UK Suddi
The news is by your side.

ಬೆಳಗಾವಿಯ ನೂತನ ಡಿಸಿಪಿಯಾಗಿ ನಂದಗಾವಿ ಅವರು ಇಂದು ಅಧಿಕಾರ ಸ್ವೀಕಾರ.

ಬೆಳಗಾವಿ: ನಗರ ಪೊಲೀಸ ಇಲಾಖೆಯ ಅಪರಾಧ ಮತ್ತು ಸಂಚಾರ ವಿಭಾಗದ ನೂತನ ಡಿಸಿಪಿ ಯಾಗಿ ಮಹಾನಿಂಗ ನಂದಗಾಂವಿ ಅವರು ಇಂದು ಅಧಿಕಾರ ಸ್ವೀಕರಿಸಲಿದ್ದಾರೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಮರನಾಥ ರೆಡ್ಡಿ ಅವರನ್ನು ರಾಜ್ಯ ಸರಕಾರ ಬೆಳಗಾವಿ ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿಯನ್ನಾಗಿ ವರ್ಗಾವಣೆ ಮಾಡಿದ ಪರಿಣಾಮ ಅವರ ಜಾಗದಲ್ಲಿ ಕಲಬುರಗಿ ಡಿ.ಸಿ.ಆರ್.ಇ ವಿಭಾಗದ ಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದ ಮಹಾನಿಂಗ ನಂದಗಾವಿ ಅವರನ್ನು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿಯನ್ನಾಗಿ ನೇಮಿಸಿಲಾಗಿದೆ.

Comments