UK Suddi
The news is by your side.

ಕ್ಯಾಷ್ ಕುಮಾರ್ ನಿಂದ ಪಿ೨ಪಿ ಸಾಲ.

ಜನರಿಂದ ಜನರಿಗೆ, ಅಗ್ಗದ ದರದ ಸಾಲ ; ಸಾಲಕ್ಕು ಸೈ, ಹೂಡಿಕೆಗು ಜೈ. ಇದು ಪಿ ೨ ಪಿ ಎಂಬ ಹೊಸ ಪರಿಕಲ್ಪನೆ .

ನೀವು ಓಲ ಅಥವಾ ಊಬರ್ ನಲ್ಲಿ ಪ್ರಯಾಣಿಸಿದಲ್ಲಿ ಈ ಸೇವಗಳು ಹೇಗೆ ಕೆಲಸ ಮಾಡುತ್ತದೆ ಎಂಬ ಅರಿವು ನಿಮಗಿರಬಹುದು ಅಥವಾ ಇದರ ಬಗ್ಗೆ ಎಂದಾದರೂ ಯೋಚಿಸಿರಬಹುದು. ಓಲ ಅಥವಾ ಊಬರ್ ಅಂತಹ ಸೇವಗಳ ಮೂಲ ಪರಿಕಲ್ಪನೆಯೇ ಬೇಡಿಕೆ (demand) ಮತ್ತು ಅಗತ್ಯತೆಗಳನ್ನು (need) ಹೊಂದಾಣಿಸುವುದು ಮತ್ತು ಅದರಿಂದ ಕಮಿಷನ್ ರೂಪದಲ್ಲಿ ಹಣಗಳಿಸುವುದು. ಈ ವ್ಯವಹಾರ ಮಾದರಿಯಲ್ಲಿ, ಸೇವೆ ನಿಡುವವನಿಗೆ ತನ್ನ ಸರಕನ್ನು ಸುಲಭವಾಗಿ ಮಾರುವ, ಗ್ರಾಹಕನಿಗೆ ತನಗೆ ಬೇಕಾದ ಸೇವೆ ಕೂತಲ್ಲೇ ಪಡೆಯುವ , ಹಾಗೂ ಇದನ್ನು ಸಾಧ್ಯವಾಗಿಸಿದ ವ್ಯಕ್ತಿಗೂ ಹಣ ಗಳಿಸುವ ಅವಕಾಶ ನೀಡುತ್ತದೆ.ಇಲ್ಲಿ ಎಲ್ಲಾ ಪಾಲುದಾರರಿಗೂ ಅನುಕೂಲ. ಇದೇ ಪರಿಕಲ್ವನೆಯ ಆಧಾರದ ಮೇಲೆ ಹುಟ್ಟಿಕೊಂಡ ಮತ್ತೊಂದು ಕ್ರಾಂತಿಕಾರಿ ಸೇವೇಯೇ “ಪಿ 2 ಪಿ” ಸಾಲ.

“ಪಿ2ಪಿ” ಸಾಲ ಎಂದರೇನು ?

ಪಿ2 ಪಿ ಎಂದರೆ “ಪೀರ್ ಟು ಪೀರ್” ಅಥವಾ “ ಪರ್ಸನ್ ಟು ಪರ್ಸನ್” ಎಂದು ಅರ್ಥ. ಹೆಸರೇ ಸೂಚಿಸುವಂತೆ, ಇಲ್ಲಿ ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ಸಾಲವನ್ನು ನೀಡುತ್ತಾನೆ. ಇದನ್ನು ಸಾಧ್ಯವಾಗಿಸಲು ಆರ್.ಬಿ.ಐ ನಿಂದ ಪರವಾನಿಗೆ ಪಡೆದ ಕಂಪನಿಗಳು ಕೊಂಡಿಯಾಗಿ ಕಾರ್ಯನಿರ್ವಹಿಸುತ್ತವೆ. ಈ ವ್ಯವಹಾರ ಸಂಪೂರ್ಣವಗಿ ಡಿಜಿಟಲೀಕರಣಗೊಂಡಿದ್ದು, ಎಲ್ಲಾ ವಹಿವಾಟು ಪಿ 2 ಪಿ ಕಂಪನಿಗಳ ಅಂತರ್ಜಾಲ ತಾಣದಲ್ಲಿ ನಡೆಯಲಿದೆ, ಈ ಅಂತರ್ಜಾಲ ತಾಣವು ಮಧ್ಯವರ್ತಿಗಳ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತವೆ.

“ಪಿ2ಪಿ ಸಾಲ ಪರಿಕಲ್ಪನೆಯು ಪಾಶ್ಚಾತ್ಯ ದೇಶಗಳಲ್ಲಿ ಜನಪ್ರಿಯವಾಗಿದ್ದು, ವ್ಯಾಪಕವಾಗಿ ಬೆಳೆದಿದೆ. ಅಮೆರಿಕ ಮತ್ತು ಬ್ರಿಟನ್ ಈ ಮಾರುಕಟ್ಟೆಯಲ್ಲಿ ತಮ್ಮ ಪ್ರಾಬಲ್ಯ ಸಾಧಿಸಿವೆ. ಭಾರತದಲ್ಲಿ ಇದು ಹೊಸ ಪರಿಕಲ್ಪನೆಯಾದರೂ ಉತ್ತಮ ಪ್ರತಿಕ್ರಿಯೆಯನ್ನು ಕಾಣುತ್ತಿದ್ದೇವೆ. ಇದಕ್ಕೆ ಅನುಗುಣವಾಗಿ ಆರ್.ಬಿ.ಐ ತನ್ನ ನೀತಿ ನಿಯಮಗಳ ಮುಖಾಂತರ ಪೂರಕವಾದ ವಾತಾವರಣವನ್ನು ನಿರ್ಮಿಸಿದೆ” ಎಂದು ಕ್ಯಾಶ್ ಕುಮಾರ್ ಡಾಟ್ ಕಾಮ್ (Cashkumar.com) ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧಿರೇನ್ ಮಖೀಜಾ ಹೇಳುತ್ತಾರೆ.,
ಕ್ಯಾಶ್ ಕುಮಾರ್ ಬೆಂಗಳೂರು ಮೂಲದ ಪಿ2ಪಿ ಕಂಪನಿಯಾಗಿದ್ದು, ಆರ್.ಬಿ.ಐ ನಿಂದ NBFC P2P ಪರವಾನಿಗೆ ಪಡೆದಿದೆ.

ಇದು ಹೇಗೆ ಕಾರ್ಯ ನಿರ್ವಹಿಸುತ್ತವೆ ?

ಈಗ ನಿಮಗೆ ತುರ್ತಾಗಿ 1 ಲಕ್ಷ ರೂ. ಸಾಲದ ಅಗತ್ಯವಿದ್ದು ನೀವು ಬಂಕ್‌ನಲ್ಲಿ ಸಾಲ ಪಡೆಯಲು ಮುಂದಾದರೆ ನಿಮಗೆ ಕನಿಷ್ಟ 15 -20 ದಿನಗಳಾದರೂ ಬೇಕಾಗುತ್ತದೆ. ಅಲ್ಲದೆ ನಿಮ್ಮ ಕ್ರೆಡಿಟ್ ಸ್ಕೋರ್, ಮಾಸಿಕ ಆದಾಯ, ಮರು ಪಾವತಿಯ ಸಾಮರ್ಥ್ಯ ಹೀಗೆ ಹತ್ತು ಹಲವು ವಿಚಾರಗಳನ್ನು ಅಳೆದೂ ತೂಗಿ ಶೇ.20-24ರಷ್ಟು ಬಡ್ಡಿಗೆ ಶೇ.80-90ರಷ್ಟು ಸಾಲವನ್ನು ಕೊಡಬಹುದು. ಇನ್ನೊಂದೆಡೆ, ದೇಶದ ಮತ್ತಾವುದೋ ಮೂಲೆಯಲ್ಲಿ ವಾಸಿಸುತ್ತಿರುವ ವ್ಯಕ್ತಿಯು ತನ್ನ ಬಳಿಯಿರುವ 1 ಲಕ್ಷ ರೂಗಳನ್ನು ಎಲ್ಲಾದರೂ ಹೂಡಿಕೆ ಮಾಡಿ, ಆದಾಯ ಪಡೆಯಬೇಕು ಎಂಬ ನಿರೀಕ್ಷೆಯಲ್ಲಿರಬಹುದು. ಇದೇ ವ್ಯಕ್ತಿ ನಿಮಗೆ ಬೇಕಾದ 1 ಲಕ್ಷ ರೂಗಳನ್ನು ಸಾಲ ನೀಡಿದರೆ ಹೇಗೆ ಹಾಗೂ ನೀವು ಆ ಹಣಕ್ಕೆ ಬಡ್ಡಿಯನ್ನು ಕೊಟ್ಟರೆ ಹೇಗಿರುತ್ತದೆ? ಇದನ್ನು ಸಾದ್ಯವಾಗಿಸಲೆಂದೇ ಪಿ2ಪಿ ಕಂಪನಿಗಳು ಕೊಂಡಿಯಾಗಿ ಕಾರ್ಯನಿರ್ವಹಿಸುತ್ತವೆ.

ಸಾಲ ಪಡೆಯಲು ಇಚ್ಛಿಸುವವರು ಸಾಲದ ಮೊತ್ತ, ಅಗತ್ಯತೆಗಳು, ವಿಳಾಸ, ಉದ್ಯೋಗ, ಆದಾಯ ಹಾಗೂ ಮುಂತಾದ ತಮ್ಮ ವಿವರಗಳನ್ನು ಪಿ2ಪಿ ಕಂಪನಿಯ ವೆಬ್‌ಸೈಟ್ ನಲ್ಲಿ ನಮೂದಿಸಬೇಕು. ನಮೂದಿಸಿದ ಈ ವಿವರಗಳನ್ನು ಪಿ2ಪಿ ಕಂಪನಿಯು ಅತ್ಯಂತ ವೇಗವಾಗಿ ಬ್ಯಾಂಕ್ ಗಳಲ್ಲಿ ಪಾಲಿಸುವ ನಿಯಮದ ಪ್ರಕಾರವೇ ಪರಿಶೀಲಿಸುತ್ತದೆ.

ಹಾಗೆಯೇ, ಸಾಲ ಕೊಡಲು ಬಯಸುವವರು ಹೂಡಿಕೆಯ ಮೊತ್ತ, ಬಯಸುವ ಬಡ್ಡಿ ಹಾಗೂ ತಮ್ಮ ಇತರೆ ವಿವರಗಳನ್ನು ನಮೂದಿಸಿ, ಹಣವನ್ನು ತಮ್ಮ ಪಿ2ಪಿ ಖಾತೆಯಲ್ಲಿ ಮುಂಗಡವಾಗಿ ಇಡಬೇಕು.

ಸಾಲ ನೀಡುವವರ ಮತ್ತು ಪಡೆದುಕೊಳ್ಳುವವರ ಅಗತ್ಯತೆಗಳು ಹೊಂದಾಣಿಕೆಯಾಗಿ, ಉಭಯ ಬಣಗಳು ಸಮ್ಮತಿಸಿದರೆ, ಸಾಲವನ್ನು ಸಾಲಗಾರರ ಬ್ಯಾಂಕ್ ಖಾತೆಗೆ ವರ್ಗಾವಣೆಮಾಡಲಾಗುತ್ತದೆ. ಹಾಗೂ ಕಂಪನಿ ಎರಡೂ ಕಡೆಗಳಿಂದ ನಿರ್ದಿಷ್ಟ ಕಮೀಶನ್ ಸ್ವೀಕರಿಸುತ್ತದೆ.

ಹೂಡಿಕೆಗೆ ಉತ್ತಮ ವೇದಿಕೆ :

ಹೂಡಿಕದಾರರು ಬ್ಯಾಂಕ್ ನಲ್ಲಿ ಠೇವಣಿ ಇಟ್ಟರೆ ಶೇ 5 – 6ರಷ್ಟು ಬಡ್ಡಿ ದೊರೆಯಬಹುದು. ಆದರೆ ಪಿ2ಪಿ ಲೆನ್‌ಡಿಂಗ್ ನಲ್ಲಿ ಶೇ 15 – 25ರಷ್ಟು ಬಡ್ಡಿ ಗಳಿಸಬಹುದು. ಪಿ2ಪಿ ಲೆನ್‌ಡಿಂಗ್ ನಲ್ಲಿ ಹಣ ಹೂಡುವುದು ಸಂಪೂರ್ಣ ಕಾನೂನು ಬದ್ದವಾಗಿದೆ.

” ಪಿ2ಪಿ ಮೂಲಕ ಸಾಲ ನೀಡುವ ವ್ಯವಸ್ಥೆಗೆ ಉತ್ತಮ ಭವಿಷ್ಯವಿದೆ. ಇದು ಹುಡಿಕೆಗೆ ಉತ್ತಮ ವೇದಿಕೆಯಾಗಿದೆ ಹಾಗೂ ಹೂಡಿಕೆದಾರರು ಬ್ಯಾಂಕ್ ಗಳಲ್ಲಿ ಸಿಗುವುದಕ್ಕಿಂತ ಹೆಚ್ಚು ಬಡ್ಡಿ ಪಡೆಯಬಹುದು. ನಮ್ಮಲ್ಲಿ ಸುಮಾರು 1000ಕ್ಕೂ ಅದಿಕ ಸಾಲಗಾರರಿದ್ದು ( ಹೂಡಿಕೆದಾರರು) ಶೇ 17-20ರಷ್ಟು ಬಡ್ಡಿಯನ್ನು ಗಳಿಸುತ್ತಿದಾರೆ. ಹೊಸ ಹೂಡಿಕೆದಾರರಲ್ಲಿ ಇರುವ ಗೊಂದಲಗಳನ್ನು ನಿವಾರಿಸಲು ಹಾಗೂ ಪಿ2ಪಿ ಯಲ್ಲಿ ಹೂಡಲು ಇಚ್ಛಿಸುವವರಿಗೆ ಮಾರ್ಗದರ್ಶನ ನೀಡಲು ತಜ್ಞರ ತಂಡ ನಮ್ಮಲ್ಲಿದೆ. ಕೇವಲ 5000 ರೂ ಗಳಿಂದ ಹೂಡಲು ಸಹ ನಮಲ್ಲಿ ಅವಕಾಶವಿದೆ ” ಎಂದು ಧಿರೇನ್ ಮಖೀಜಾ ಹೇಳುತ್ತಾರೆ.

“ಹಣವನ್ನು ಹೂಡುವ ಮುನ್ನ ಹೂಡಿಕೆದಾರರು ಅಗತ್ಯವಾಗಿ ಎಚ್ಚರಿಕೆ ವಹಿಸಬೇಕು. ಆರ್.ಬಿ.ಐ ನಿಂದ ಪರವಾನಿಗೆ ಹೊಂದಿರುವ ಪಿ2ಪಿ ಕಂಪನಿಗಳಲ್ಲಿಯೇ ವ್ಯವಹರಿಸಬೇಕು. ಇದುವರೆಗೆ ಆರ್.ಬಿ.ಐ ಕ್ಯಾಷ್ ಕುಮಾರ್ ಸೇರಿ ಕೇವಲ 8-9 ಸಂಸ್ಥೆಗಳಿಗಷ್ಟೆ ಪರವಾನಿಗೆ ನೀಡಿದೆ . ಮುಖ್ಯವಾಗಿ ತಾಳ್ಮೆಯಿಂದ ಸಣ್ಣ ಮೊತ್ತ ದಲ್ಲಿ ಪಿ2ಪಿ ಯಲ್ಲಿ ಹೂಡೂವುದನ್ನು ಕಲಿತು ನಂತರ ದೊಡ್ಡ ಮೊತ್ತವನ್ನು ಹೂಡುವುದು ಉತ್ತಮ” ಎಂದು ಬೆಂಗಳೂರು ಮೂಲದ ಕ್ಯಾಷ್ ಕುಮಾರ್ ಸಂಸ್ಥೆಯ ಧಿರೇನ್ ಮಖೀಜಾ ಸಲಹೆ ನೀಡುತ್ತಾರೆ.

Comments