ನೀನು ಮೌನವಾಗುವ ಮುನ್ನ.
ನೀನು ಮೌನವಾಗುವ ಮುನ್ನ
ನನ್ನನ್ನೊಮ್ಮೆ ಕೇಳಬೇಕಿತ್ತು ಗೆಳತಿ.
ದೂರ ಸರೆಯುವ ಮುನ್ನ
ದಾರಿಯುದ್ದಕ್ಕೂ ನಡೆದ
ಹೆಜ್ಜೆಗಳ ಲೆಕ್ಕ ಕೊಡಬೇಕಿತ್ತು.
ಹಾದಿಯಲಿ ಹಾಡಿದ ಕವನ
ಕಟ್ಟಿದ ಕಥೆಗಳೊಮ್ಮೆ ಕೇಳಬೇಕಿತ್ತು.
ಫೋನ್ ಮೇಲ್ ಸಂದೇಶಗಳ
ನಗೆ ಸಂತಸ ಪ್ರೀತಿಯ ಬಟ್ಟೆಗೆ
ನೀರೆರದು ದೂರವಾಗಿದ್ದು ಏತಕ್ಕೆ?
ಹುಟ್ಟು ಹಬ್ಬದ ನೆನಪು
ಸ್ನೇಹ ಕೂಟದ ಒನಪು
ಕಾಡಲಿಲ್ಲವೇ ನಿನ್ನ ಮನವನೊಮ್ಮೆಯೂ.
ನಿನ್ನ ನನ್ನ ಮಧ್ಯೆ
ಹುಟ್ಟಿದವು ಕವನಗಳು.
ನಿನಗಿನ್ನೂ ಏನೇನೊ ಹೇಳಬೇಕ್ಕೆನ್ನುವ
ನನ್ನ ಮಧುರ ಭಾವಗಳು
ಅಳುತಿವೆ ಭಿಕ್ಕಿ ಭಿಕ್ಕಿ .
ಉತ್ತರ ಕೊಡಲಿಲ್ಲ .
ನನ್ನ ಮಧುರ ಭಾವಗಳಿಗೆ
ಕವನಗಳಿಗೆ ಸಂದೇಶಗಳಿಗೆ.
ಭಾವ ಭದ್ರತೆಯ ಕೋಟೆ ಕಟ್ಟಿ
ಒಲುಮೆಯ ಕುಲುಮೆಯಾದವಳು.
ಏನೂ ಹೇಳದೆ ಒಳಗೊಳಗೆ ಶಾಂತವಾದೆ.
ಮೌನಕ್ಕೆ ಜಾರಿದೆ ಸುಮ್ಮನೆ .
———————————-
ಡಾ ಶಶಿಕಾಂತ ಪಟ್ಟಣ -ಪೂನಾ