UK Suddi
The news is by your side.

ಆಧುನಿಕತೆಗೆ ಬಲಿಯಾದ ಮಾನಸಿಕ ನೆಮ್ಮದಿ.


ಜೀವನದಲ್ಲಿ ಹತ್ತಾರು ಸಾವಿರ ಘಟನೆಗಳು ನಡೆಯುತ್ತವೆ. ಕಷ್ಟ ಸುಖ, ನೋವು ನಲಿವು ಸಹಜ ಪ್ರಕ್ರಿಯೆ. ಹುಟ್ಟಿದಾಗಿನಿಂದ ಜೀವನದ ಪ್ರತಿಯೊಂದು ಹಂತದಲ್ಲೂ ನಾವೂ ಪಾಠ ಕಲಿಯುವುದು ಸಹಜ.ಶಿಶು ಆಗಿ ವ್ಯಕ್ತಿ ವಿಕಾಸ ಆಗುವ ತನಕ ಪ್ರತಿಯೊಂದು ಹಂತದಲ್ಲೂ ಜಾಗರೂಕತೆಯಿಂದ ಹೆಜ್ಜೆಯನ್ನು ಇಡಬೇಕು.

ನಾಗರಿಕತೆ ಬೆಳೆದು ನಿಂತಿರಬಹುದು. ಮಾನವನು ಇಂದು ತಾನಿರುವಲ್ಲಿಯೇ ಇಡೀ ದೇಶದ ವಿದೇಶದ ವಿವಿಧ ಭಾಗಗಳಲ್ಲಿ ನಡೆಯುವ ಪ್ರಮುಖ ವಿಷಯಗಳನ್ನು ಕ್ಷಣಾರ್ಧದಲ್ಲಿ ನೋಡುತ್ತಾನೆ.ಸ್ಮಾರ್ಟ್ಫೋನ್ ಮತ್ತು ಆಂಡ್ರಾಯ್ಡ್ ಮೊಬೈಲ್ ನಲ್ಲಿ ಪ್ರತಿಯೊಂದು ತಾಜಾ ಸುದ್ದಿ ತಿಳಿದುಕೊಳ್ಳುವನು. ಅಷ್ಟೆ ಅಲ್ಲದೆ ಅನೇಕಾನೇಕ ಆಪ್ಪ್ಸ್ ಮೂಲಕ ತನ್ನ ಜಗತ್ತು ತುಂಬಾ ಚಿಕ್ಕದಾಗಿಸಿಕೊಂಡು ಆಳುತ್ತಾ ಇರುವನು. ತನ್ನ ಬೇಕು ಬೇಡ ಬೇಡ ಎಲ್ಲವೂ ಅಂದುಕೊಂಡಂತೆ ಮಾಡಿಕೊಂಡು ಇರುವನು. ಹಿಂದಿನಂತೆ ವಾರಗಟ್ಟಲೆ ಪತ್ರಕಾಯುವ ಪ್ರಮೇಯೇ ಇಲ್ಲ. ಫಾಸ್ಟ್ ಆಗಿ ಆಗಬೇಕೆಂಬ ಹೆಬ್ಬಯಕೆ ಇಂದಾಗಿ ಇಂದೆಲ್ಲವು ವಾಟ್ಸಪ್ ,ಫೇಸಬುಕ್ ,ಟ್ವಿಟ್ಟರ್ ಮೂಲಕವೇ ರವನಿಸುತ್ತಾನೆ. ಬ್ಯಾಂಕ್ ನಲ್ಲಿ ಇರುವ ಮೊತ್ತವನ್ನು ಫೊನ್ ಲಿಂಕ್ ಮಾಡಿಕೊಂಡು ಶಾಪಿಂಗ್ ಮಾಲ್ ಹೋಗದೆ ಹೋಮ್ ಡೆಲಿವರಿ ಆನ್ಲೈನ್ನಲ್ಲಿ ಆರ್ಡರ್ ಮಾಡುತ್ತಾ, ಕೆಲವೊಮ್ಮೆ ತುಂಬಾ ಒಳ್ಳೆಯದು ಎಂದು ಕೊಂಡು ಬಿಗಿದ್ದು ಸಹ ಇದೆ.ಅಷ್ಟೇಕೆ ಅಡಿಗೆ ಮನೆಗೆ ಬಂದಾಗ ನಮಗೇನು ಕೆಲಸವೆಂದರೆ ಕೇವಲ ಒಂದು ಸಣ್ಣ ಸ್ವಿಚ್ ಆಫ್ ಹಾಗೂ ಆನ್ ಮಾಡುವದು ಅಷ್ಟರ ಮಟ್ಟಿಗೆ ಮುಂದುಇದ್ದೇವೆ ಅಂದುಕೊಂಡಿದೇವೆ …

 ??!!… ವಿಜ್ಞಾನ ತಾ ಮುಂದು  ಮತ್ತು ತಂತ್ರಜ್ಞಾನ ತಾಮುಂದು ಎಂದೇ ಪೈಪೋಟಿ ನಡೆಸಿವೆ. ಆದ್ರೆ ಈ ಸಂದರ್ಭದಲ್ಲಿ ಮನುಷ್ಯನ ಮಾನಸಿಕ ಆರೋಗ್ಯ ಹಾಗೂ ಅದರ ಮೇಲೆ  ಕೆಟ್ಟಪ್ರಭಾವ ಬೀರಿದೆ ಎಂಬುದನ್ನು ನಾವು ನಿಜಕ್ಕೂ ನೆಮ್ಮದಿಯ ಬದುಕು ಮತ್ತು ಮಾನಸಿಕ ನೆಮ್ಮದಿ ಮತ್ತು ಅದರ ಸಮತೋಲನ ನಮಗಿದೆಯೇ????

ಖಂಡಿತಾ ಇಲ್ಲ ಎನ್ನುವ ಮಾತು ಬರುತ್ತದೆ. ಯಾಕೇಂದ್ರೆ ಮನುಷ್ಯನಿಗೆ ಸೌಲಭ್ಯ ಇದೆ ಎಂಬುದು ಗೊತ್ತಾದರೆ ಅವನು ಅದನ್ನು ದುರುಪಯೋಗ ಮಾಡಿಕೊಳ್ಳುವ ಮೂಲಕ ತೃಪ್ತಿ ಪಡುತ್ತಾನೆ.

ಹಿಂದೇ ಕೇವಲ ದೂರದರ್ಶನ ಮಾತ್ರ ವಾರಕ್ಕೊಂದು ಸಿನಿಮಾ ಪ್ರಸಾರ ಮಾಡುತ್ತಿತ್ತು.ಆಗ ಬೇರೇ ಬೇರೆ ಚಾನೆಲ್ ಇರಲಿಲ್ಲವಂತೆ. ಅದಕ್ಕೇ ಅವರೆಲ್ಲರೂ ಮಾನಸಿಕವಾಗಿ ಸದೃಡ ಇದ್ದರು ಇದರಿಂದ ಒತ್ತಡ ಇರುತಿರಲಿಲ್ಲ.ಅದು ನೋಡಲೇ ಅಥವಾ ಇದನ್ನೂ ನೋಡಲೇ ಎಂಬ ದ್ವಂದ್ವ ಇರುತಿರಲಿಲ್ಲ..ಇಂದಿನಂತೆ ಅನೇಕ ಪ್ರಚಲಿತ ಆಪ್ಪ್ಸ್ ಹಾವಳಿ ಇಲ್ಲ.ತುಂಬಾ ಸಿಂಪಲ್ಲಾಗಿ ಇರುತಿದ್ದರು. ಇದರಿಂದಾಗಿಯೇ ಅವ್ರು ಮಾನಸಿಕ ನೆಮ್ದಿ ಹೊoದಿದ್ರು.ಅಂದರೆ ಚಿತ್ತ ಚಾಂಚಲತೆ ಇರಲಿಕ್ಕಿಲ್ಲ ಎಂದೆನಿಸುತ್ತದೆ.ಇಡೀ ದಿನ ಹತ್ತಾರು ಚಾನೆಲ್ ತಿರುಗಿಸುವ ಭರದಲ್ಲಿ ನಮ್ಮ ತೆಲೆ ಕೆಟ್ಟಹಾಗೆ ಎನಿಸುತ್ತದೆ. ಇಂಥಾ ಸಂದರ್ಭದಲ್ಲಿ ನೆಮ್ಮದಿಯ ಬದುಕು ???ತಾಯಿ ತನ್ನ ಕೆಲಸವನ್ನು ಬಿಟ್ಟು ಟಿವಿ ನೋಡುತ್ತಾ ನೋಡುತ್ತಾ ಇದ್ರೆ, ತಂದೆ ಲ್ಯಾಪ್ಟಾಪ್  ಮೊಬೈಲ್ನಲ್ಲಿ ಬ್ಯುಸಿ. ಹೀಗಾದಾಗ ಮಕ್ಕಳಿಗೆ ಉತ್ತಮ ಸಂಸ್ಕ್ರತಿ ಮತ್ತು ನಮ್ಮ ದೇಶದ ಹಿರಿಮೆಯನ್ನು ಹಾಗೂ ಆದರ್ಶಗಳನ್ನು ಬೋಧಿಸುವಲ್ಲಿ ಸಮಯ ಎಲ್ಲಿಂದ ಬರಬೇಕು???

 ವಿವಿಧ ರೀತಿಯ ಗ್ಯಾಜೆಟ್ ಗಳಿಂದ ಕುಳಿತ್ತಲೇ ಎಲ್ಲಾ ಮಾಡುವದು. ದೈಹಿಕವಾಗಿ ಶ್ರಮ ಇರುವುದಿಲ್ಲ. ಹೀಗಾದಾಗ ಬೊಜ್ಜಿನ ಸಮಸ್ಯೆಗೆ ಸೂಕ್ತ ರೀತಿಯಲ್ಲಿ ಪರಿಹರಿಸಲು ಸಾಧ್ಯವೆ ಇಲ್ಲ.ಒಗೆಯುವ ಕುಟ್ಟುವ ಮತ್ತು ಸಾಧ್ಯವಾದ ಮಟ್ಟಿಗೇ ನಡೆದು ಹೋಗುತ್ತಿದ್ದರೆ, ಬೊಜ್ಜಿನ ಪ್ರಶ್ನೆಗೆ ಪೃಕೃತಿ ಸಹಜ ಪರಿಹರಿಸಲು ಸಾದ್ಯತೆ ಇತ್ತು. ಜೀವನದಲ್ಲಿ ಮಹತ್ವದ ಪಾತ್ರವನ್ನು ಒಪ್ಪಿಕೊಂಡ ಮೇಲೇ ನಿಭಾಯಿಸುವ ಸಿದ್ದ ಇರಲೇಬೇಕು. ಅಪ್ಪ ಅಮ್ಮನ ಹಾಗೂ ತನ್ನ ಸುತ್ತ ಮುತ್ತಲಿನ ವಾತವರಣ ಅನುಸರಿಸುತ್ತಿರುವ ಮಗುವು ಅವರಿಂದ ಏನು ಪಡೆಯಲು ಸಾಧ್ಯವಿಲ್ಲ ಎಂಬುದನ್ನು ಗಮನಿಸಬೇಕು. ಸ್ಮಾರ್ಟ್ಫೋನ್ ಬಳಕೆಯ ಬಗ್ಗೆ ಯಾವುದೇ ರೀತಿಯ ಮಾಹಿತಿಇಲ್ಲದೇ ಮಗು ಗೇಮ್ ಆಡಲು ಶುರು ಮಾಡುತ್ತದೆ ಹೀಗಾಗಿಯೇ ತನಗೆ ಅರಿವು ಇಲ್ಲದೆ ಅನೇಕ ಹಾನಿಕರಿಕ ರೇಡಿಯಂ ಕಿರಣಗಳಿಗೆ ತುತ್ತಾಗುತ್ತದೆ.ಹಾಗಾಗಿ ಉತ್ತಮ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯಲ್ಲಿ ಮಗು ಶಿಕ್ಷಣ ಪಡಿದ್ರೂ ಸಹ ನೆನಪಿನಶಕ್ತಿಯನ್ನು ಹೊಂದಿರಲ್ಲ. ಚಿಕ್ಕ ಮಕ್ಕಳ ಮೇಲೆ ಪರಿಣಾಮ ಬೀರಬಹುದು. ಟಿವಿ ನೋಡುತ್ತಾ ನೋಡುತ್ತಾ ಇದ್ದ ಮಗುವೊಂದು ಕಾಗದಗಳ ರಾಶಿ ಒಡ್ಡಿ ಬೆಂಕಿಗೆ ಆಹುತಿ ಆಗಿದ್ದು ಇನ್ನೂ ಮಾಸಿಲ್ಲ. ಶಕ್ತಿಮಾನ್ ಧಾರಾವಾಹಿ ನೋಡಿ ಮಕ್ಕಳೂ ಮಹಡಿ ಇಂದ ಕೆಳಗೇ ಹಾರಿದ್ದು ಇನ್ನೂ ನೆನಪಿದೆ. 

        ಹಿಂದೇ ಮನೆ ಮತ್ತು ಅದರ ಅದರಲ್ಲಿ ಇರುವ ಸಧ್ಯಸರ ನಡುವೆ ತುಂಬಾ ಅನುಬಂಧ ,ಪ್ರೀತಿ ಪ್ರೇಮ ಹಾಗೂ ವಾತ್ಸಲ್ಯ ಇರುತಿತ್ತು. ಮತ್ತು ಅವ್ರವರ ಬೇಡಿಕೆ ಗಳು,ಆಸ-ಆಕಾಂಕ್ಷೆ ಕೂಡ ಒಂದೇ ಸಮನೆ ಇರುತ್ತಿದ್ದವು.ಒಬ್ಬರ ಮತ್ತೊಬ್ಬರು ಆದರದಿಂದ ಕಾಣುವುದು ಸಹಜ ವಿಕಾಸಕ್ಕೆ ಕಾರಣ ಎಂದು ನಮ್ಮೆಲ್ಲರಿಗೂ ಗೊತ್ತು.ಪ್ರತಿಯೊಂದು ಹಂತದಲ್ಲೂ ಹಿರಿಯರ ಮತ್ತು ಅಪ್ಪ ಅಮ್ಮನ ಮಾರ್ಗದರ್ಶನ ಇರುತ್ತಿತ್ತು.ಉತ್ತಮವಾದ ಪುಸ್ತಕಗಳನ್ನು ಓದುವ ಹವ್ಯಾಸ, ಒಳ್ಳೆಯಜೀವನಕ್ಕೆ ನಿರ್ಮಾಣ ಕಾರ್ಯ ಮಾಡುತ್ತದೆ.ಅಂತೆಯೇ ಅವರೆಲ್ಲರೂ ಮಾನಸಿಕ ಆರೋಗ್ಯ ಹಾಗೂ. ನೆಮ್ಮದಿಯ ಬದುಕು ಮಾಡಿದ್ರು. ಉತ್ತಮ ಸಮಾಜಮುಖಿ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ಅವರು ಹಿಂಜರಿಯದೆ ಸಹಾಯ ಮಾಡಲು ಮುಂದಾಗುತ್ತಿದ್ದರು ಹಿರಿಯರ  ಮೇಲೆ ಆದರ ಗೌರವ ಇಟ್ಟುಕೊಂಡು ಬಾಳಿ ಬದುಕಿದ ಅನುಭಾವದ ನುಡಿಗಳು ಕೇಳುತ್ತಾ ತಾವು ಬದುಕಿದ್ರು.

ವಿಶಾಲ ವಿಶ್ವದಲ್ಲಿ ಚಿಕ್ಕ ಜೀವಿ ಆಗಿ ಅರಮನೆ ಇಲ್ಲದೆ ಹೋದ್ರೂ ರಾಜನ ಹಾಗೆ ,ಆರೋಗ್ಯ, ನೆಮ್ಮದ್ಧಿ ಮತ್ತು ಮಾನಸಿಕವಾಗಿ ಸ್ವಾಸ್ಥ್ಯವನ್ನು ಪಡೆದುಕೊಂಡು ಬಾಳಿ ಬದುಕಿದ ಉದಾಹರಣೆ ಇವೆ.
ಒಂದು ಸಣ್ಣ ಮಾತು ಹೇಳುವೆ. ಜೀವನದಲ್ಲಿ ಕಾರು, ಮಹಡಿ ಮನೆ,ಆಳು- ಕಾಳು, ಕೇಜಿ ಗಟ್ಟಲೇ ಬಂಗಾರ ಹಾಗೂ ಬೆಳ್ಳಿ ಇದ್ರೆ ಮಾತ್ರ ನೆಮ್ಮದ್ಧಿ ಎಂಬುವದು ತಪ್ಪು ಕಲ್ಪನೆ. ಎಷ್ಟೆ ಇದ್ದರೂ ಕೂಡ ಅನುಭವಿಸುವ ಅರ್ಹತೆಯನ್ನು ಪಡೆದಿರಬೇಕು. ಅಂದ್ರೆ ಅರೋಗ್ಯ ಚೆನ್ನಾಗಿ ಇರಬೇಕು ಎಂಬುದು ನನ್ನ ವಾದ.ಬೆಡ್ ರೂಮಿಗೆ ನಕ್ಷತ್ರಗಳು ಲೆಡ್ ಮೂಲಕ ಹಾಕಿಸಿಕೊಂಡು ಮೃದುವಾದ ಹಾಸಿಗೆಯ ಮೇಲೆ ಮಲಗಿದ್ರೂ ನಿದ್ರೆ ಬರಲ್ಲ. ಚಿಂತೆಯ ಚಿತೆ ಇರುವ ಹಾಗೇನಿಸಿ ನಿದ್ದೆ ಮಾತ್ರೆ ತೆಗೆದುಕೊಂಡು ಮಲಗುವದು ಅನಿವಾರ್ಯತೆ ಎದುರಾಗಿದೆ. ಜಗತ್ತಿನಲ್ಲಿ ನಾವು ಬದುಕಿರುವ ತನಕವೂ ಅರೋಗ್ಯ ಕೈ ಹಿಡಿದ್ರೆ ಇದಕ್ಕಿಂತ ದೊಡ್ಡ ವಿಷಯ ಮತ್ತೇನೂ ಇರಲು ಸಾಧ್ಯವೇ!!
ಕೊನೆಯಮಾತು. ಬದುಕಲು ದುಡ್ಡಿನ ಅವಶ್ಯಕತೆ ಇರುವುದಿಲ್ಲ ಎಂದು ನಾ ಹೇಳತಿಲ್ಲ. ಬದುಕಿಗಾಗಿ ದುಡ್ಡಿನ ಅವಶ್ಯಕತೆ ಇದೆ ಹೊರತು, ಗಳಿಕೆಯೆ ಜೀವನದ ಅವಿಭಾಜ್ಯ ಅಂಗ ಅಲ್ಲ.ಎಷ್ಟೇ ಇದ್ದರೂ ಸಹ ಕೊನೆಗೊಮ್ಮೆ ಬರೇಗೈ ಹೋಗಲೇಬೇಕು. ನಮ್ಮಲ್ಲಿಯೆ ಇರುವ ಪ್ರೀತಿಯ ಬಿಟ್ಟು ಉಳಿದ ಎಲ್ಲಡೆ ಹುಡುಕುವದು ತಪ್ಪು. ಹಿರಿಯ ನಾಗರಿಕರಿಗೆ, ಹೆತ್ತವರಿಗೆ ಗೌರವದಿಂದ ಕಾಣುವುದು, ಹಾಗೂ ಅವರ ಅರಾಧಿಸುವ ಮನಸ್ಥಿತಿ ಹೆಚ್ಚು ಹೆಚ್ಚು ರೂಢಿಸಿಕೊಳ್ಳೋಣ.ತಂದೆ ಮತ್ತು ತಾಯಿ ಇವರಿಬ್ಬರೂ ನಮಗಿದ್ದರೆ ಅದೇ ನಮ್ಮ ಪೂರ್ವ ಜನ್ಮದ ಭಾಗ್ಯ. ಜಗತ್ತಿನಲ್ಲಿರುವ ಎಷ್ಟೋ ಜನರಿಗೆಆ ಅವಕಾಶ ಇರುವುದಿಲ್ಲ. ಚಿಕ್ಕಾವರಿದ್ದಾಗಳೇ ಕಳೆದುಕೊಂಡು ನೊಂದಿರುತ್ತಾರೆ.ಕೆಲವು ಮಕ್ಕಳು ಹುಟ್ಟುತ್ತಲೇ ಅಮ್ಮನ ಜೊತೆ ಪ್ರೀತಿ ಪ್ರೇಮ ವಾತ್ಸಲ್ಯ ಕೂಡ ಪಡೆದುರುವುದಿಲ್ಲ. ಅಪ್ಪನಿಗೆ ಅಪ್ಪನೇ ಸಾಟಿ. ತನ್ನೆಲ್ಲ ಕಷ್ಟ ಬದಿಗಿಟ್ಟು ಮಕ್ಕಳನ್ನು ಬೆಳೆಸುವಲ್ಲಿ ನಿಸ್ವಾರ್ಥ ಪ್ರೀತಿಯ ಧಾರೆ ಎರೆದಿರುತ್ತಾನೆ.ನಾವೆಷ್ಟೇ ಓದಿದ್ದೇವೆ ಎಂದರೂ ಆದರ ಹಿಂದೆಯೇ ಪರಿಶ್ರಣ8 ಅಪ್ಪನದು ಎಂದೂ ನಾವು ಮರೆಯುವಂತಿಲ್ಲ. ಹಿರಿಯರು ನಮ್ಮ ಮನೆಗೆ ಮತ್ತು ಮನಸ್ಸಿಗೆ ಶೋಭೆ ನೀಡುವರು. ಈ ಜಗತ್ತಿನಲ್ಲಿರುವ ಅನುಭಾವದ ತುಂಬಿದ ಕೊಡ ಅವ್ರೇ ಎಂದರೂ ತಪ್ಪಿಲ್ಲ.. ಮಕ್ಕಳೊಡನೆ ಮಗುವಾಗಿ ಬೇರೆಯಬೇಕು.ಇನ್ನೂ ಹೆಚ್ಚು ಸಮಯ ಕಳೆಯಲು ಹತ್ತಿರದಿಂದ ಇದ್ದಷ್ಟೂ ಸ್ನೇಹ, ಪ್ರೀತಿ ಪ್ರೇಮ ಎಲ್ಲವೂ ಸಹಜವಾಗಿಯೇ ಇರುತ್ತದೆ. ಸ್ನೇಹಿತರಾಗಿ ಇದ್ದು ಅವರು ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಮನಸು ಬಿಚ್ಚಿ ಮಾತಾಡಲು ಅವಕಾಶ ನೀಡಬೇಕು ಎಂಬುದು ಮುಖ್ಯ .ಆಗ ಮಕ್ಕಳು ಕೂಡ ಇದೇ ಅನುಸರಿಸುತ್ತಾರೆ. ಮೊನ್ನೆ ಮೊನ್ನೆ ವಾಕಿಂಗ್ ಹೋದಾಗ ಅಲ್ಲಿ ಒಬ್ಬರು ಸಿಕ್ಕರು.”ಎನು ಕವಿತಾ ಹೇಗಿರುವೆ??ಮತ್ತೇ ನಾನು ಪಕ್ಕದ ಮನೆಯಲ್ಲಿ ವರ್ಷಪೂರ್ತಿ ನಿನ್ನ ಜೊತೆ ಜೊತೆಗೆ ಇದ್ರೂ ಚಿಕ್ಕ ಹುಡಗಿ ಇದ್ದಾಗಿನಿಂದಲೂ ನೋಡಿದೆವು. ಆದ್ರೆ ಫೇಸ್ಬುಕ್ ಪುಟದಲ್ಲಿ ನಿನ್ನ ಮನಸು ಅರಿತೆ ನೋಡು”ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

“Thanks ಆಂಟಿ. ಈಗಳಾದ್ರೂ ನಿಮಗೆ ಹತ್ತಿರ ಆದೇ ಅಂತರಜಾಲ ಮೂಲಕ.ಮತ್ತೆ ಒಬ್ಬರೇ ಬಂದಿರುವ ಹಾಗಿದೆ ವಾಯು ವಿಹಾರಕ್ಕೆ???”

“ನಮ್ಮ ನಾಯಿ ಮರಿ ಜೊತೆ ಸಂಗೀತ ನೀನಾದ ವಾಕಿಂಗ್”

“ಯಾಕೇ,ಮಕ್ಕಳ ಜೊತೆ ಜೊತೆಗೆ ಬನ್ನಿ ಅಥವಾ ಅಪ್ಪ ಅಮ್ಮನ ಜೊತೆಗೇ ಸಾಗಿ ನೋಡಿ”

ಬರುವುದೇ ಇಲ್ಲ ಅನ್ನೋರಿಗೆ ಹೇಗೇ ಕರಕೊಂಡು ಬರಲಿ ಎಂದು ಅವರು ಪ್ರಶ್ನಿಸಿದ್ರು. ನಿಜಕ್ಕೂ ಇದು ನಮ್ಮ ದೇಶದಲ್ಲಿ ಎಲ್ಲರ ಮನೆಯ ಸಮಸ್ಯೆ ಇದೆ ಎಂಬುದು ಗಮನ ಹರಿಸಬೇಕು. ನಾಯಿ ಮರಿಕ್ಕಿಂತ ಮಕ್ಕಳು ದೂರವೆ ಎಂದೇನಿಸಿತು. ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಪ್ರೀತಿಯ ಹರಿಸಬೇಕು, ಆಗ ನಾಯಿ ಮರಿ ಬದಲು ಮಗು ಮತ್ತು ಅದರ ಜೊತೆಗೆ ಸಂಗೀತದ ನಿನಾದ ಇರುತ್ತದೆ. ಅಲ್ವಾ!! ಮಾನಸಿಕವಾಗಿ ಸದೃಡ ಇರಲು ಸಾಧ್ಯ..ಮನಸ್ಸಿನ ನಿಯಂತ್ರಣ ಮತ್ತು ಅದರ ಜೊತೆಗೆ ಸಂಗೀತದ ನಿನಾದ. ಮಕ್ಕಳೊಡನೆ ಮುದ್ದಾದ ಮಾತು, ಆಟ ಪಾಠ ಎಲ್ಲವೂ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯ ಎಂದು ಅರಿಯೋಣ. ಮಹಾ ಸಾಧನೆ ಮಾಡಿದ ಹಾಗೇಯೇ ಎಂದರೂ ತಪ್ಪಲ್ಲ …ಇಂದಿನಿಂದ ನಮ್ಮ ಸುತ್ತ ಮುತ್ತಲಿನ ನಮ್ಮ ಪ್ರೀತಿಗೆ ಹಾತೊರೆಯುವ ಹೆತ್ತವರ,ಮಕ್ಕಳ ಕಾಳಜಿ ವಹಿಸುವುದು ದೃಢವಾಗಿ ನಿರ್ದಾರ ಮಾಡಿ ಅದನ್ನು ಬೇರೆಯವರಿಗೂ ತಿಳಿಸಿ ಹೇಳಿರಿ. ಇದರಿಂದ ನಮಗೆ ಮತ್ತೇ ನಮ್ಮ ಕಳೆದುಕೊಂಡು ಹುಡುಕುತ್ತಿರುವ ನೆಮ್ಮದಿಯ ಬದುಕು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯ
-ಕವಿತಾ ಮಳಗಿ

ಸಾಹಿತಿಗಳು

“ವಿಶ್ವ ಲಿಂಗಾಯತ ಪರಿಷತ್” ಜಿಲ್ಲಾಧ್ಯಕ್ಷರು

“ಬಸವ ಧರ್ಮ” ಪತ್ರಿಕೆಯ ಉಪ ಸಂಪಾದಕರು

Comments