಟ್ಟಿ ಹಾಗೂ ಬೈಲಹೊಂಗಲ ತಾಲೂಕಿನ ದೊಡ್ಡವಾಡ ನಯಾನಗರ ಗ್ರಾಮಗಳಲ್ಲಿ ವಿದ್ಯಾರ್ಥಿಗಳ ಅನುಕೂಲತೆಗಾಗಿ ವಸತಿ ನಿಲಯ ಪ್ರಾರಂಬಿಸಿದೆ ಹಾಗೂ ಸುಸಜ್ಜಿತವಾದ ಕಟ್ಟಡಗಳನ್ನು ಕಟ್ಟಿಸಲಾಗಿದೆ. 
ಪರಿಶಿಷ್ಠ ಜಾತಿ ಹಾಗೂ ಪಂಗಡದ ಇಲಾಖೆಯಿಂದ ಬೈಲಹೊಂಗಲ, ದೊಡ್ಡವಾಡ ವಕ್ಕುಂದ ವಣ್ಣೂರ ಬೇವಿನಕೊಪ್ಪ ನೇಸರಗಿ ಮೇಕಲಮರ್ಡಿ ಚಿಕ್ಕಬೆಳ್ಳಿಕಟ್ಟಿ ಗ್ರಾಮಗಳಲ್ಲಿ ವಿದ್ಯಾರ್ಥಿಗಳ ಅನುಕೂಲತೆಗಾಗಿ ವಸತಿ ನಿಲಯ ಪ್ರಾರಂಬಿಸಿದೆ ಹಾಗೂ ಸುಸಜ್ಜಿತವಾದ ಕಟ್ಟಡಗಳನ್ನು ಕಟ್ಟಿಸಲಾಗಿದೆ. 
ಬಾಂದಾರ ನಿರ್ಮಾಣ:
ಬೈಲಹೊಂಗಲ ತಾಲೂಕಿನ ನಯಾನಗರ ಹತ್ತಿರ ರೂ 3 ಕೋಟಿ ಅನುದಾನದಲ್ಲಿ ಬಾಂದಾರ ನಿರ್ಮಾಣ. ಬೇವಿನಕೊಪ್ಪ ಗ್ರಾಮದ ಹತ್ತಿರ ರೂ 5 ಕೋಟಿ ಅನುದಾನದಲ್ಲಿ ಬಾಂದಾರ ನಿರ್ಮಾಣ.

ಹೊಸ ಬ್ರೀಜ್:
ಬೈಲಹೊಂಗಲ ತಾಲೂಕಿನ ಬೇವಿನಕೊಪ್ಪ ಹಾಗೂಸಂಗೊಳ್ಳಿ ಗ್ರಾಮಗಳ ಮದ್ಯ ಹೊಸ ಬ್ರೀಜ್ ನಿರ್ಮಾಣಕ್ಕೆ ರೂ 40 ಕೋಟಿ ಅನುದಾನ ಮಂಜೂರು ಮಾಡಿಸಲಾಗಿದೆ.ಈ ಕಾಮಗರಿಗಳನ್ನು ಕೂಡಲೇ ಪ್ರಾರಂಭಿಸಲಾಗುವುದು.
ಸೈನಿಕ ಶಾಲೆ:
ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನ ಹೆಸರಿನಿಂದ ಸೈನಿಕ ಶಾಲೆ ಮಂಜೂರಾತಿಗಾಗಿ 150 ಕೋಟಿ ರೂ ಅನುದಾನ ಬಿಡುಗಡೆ ಮಾಡಿಸಲಾಗಿದೆ. ಈ ಕಾಮಗರಿಗಳನ್ನು ಕೂಡಲೇ ಪ್ರಾರಂಭಿಸಲಾಗುವುದು 

ಯಾತ್ರಿ ನಿವಾಸ:
ಬೈಲಹೊಂಗಲ ತಾಲೂಕಿನ ದೇವಲಾಪೂರ,( ಜೈನ ಬಸ್ತಿ)  ( ರೂ 50 ಲಕ್ಷ) ಬೈಲವಾಡ( ರೂ 50 ಲಕ್ಷ) ಸವದತ್ತಿ ತಾಲೂಕಿನ ಇಂಚಲ ( ರೂ 75 ಲಕ್ಷ) ಮುರಗೋಡ ( 50 ಲಕ್ಷ) ಸೊಗಲ ( 75 ಲಕ್ಷ)  ಸೊಗಲ ( 50 ಲಕ್ಷ) ಹಾರೂಗೇರಿ ಮತ್ತು ಮುನವಳ್ಳಿ ಗ್ರಾಮದಲ್ಲಿ ಯಾತ್ರಿ ನಿವಾಸ ನಿರ್ಮಿಸಲಾಗಿದೆ.

ಕೆ.ಇ.ಬಿ ಹೊಸ ಸ್ಟೇಶನ್:
ಬೈಲಹೊಂಗಲ ತಾಲೂಕಿನ ಬೈಲಹೊಂಗಲ ( 110 ಕೆ.ವಿ ) ಸಂಗೊಳ್ಳಿ ( 33 ಕೆವಿ ) ಸವದತ್ತಿ ತಾಲೂಕಿನ ಮುರಗೋಡ ( 33 ಕೆ.ವಿ) ಪ್ರಾರಂಭಿಸಿ ಆ ಭಾಗದ ಜನರಿಗೆ ಮತ್ತು ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. 

ಬೈಲಹೊಂಗಲ ನಗರದ  ಅಭಿವೃದ್ದಿ:
ಬೈಲಹೊಂಗಲ ನಗರದಲ್ಲಿ ಕಿತ್ತೂರ ಚನ್ನಮ್ಮನ ಸಮಾಧಿ ಅಭಿವೃದ್ದಿಗೆ ರೂ 2 ಕೋಟಿ ಅನುದಾನ ಬಿಡುಗಡೆ. ಬೈಲಹೊಂಗಲ ರಸ್ತೆ ಅಭಿವೃದ್ದಿಗಾಗಿ ಪುರಸಭೆಗೆ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಅನುದಾನವಾಗಿ ರೂ 3 ಕೋಟಿ ಬಿಡುಗಡೆ,ಬೈಲಹೊಂಗಲ ಬಸ್ ಸ್ಟ್ಯಾಂಡ ನವೀಕರಣಕ್ಕೆ 4.50 ಕೋಟಿ ರೂ ಬಿಡುಗಡೆ,ಬೈಲಹೊಮಗಲ ಎಸ್‍ಸಿಪಿ/ಟಿಎಸ್‍ಪಿ ಪುರಸಭೆಗೆ ವಿಶೇಷ ಅನುದಾನವಾಗಿ 2 ಕೋಟಿ ರೂ. ಬಿಡುಗಡೆ,ಯು.ಜಿ ಡಿ ಒಳಚರಂಡಿ ಹಿಂದಿನ ಸರ್ಕಾರ ಮಂಜೂರ ಮಾಡಿತ್ತು. ನಮ್ಮ ಸರ್ಕಾರ ಬಂದ ನಂತರ ಅದಕ್ಕೆ ಬೇಕಾಗುವ ಅನುದಾನ ಒದಗಿಸಿ ಕಾಮಗಾರಿ ಪ್ರಾರಂಭ ಈ ಕಾಮಗಾರಿ ಈಗ ಮುಕ್ತಾಯ ಹಂತದಲ್ಲಿದೆ. ಬೈಲಹೊಂಗಲ ನಗರದ ಶ್ರೀ ಬಸವೇಶ್ವರ ಆಶ್ರಯ ಕಾಲೋನಿಯಲ್ಲಿ 1300 ಮನೆಗಳನ್ನು ನಿರ್ಮಿಸಿ ಬಡ ಜನರಿಗೆ ಹಂಚಿಕೆ ಮಾಡಲಾಗಿದೆ.

ರಸ್ತೆಗಳ ನಿರ್ಮಾಣ:
ಬೈಲಹೊಂಗಲ ತಾಲೂಕಿನ  ಮೂಗಬಸವ ಹಳೆ ಮೂಗಬಸವ ರಸ್ತೆ ರೂ 60 ಲಕ್ಷಗಳಲ್ಲಿ ನಿರ್ಮಾಣ ಬೈಲಹೊಂಗಲ ತಾಲೂಕಿನ ದೇವಲಾಪೂರ-ನೇಗಿನಹಾಳ ರಸ್ತೆ ರೂ 75 ಲಕ್ಷಗಳಲ್ಲ ನಿರ್ಮಾಣ,ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ರಸ್ತೆ ನಿರ್ಮಾಣ,ಬೈಲಹೊಂಗಲ ನಗರದ ಮುಸ್ಮಿಂ ಸ್ಮಶಾನ ರಸ್ತೆ ರೂ 25 ಲಕ್ಷಗಳಲ್ಲಿ ಅಭಿವೃದ್ದಿ,ಸವದತ್ತಿ ತಾಲೂಕಿನ  ಅಸುಂಡಿ ಹಳೆ ಅಸುಂಡಿ ರಸ್ತೆ ರೂ 50 ಲಕ್ಷಗಳಲ್ಲಿ ನಿರ್ಮಾಣ,ಸವದತ್ತಿ ತಾಲೂಕಿನ ಅಸುಂಡಿ – ಹಳೆ ಸುತಗಟ್ಟಿರಸ್ತೆ ರೂ 75 ಲಕ್ಷಗಳಲ್ಲಿ ನಿರ್ಮಾಣ ಮಾಡಲಾಗಿದೆ.
ಹೊಲಕ್ಕೆ ಹೋಗುವ ರಸ್ತೆಗಳ ಸುಧಾರಣೆ:-

ರೈತರಿಗೆ ಹಾಗೂ ಕೃಷಿ ಕೂಲಿಕಾರರಿಗೆ ಅನುಕೂಲವಾಗಲು ಹೋಲಗಳಿಗೆ ಹೋಗುವ ರಸ್ತೆ ಸುಧಾರಣೆ ಮಾಡಲಾಗಿದೆ. 
1) ಹೊಳಿನಾಗಲಾರ -ನೇಗಿನಹಾಳ ರಸ್ತೆ ಸುಧಾರಣೆ
2) ಗುಡದೂರ ಗ್ರಾಮದ ಹೊಲಕ್ಕೆ ಹೋಗುವ ರಸ್ತೆ ಸುಧಾರಣೆ
3) ಸಂಗೊಳ್ಳಿ ಗ್ರಾಮದ ಹೊಲಕ್ಕೆ ಹೋಗುವ ರಸ್ತೆ ಸುಧಾರಣೆ
4) ಗುಡಕಟ್ಟಿ – ಗೋವನಕೋಪ್ಪ ರಸ್ತೆ ನಿರ್ಮಾ
5) ಚಿಕ್ಕಬೆಳ್ಳಿಕಟ್ಟಿ – ಕಲ್ಲೂರ ರಸ್ತೆ ಖಡೀಕರಣ
6) ಮೇಕಲಮರ್ಡಿ ಗ್ರಾಮದ ಹೊಲಕ್ಕೆ ಹೋಗುವ ರಸ್ತೆ ನಿರ್ಮಾಣ 

ನಬಾರ್ಡ ರಸ್ತೆಗಳು ಸುಧಾರಣೆ:
1) ಚಿವಟಗುಂಡಿ- ದೇವಲಾಪೂರ –ಅಮಟೂರ – ನಯಾನಗರ ರಸ್ತೆ 24.63 ಲಕ್ಷ ರೂ 
2) ಕರಿಕಟ್ಟಿ- ತರಕರಶಿಗಿಹಳ್ಳಿ ರಸ್ತೆ 53.86 ಲಕ್ಷ ರೂ
3) ಕೆಂಗಾನೂರು -ಸಂಗೊಳ್ಳಿ-ಗುಡದೂರ -ಹೊಳಿನಾಗಲಾರ ರಸ್ತೆ 36.67 ಲಕ್ಷರೂ 
4) ನೇಸರಗಿ-ಮೇಕಲಮರ್ಡಿ ರಸ್ತೆ 16 ಲಕ್ಷ ರೂ
5) ದೊಡ್ಡವಾಡ-ಕರಿಕಟ್ಟಿ –ವಾಯಾ ಸುತಗಟ್ಟಿ ರಸ್ತೆ 23.71 ಲಕ್ಷರೂ 
6) ಬುಡರಕಟ್ಟಿ-ಚಿಕ್ಕಬೆಳ್ಳಿಕಟಿ-ದೊಡವಾಡ ರಸ್ತೆ 20.42 ಲಕ್ಷರೂ
7)ದೊಡವಾಡ-ಗೋವನಕೊಪ್ಪ-ತಡಕೋಡ ರಸ್ತೆ 33.01
8) ಚಚಡಿ- ವಣ್ಣೂರ ರಸ್ತೆ ಸುಧಾರಭೆ 80 ಲಕ್ಷ ರೂ
9) ಮರಕುಂಬಿ – ಇಂಚಲ ರಸ್ತೆ ಸುಧಾರಣೆ 80 ಲಕ್ಷ ರೂ
10) ಹೊಸೂರು- ಸೊಗಲ ರಸ್ತೆ ಸುಧಾರಣೆ 35 ಲಕ್ಷ ರೂ
11) ಮುರಗೋಡ-ಮುನವಳ್ಳಿ ರಸ್ತೆ ಸುಧಾರಣೆ 40 ಲಕ್ಷ ರೂ
12) ಮುರಗೋಡ – ಇಂಚಲ ರಸ್ತೆ ಸುಧಾರಣೆ 60 ಲಕ್ಷ ರೂ. 

ಗ್ರಂಥಾಲಯಗಳು:
ಬೈಲಹೊಂಗಲ ತಾಲೂಕಿನ ಬೈಲಹೊಂಗಲ ಬೆಳವಡಿ ಉಡಿಕೇರಿ ಬೈಲವಾಡ ದೊಡ್ಡವಾಡ ಪಟ್ಟಿಹಾಳ ಕೆ.ಬಿ ಸವದತ್ತಿ ತಾಲೂಕಿನ ಮಲ್ಲೂರ ಹಾಗೂ ಸುತಗಟ್ಟಿಯಲ್ಲಿ ಗ್ರಂಥಾಲಯ ಪ್ರಾರಂಬಿಸಿದೆ. 
ಕುಡಿಯುವ ನೀರಿನ ಯೋಜನೆ:
ಬೈಲಹೊಂಗಲ ತಾಲೂಕಿನ ದೇವಲಾಪೂರ, ಅಮಟೂರು ಸೇರಿದಂತೆ 19 ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆ ಮಾಡಲಾಗಿದೆ.ಮೂಗಬಸವ, ಬೂದಿಹಾಳ  ಮತ್ತು ಉಡಿಕೇರಿ ಹಾಗೂ ಮುರಗೋಡ –ಕೆಂಗೇರಿ ಶ್ರೀ ಚಿದಂಬರೇಶ್ವರ ದೇವಸ್ಥಾನ ಮತ್ತು ದೇವಲಾಪೂರ ಜೈನ ಬಸ್ತಿ ಹತ್ತಿರ ಮತ್ತಿ ಶ್ರೀ ಕ್ಷೇತ್ರ ಇಂಚಲ ಗ್ರಾಮ.ಗ್ರಾಮಗಳಲ್ಲಿ ಕುಡಿಯುವ ನೀರಿನ ಯೋಜನೆ,ಬೆಳವಡಿ ಗ್ರಾಮದಲ್ಲಿ ಕುಡಿಯುವ ನೀರಿನ ಯೋಜನೆ,ಸುತಗಟ್ಟಿ-ಹಿಟ್ಟಣಗಿ ಗ್ರಾಮದಲ್ಲಿ ಕುಡಿಯುವ ನೀರಿನ ಯೋಜನೆ ಮಾಡಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರ ಮೂರ್ತಿ ಪ್ರತಿಷ್ಠಾಪನೆ:
1) ಬೈಲಹೊಂಗಲ ನಗರದಲ್ಲಿ ಕಿತ್ತೂರ ರಾಣಿ ಚನ್ನಮ್ಮನ ಆಶ್ವಾರೂಡ ಪುತ್ಥಳಿಯನ್ನು ಕೂಡ್ರಿಸಲು 12.20 ಲ್ಷ ರೂಗಳ ಮಂಜೂರಾತಿ.
2) ಬೈಲಹೊಂಗಲ ನಗರದಲ್ಲಿ ಬೆಳವಡಿ ಮಲ್ಲಮ್ಮನ ಕಂಚಿನ ಮೂರ್ತಿಯನ್ನು ಕೂಡ್ರಿಸಲು 12.50 ಲಕ್ಷ ರೂ ಗಳ ಮಂಜೂರಾತಿ 
3) ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಶೂರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಕೂಡ್ರಿಸಲು 3,50 ಲಕ್ಷ ಗಳಿಗೆ ಮಂಜೂರಾತಿ ಮಾಡಿಸಿದ್ದಾರೆ.
ಬೈಲಹೊಂಗಲ ನಗರದಲ್ಲಿ ಮಿನಿ ವಿಧಾನಸೌದ ಈ ಹಿಂದೆ ಸನ್ 2014 ರಲ್ಲಿ  ಬೆಳಗಾವಿಯ ನಾಗನೂರು ಶ್ರೀ ರುದ್ರಾಕ್ಷಿಮಠದಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲ ಪೂಜ್ಯರೂ ಹಾಗೂ ರೈತರು ಸೇರಿ 
‘’ನದಿಯಿಂದ ಕೆರೆಗೆ ನೀರು, ಸ್ವಾಮಿಗಳ ನಡೆ ಒಕ್ಕಲುತನದ ಕಡೆಗೆ ‘’ ಎಂಬ ಪ್ರಣಾಳಿಕೆಯೊಂದಿಗೆ ಸಂಘಟನೆ ಮಾಡಿ ಸರ್ಕಾರವನ್ನು ಒತ್ತಾಯಿಸಲಾಗಿತ್ತು. ಈಗ ಕರ್ನಾಟಕ ಘನ ಸರ್ಕಾರ  ಆ ಕೆಲಸಕ್ಕೆ ಸರ್ಕಾರ ಆದೇಶ ಸಂಖ್ಯೆ ಜಸಂಇ75 ಎನ್‍ಐಎನ್ 2017 ಬೆಂಗಳೂರು ದಿನಾಂಕ 08-11-2017 ರ ಪ್ರಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಪರಮ ಪೂಜ್ಯ ಶ್ರೀ ಮ ನಿ ಪ್ರ ಸ್ವ  ಸಿದ್ಧರಾಮ ಸ್ವಾಮಿಗಳು ರುದ್ರಾಕ್ಷಿಮಠ ನಾಗನೂರು-ಬೆಳಗಾವಿ ಇವರ ಕೋರಿಕೆಯಂತೆ ಹಾಗೂ  ಅವರ ಸಾನಿಧ್ಯದಲ್ಲಿ “ನದಿಯಿಂದ ಕೆರೆಗೆ ನೀರು ಸ್ವಾಮಿಗಳ ನಡೆ ಒಕ್ಕಲುತನದ ಕಡೆಗೆ “ ಎಂಬ ಪ್ರಣಾಳಿಕೆಯೊಂದಿಗೆ ಬೆಳಗಾವಿ ಜಿಲ್ಲೆಯ ಎಲ್ಲ ಸ್ವಾಮಿಗಳನ್ನು ಕೂಡಿಕೊಂಡು ಬಿಜಾಪೂರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ  ಎಲ್ಲ ಪೂಜ್ಯರೂ ಸೇರಿ ಈ ಕೆಲಸ ಸರ್ಕಾರದ ಮಟ್ಟದಲ್ಲಿ ಮಾಡಲು ಕ್ರಮ ಕೈಗೊಳ್ಳಲು ಮಹಾಂತೇಶ ಕೌಜಲಗಿ ಅವರಿಗೆ ಆದೇಶಿಸಿದರು.ಈಗ ಈ ಯೋಜನೆಗೆ ಸರ್ಕಾರ ಆದೇಶ ಸಂಖ್ಯೆ ಜಸಂಇ75 ಎನ್‍ಐಎನ್ 2017 ಬೆಂಗಳೂರು ದಿನಾಂಕ  08-11-2017 ರ ಪ್ರಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಶ್ರೀ ಸಿದ್ಧರಾಮಯ್ಯನವರ ಕಾಂಗ್ರೇಸ್ ಸರ್ಕಾರ ರೈತರ ಪರ ಸರ್ಕಾರವಿದ್ದು, ಜನಪರವಾದ ನೀರಾವರಿ ಕೆಲಸ ಮಾಡುತ್ತಿದ್ದು, ನೀರಾವರಿ ಸಚಿವರಾದ ಶ್ರೀ ಎಂ.ಬಿ.ಪಾಟೀಲರ ಸತತ ಪ್ರಯತ್ನದಿಂದ ಕರ್ನಾಟಕ ರಾಜ್ಯದಲ್ಲಿ ನೀರಾವರಿ ಯೋಜನೆಗಳು ಕೈಗೊಳ್ಳುತ್ತಿರುವುದು ಸಂತೋಷದ ಸಂಗತಿ. 

ಬೈಲಹೊಂಗಲ ತಾಲೂಕಿನಲ್ಲಿಯೇ ಅತೀ ದೊಡ್ಡ ಕೆರೆ ಅಂದರೆ ಸಿದ್ದಸಮುದ್ರ ಕೆರೆ. ಸಿದ್ಧಸಮುದ್ರ ಕೆರೆಯಲ್ಲಿ ನೀರು ಸಂಗ್ರಹ ಮಾಡುವುದರಿಂದ ಸಮೀಪದ ಗ್ರಾಮಗಳ ಕೊಳವೆಬಾವಿಗಳ ನೀರಿನ ಸಾಮಥ್ರ್ಯ ಹೆಚ್ಚಾಗಿ ಕುಡಿಯುವ ನೀರಿನ ತೊಂದರೆ ತಪ್ಪುವುದಲ್ಲದೆ ಜಮೀನುಗಳಿಗೆ ನೀರಾವರಿ ಆಗುವುದು. ತಾವು ನೋಡಬಹುದು. ದೊಡವಾಡ, ಬೆಳವಡಿ. ಹಾಗೂ ಉಡಿಕೇರಿ ಗ್ರಾಮದ ಜಮೀನುಗಳಿಗೆ ನೀರು ಹರಿಸುವ ಸಲುವಾಗಿ ಕಾಲುವೆಗಳು ಈ ಗ್ರಾಮದ ಜಮೀನುಗಳಲ್ಲಿ ಇರುವುದು ಅದೂ ಅಲ್ಲದೆ ನನಗುಂಡಿಕೊಪ್ಪ ,ಪಟ್ಟಿಹಾಳ ಕೆ.ಬಿ ಹಾಗೂ ಸವಟಗಿ ಗ್ರಾಮಗಳಲ್ಲಿರುವ  ಕೊಳವೆ ಬಾವಿಗಳ ನೀರಿನ ಸಾಮಥ್ರ್ಯ ಸಹಃ ಹೆಚ್ಚಾಗುವುದು ಅದೂ ಅಲ್ಲದೆ ಮಹದಾಯಿ ಟ್ರಿಬ್ಯುನಲ್ಲಿ ಸಹಃ ಬಿ ಸ್ಕೀಮನಲ್ಲಿ ಹೆಚ್ಚನ ನೀರು ಇರುವುದರಿಂದ ಬೈಲಹೊಂಗಲ, ಖಾನಾಪೂರ, ರಾಮದುರ್ಗ ಹಾಗೂ ಸವದತ್ತಿ ತಾಲೂಕಿನ ಕೆರೆಗಳಿಗೆ ನೀರು ಒದಗಿಸುವ ಪ್ರಸ್ತಾವಣೆ ಟ್ರಿಬ್ಯುನಲ್ ಮುಂದೆ ಇದ್ದು ಇದರಿಂದ ಈ ಎಲ್ಲ ತಾಲೂಕಿನ ಎಲ್ಲ ಕೆರೆಗಳಿಗೆ ಇನ್ನೂ ಹೆಚ್ಚಿನ ನೀರಿನ ಸೌಕರ್ಯ ಒದಗಿಸಲಾಗುವುದು. 
ಈ ಭಾಗಗಳಲ್ಲಿ ಮೇಲಿಂದ ಮೇಲೆ ಬರಗಾಲ ಬೀಳುತ್ತಿದ್ದು, ಹಾಗೂ ಮಳೆಯ ಮೇಲೆಯೇ ಅವಲಂಬಿಸಿದ ಗ್ರಾಮಗಳು ಇರುವುದರಿಂದ  ಈ ಭಾಗದ ಜನರಿಗೆ ಶಾಶ್ವತ ನೀರನ್ನು ಒದಗಿಸುವುದು ಅತೀ ಅವಶ್ಯವಿರುವ ಹಿನ್ನೆಲೆಯಲ್ಲಿ ನನ್ನ ಕೋರಿಕೆಯ ಮೇರೆಗೆ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಜಲಸಂಪನ್ಮೂಲ ಸಚಿವರು ಒಪ್ಪಿಗೆ ಸೂಚಿಸಿ ಈ ಗ್ರಾಮಗಳ ಕೆರೆಗೆ ’ನದಿಯಿಂದ ಕೆರೆಗೆ ನೀರು” ಯೋಜನೆಯಡಿಯಲ್ಲಿ ನೀರು ಒದಗಿಸಲು ಸರ್ಕಾರ ಆದೇಶ ಸಂಖ್ಯೆ ಜಸಂಇ75 ಎನ್‍ಐಎನ್ 2017 ಬೆಂಗಳೂರು ದಿನಾಂಕ 08-11-2017 ರ ಪ್ರಕಾರ ಆಡಳಿತಾತ್ಮಕ ಅನುಮೋದನೆ ನೀಡಿದ್ದಾರೆ. ಹಾಗೂ ಪ್ರಥಮ ಹಂತವಾಗಿ ಬೈಲಹೊಂಗಲ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ  ಸವದತ್ತಿ ಹಾಗೂ  ಬೈಲಹೊಂಗಲ ತಾಲೂಕಿನ ಈ ಕೆಳಗಿನ ಗ್ರಾಮಗಳ ಕೆರೆಗಳಿಗೆ ನೀರು ಉಣಿಸಲು ಆದೇಶ ನೀಡಲಾಗಿದೆ ಎಂದು ಅತೀವ ಸಂತೋಷದಿಂದ ಮಹಾಂತೇಶ ಕೌಜಲಗಿ ಅವರು ತಿಳಿಸಿದ್ದಾರೆ.
ಮಂಜೂರಾತಿ ನೀಡಿದ ಪ್ರಥಮ ಹಂತದ ಕೆರೆಗಳು:(ಮುಂಗಾರು ಹಂಗಾಮಿಗೆ ಮಾತ್ರ) 
1) ಚಿಕ್ಕಬೂದನೂರು 2) ಹಿರೇಬೂದನೂರು 3) ಚಚಡಿ (ಕೆಳಗಿನ ಭಾಗ) 4) ಚಚಡಿ (ಮೇಲಿನ ಭಾಗ) 5) ಕೆಂಗೇರಿ (ಮುರಗೋಡ) 6) ಹೆಗ್ಗೇರಿ (ಮುರಗೋಡ) 7) ನೀರಕೊಳ್ಳ (ಮುರಗೋಡ)  8) ಬುಡ್ಡಿಕೇರಿ (ಮುರಗೋಡ) 9) ಹಿರೇಕೊಪ್ಪ 10) ಮರಕುಂಬಿ 11) ಮಳಗಲಿ 12) ಹಾರುಗೊಪ್ಪ 13) ಗೋಂತಮಾರ 14) ಇಂಚಲ 15) ಮುತವಾಡ 16) ಹೊಳಿನಾಗಲಾಪೂರ 17) ಸಿದ್ಧಸಮುದ್ರ 18) ಕೆಂಗೇರಿ ( ಸಾಣಿಕೊಪ್ಪ) 19) ಕೆಣ್ಣಕ್ಕಿಕೆರೆ (ಸಾಣಿಕೊಪ್ಪ) ಸರ್ಕಾರಿ ಆದೇಶದಲ್ಲಿ ಮುರಗೋಡದ ಹೆಗ್ಗೇರಿ ಕೆರೆಗೆ ನೀರು ತುಂಬಿಸುವ ಯೋಜನೆ ಸೇರಿರುವುದು.ಹೆಗ್ಗೇರಿ ಕೆರೆಗೆ ನೀರು ತುಂಬಿಸುವುದರಿಂದ ಮುರಗೋಡ ಹಾಗೂ ಸುತ್ತ-ಮುತ್ತಲಿನ ಗ್ರಾಮಗಳಾದ ರುದ್ರಾಪೂರ,ದುಂಡನಕೊಪ್ಪ, ಕಾರಿಮನಿ, ಸೊಗಲ, ಹಾಗೂ ತಾಂಡಾಗಳ ಕಳವೆ ಬಾವಿಗಳ ನೀರಿನ ಸಾಮಥ್ರ್ಯ ಹೆಚ್ಚಿಗೆ ಆಗುವುದು. ಇದರಿಂದ ಈ ಗ್ರಾಮಗಳ ಕುಡಿಯುವ ನೀರಿನ ತೊಂದರೆ ತಪ್ಪುವುದಲ್ಲದೆ ಜಮೀನುಗಳಿಗೂ ಸಹಃ ನೀರಿನ ಸೌಕರ್ಯ ಒದಗುವುದು.ಮುರಗೋಡ ಹೆಗ್ಗೇರಿ ಕೆರೆಗೆ ಚಿಕ್ಕಬೂದನೂರು ಕೆರೆ ನೀರು, ಬಳ್ಳಾರಿ ನಾಲಾ ನೀರು, ಮಾರ್ಕಂಡೇಯ ನೀರು ಹಾಗೂ ಮಲಪ್ರಭಾ ನದಿ ನೀರು ಬರುವುದರಿಂದ ಈ ಕೆರೆಗೆ ಅತೀ ಹೆಚ್ಚಿನ ನೀರಿನ ಸಂಗ್ರಹವಾಗುವುದು  ಹೀಗಾಗಿ ಮುರಗೋಡದ ಸುತ್ತ-ಮುತ್ತಲಿನ ಗ್ರಾಮಗಳ ಕೊಳವೆ ಬಾವಿಗಳ ನೀರಿನ ಸಾಮಥ್ರ್ಯ ಹೆಚ್ಚಾಗುವುದರಿಂದ ಕುಡಿಯುವ ನೀರಿನ ತೊಂದರೆ ಸಂಪೂರ್ಣ ಹೋಗುವುದು ಅಲ್ಲದೆ ಕೊಳವೆ ಬಾವಿಗಳ ನೀರಿನ ಸಾಮಥ್ರ್ಯ ಹೆಚ್ಚಾಗುವುದರಿಂದ ಈ ಜಮೀನುಗಳಿಗೆ ನೀರಾವರಿ ಸಹ ಆಗುವುದು. ಅಲ್ಲದೆ ಚಳಕೊಪ್ಪ ಗ್ರಾಮದ ಕೊಳವೆ ಬಾವಿಗಳ ನೀರಿನ ಸಾಮಥ್ರ್ಯಹೆಚ್ಚಾಗುವುದು ಚಚಡಿ-ಮುರಗೋಡ ಏತ ನೀರಾವರಿ ಯೋಜನೆಯಡಿಯಲ್ಲಿ (ಕಮಾಂಡ ಏರಿಯಾದಲ್ಲಿ) ಹೊಸೂರು ಗ್ರಾಮದ ಜಮೀನುಗಳು ಸಹ ನೀರಾವರಿ ಆಗುವುದು ಹೀಗಾಗಿ ಈಗ ಸರ್ಕಾರ ಹೊರಡಿಸಿದ ಮುರಗೋಡದ ಹೆಗ್ಗೇರಿ ಕೆರೆಗೆ ನೀರು ಬಿಡುವ ಆದೇಶದಿಂದ ಹೊಸೂರು ಗ್ರಾಮದ ಕೊಳವೆ ಬಾವಿಗಳ ನೀರಿನ ಸಾಮಥ್ರ್ಯ ಹೆಚ್ಚಾಗುವುದು. ಇದರಿಂದ ಕುಡಿಯುವ ನೀರಿನ ತೊಂದರೆ ಕಡಿಮೆಯಾಗಿ ಜಮೀನುಗಳಿಗೆ ನೀರಾವರಿ ಆಗುವುದು ಎಂದು ತಿಳಿಸಿದ್ದಾರೆ.
ಚಚಡಿ-ಮುರಗೋಡ ಏತ ನೀರಾವರಿ ಯೋಜನೆಯಿಂದ ನೀರಾವರಿಗೆ ಒಳಪಡುವ ಗ್ರಾಮಗಳು:

ಚಚಡಿ ಏತ ನೀರಾವರಿ ಯೋಜನೆ ಅಡಿಯಲ್ಲಿ ಮಿಡಕನಟ್ಟಿ,ಏಳಪಟ್ಟಿ, ಮಾಸ್ತಮರಡಿ, ಸುಣಕುಂಪಿ, ವಣ್ಣೂರ, ಚಿಕ್ಕಬೂದನೂರ, ಚಚಡಿ, 6716 ( 2718) ಹಾಗೂ ಮುರಗೋಡ ಏತ ನೀರಾವರಿ ಯೋಜನೆಯಡಿಯಲ್ಲಿ ತಡಸಲೂರ, ಮುರಗೋಡ, ದುಂಡನಕೊಪ್ಪ, ಹಿರೇಕೊಪ್ಪ, ಚಿಕ್ಕೊಪ್ಪ, ಹೊಸೂರು, ರುದ್ರಾಪೂರ, ಬಸರಗಿ ಒಟ್ಟು ಕ್ಷೇತ್ರ 4791.27 (1939 ಹೆಕ್ಟೇರ) ನೀರಾವರಿ ಚಚಡಿ-ಮುರಗೋಡ ಏತ ನೀರಾವರಿ ಯೋಜನೆಯಿಂದ ಆಗುವುದು. 

   
ವಸತಿ  ಸೌಕರ್ಯ :
ಬೈಲಹೊಂಗಲ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೈಲಹೊಂಗಲ ಹಾಗೂ ಸವದತ್ತಿ ತಾಲೂಕುಗಳಲ್ಲಿ ಬಡ ಜನರಿಗೆ ವಸತಿ ಸೌಕರ್ಯಕ್ಕಾಗಿ ನವ ಗ್ರಾಮ ಯೋಜನೆಯಡಿಯಲ್ಲಿ ಮನೆ ಕಟ್ಟಿಸಲಾಗಿದೆ. ಅದೂ ಅಲ್ಲದೆ ಮತಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಬಡ ಜನರಿಗೆ ಹಾಗೂ ವಸತಿಹೀನ ಕುಟುಂಬಗಳಿಗೆ ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಮನೆಗಳನ್ನು ಕಟ್ಟಿಸಿಕೊಡಲಾಗಿದೆ. ಬೈಲಹೊಂಗಲ ನಗರದಲ್ಲಿ ಶ್ರ ಬಸವೇಶ್ವರ ಆಶ್ರಯ ಕಾಲೋನಿ ನಿರ್ಮಿಸಿ 1300 ಮನೆಗಳನ್ನು ಕಟ್ಟಿಸಲಾಗಿದೆ. ಕೆಂಗಾನೂರು ಹಾಗೂ ಮಾಟೊಳ್ಳಿ ಗ್ರಾಮಗಳಲ್ಲಿ ಮೀನುಗಾರರಿಗೆ ವಸತಿ ಗೃಹ ಕಟ್ಟಿಸಲಾಗಿದೆ. 
ಬೈಲಹೊಂಗಲ ಮತಕ್ಷೇತ್ರದ ಬೈಲಹೊಂಗಲ ಹಾಗೂ ಸವದತ್ತಿ ತಾಲೂಕಿನ ಗ್ರಾಮಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಿದೆ. ಹಾಗೂ ದೇವಸ್ಥಾನಗಳ ಜೀರ್ಣೋದ್ದಾರ ಮಾಡಿಸಲಾಗಿದೆ. 
ಸರಳ,ಸಜ್ಜನ,ಅಭಿವೃದ್ಧಿಯ ಹರಿಕಾರರೇ ಎಂದು ಖ್ಯಾತಿ ಪಡೆದಿರುವ ಮಹಾಂತೇಶ ಕೌಜಲಗಿ ಅವರು ಪ್ರಸ್ತುತ ಕಿತ್ತೂರ ರಾಣಿ ಚನ್ನಮ್ಮ ಅಂತರಾಷ್ಟ್ರೀಯ ಬಾಲಕಿಯರ ವಸತಿ ಸೈನಿಕ ಶಾಲೆಯ ಗೌರವ ಕಾರ್ಯದರ್ಶಿಗಳಾಗಿ, ಕಿತ್ತೂರ ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆ ಬೈಲಹೊಂಗಲ ಇದರ ಗೌರವ ಕಾರ್ಯದರ್ಶಿಗಳಾಗಿ,ಬೆಳಗಾವಿಯ ಪ್ರತಿಷ್ಠಿತ ಕೆ.ಎಲ್.ಇ ಸಂಸ್ಥೆಯ ಸಾಮಾನ್ಯ ಸದಸ್ಯರಾಗಿ, ಬೈಲಹೊಂಗಲ ಬಾರ್ ಅಶೋಸಿಯೇಶನ್ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

-ಗುರು ಎಸ್ ಎ.

Comments