UK Suddi
The news is by your side.

ಅಷ್ಟಕ್ಕೂ ಕೇಂದ್ರ ಬಜೆಟ್ ನ ಪ್ರಮುಖ ಅಂಶಗಳೆನು ಗೋತ್ತಾ…

ನವದೆಹಲಿ: ಪ್ರಧಾನಿ ಮೋದಿ ಸರ್ಕಾರದ ಕೊನೆ ವರ್ಷದ ಬಜೆಟ್ ಇಂದು ಮಂಡನೆಯಾಗಿದೆ. ಬಜೆಟ್ ಮಂಡಿಸಿದ ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯಲ್, ಮಧ್ಯಮವರ್ಗದ ತೆರಿಗೆದಾರರು ಹಾಗೂ ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ.

ನರೇಂದ್ರ ಮೋದಿ ಸರ್ಕಾರದ ಕೊನೆ ಬಜೆಟ್ನಲ್ಲಿ ರೈತರಿಗೆ ಬಂಪರ್ ಕೊಡುಗೆ ನೀಡಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ ಸಣ್ಣ ಮತ್ತು ಮಧ್ಯಮ ರೈತರ ಖಾತೆಗಳಿಗೆ ವಾರ್ಷಿಕ 6 ಸಾವಿರ ರೂಪಾಯಿ ಜಮಾ ಮಾಡಲಿದೆ. ಈ ಯೋಜನೆಗಳ ಮೂಲಕ ಒಟ್ಟು ಮೂರು ಕಂತುಗಳಲ್ಲಿ ರೈತರಿಗೆ ಹಣ ನೀಡಲಾಗುವುದು, ಇದರಿಂದ 12 ಕೋಟಿ ರೈತರಿಗೆ ಸಹಾಯವಾಗಲಿದೆ. 2018 ಡಿಸೆಂಬರ್‌ನಿಂದ ಪೂರ್ವಾನ್ವಯವಾಗುವಂತೆ ಈ ಯೋಜನೆ ಜಾರಿಗೊಳಿಸಲಾಗಿದೆ. ಈ ಡಿಸೆಂಬರ್ನ 2000 ರೂಪಾಯಿ ಮೊತ್ತವನ್ನ ಈಗಿನಿಂದಲೇ ರೈತರ ಖಾತೆಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು. ಈ ಯೋಜನೆಯ ಸಂಪೂರ್ಣ ವೆಚ್ಚವನ್ನ ಕೇಂದ್ರವೇ ಭರಿಸಲಿದ್ದು. ಬಜೆಟ್ನಲ್ಲಿ ಇದಕ್ಕಾಗಿ 75 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ಗೋಯಲ್‌ ಹೇಳಿದರು.

ಅಸಂಘಟಿತ ವಲಯದ ಕರ್ಮಿಕರಿಗಾಗಿ ಮಧ್ಯಂತರ ಬಜೆಟ್ ನಲ್ಲಿ ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧಾನ್ ಪಿಂಚಣಿ ಯೋಜನೆ ಘೋಷಿಸಲಾಗಿದೆ. ತಿಳಗಳಿಗೆ ನೂರು ರೂಪಾಯಿ ಕಟ್ಟುವ ಮೂಲಕ ಈ ಪಿಂಚಿಣಿ ಯೋಜನೆಗೆ ಅಸಂಘಟಿತ ವಲಯದ ಕಾರ್ಮಿಕರು ಹೆಸರು ನೋಂದಾಯಿಸಿಕೊಳ್ಳಬೇಕು. ಹೀಗೆ ಹೆಸರು ನೊಂದಾಯಿಸಿಕೊಂಡವರಿಗೆ 60 ವರ್ಷ ವಯಸ್ಸಾದ ನಂತರ ತಿಂಗಳಿಗೆ 3000 ಪಿಂಚಿಣಿ ದೊರೆಯಲಿದೆ ಎಂದು ಗೋಯಲ್ ತಿಳಿಸಿದರು.

ವೈಯಕ್ತಿಕ ಆದಾಯ ಮಿತಿಯನ್ನು 2.5 ರೂಪಾಯಿ ಯಿಂದ 5ಲಕ್ಷ ರೂಪಾಯಿ ವರೆಗೆ ಏರಿಸಲಾಗಿದೆ. ಅಲ್ಲದೇ, 6.5 ಲಕ್ಷದವರೆಗೆ ವಾರ್ಷಿಕ ಆದಾಯ ಇರುವವರು ಯಾವುದೇ ತೆರಿಗೆ ಪಾವತಿಸುವಂತಿಲ್ಲ ಎಂದು ಹಣಕಾಸು ಸಚಿವ ಪಿಯೂಶ್‌ ಗೋಯಲ್‌ ಹೇಳಿದ್ದಾರೆ. ವೈಯಕ್ತಿಕ ಆದಾಯ ತೆರಿಗೆ ಮಿತಿ ಹೆಚ್ಚಳದಿಂದ 3 ಕೋಟಿಗೂ ಅಧಿಕ ಮಧ್ಯಮವರ್ಗದ ತೆರಿಗೆದಾರರಿಗೆ ಲಾಭವಾಗಲಿದೆ.

ಸಂಬಳ ಪಡೆಯುವ ಉದ್ಯೋಗಿಯ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಮಿತಿಯನ್ನ 40 ಸಾವಿರದಿಂದ 50 ಸಾವಿರ ರೂಪಾಯಿವರೆಗೆ ಏರಿಸಲಾಗಿದೆ. ಅಲ್ಲದೇ, ಬಡ್ಡಿ ಆದಾಯ ತೆರಿಗೆ ಮಿತಿಯನ್ನ 10 ಸಾವಿರದಿಂದ 40 ಸಾವಿರ ರೂಪಾಯಿವರೆಗೆ ಏರಿಕೆ ಮಾಡಲಾಗಿದೆ. ಜೊತೆಗೆ ಗೃಹ ಸಾಲಕ್ಕೆ 2 ಲಕ್ಷದವರೆಗೂ ತೆರಿಗೆ ವಿನಾಯಿತಿ ನೀಡಲಾಗಿದೆ.

ಗ್ರಾಚ್ಯೂಟಿ ತೆರಿಗೆ ಮಿತಿಯಲ್ಲಿ ಭಾರಿ ಏರಿಕೆ ಮಾಡಲಾಗಿದೆ. ಇಲ್ಲಿಯವರೆಗೂ 10 ಲಕ್ಷ ರೂಪಾಯಿಯಷ್ಟಿದ್ದ ಗ್ರಾಚ್ಯೂಟಿ ತೆರಿಗೆ ಮಿತಿಯನ್ನ 30 ಲಕ್ಷಕ್ಕೆ ಏರಿಸಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದ ಸಾಲಿನಲ್ಲಿ 10 ಲಕ್ಷದೊಳಗಿನ ಗ್ರಾಚ್ಯೂಟಿಗೆ ತೆರಿಗೆ ವಿನಾಯಿತಿ ಇತ್ತು ಈಗ 30 ಲಕ್ಷದೊಳಗಿನ ಗ್ರಾಚ್ಯೂಟಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ.

ಆಯುಷ್ಮಾನ್ ಭಾರತ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದೆ. ಈ ಯೋಜನೆಯಿಂದ 50ಕೋಟಿ ಜನರಿಗೆ ಸಹಾಯವಾಗಿದೆ. ಜನೌಷಧ ಕೇಂದ್ರಗಳಿಂದ ಜನರಿಗೆ ಕಡಿಮೆ ದರದಲ್ಲಿ ಔಷಧಿ ನೀಡಲಾಗಿದೆ.

ಸ್ವಚ್ಛ ಭಾರತ್ ಯೋಜನೆ ಕಾಂತಿಕಾರಕ ಯೋಜನೆಯಾಗಿದ್ದು, ಶೇಕಡ 98 ಗ್ರಾಮಗಳಲ್ಲಿ ನೈರ್ಮಲ್ಯ ಸಾಧಿಸಲಾಗಿದೆ. 5.45 ಲಕ್ಷ ಹಳ್ಳಿಗಳು ಬಹಿರ್ದೆಸೆ ಮುಕ್ತವಾಗಿದೆ ಎಂದು ಪಿಯೂಷ್ ಗೋಯಲ್ ಹೇಳಿದರು.

ಸೇವಾವಧಿಯಲ್ಲಿ ಮೃತಪಟ್ಟ ಕಾರ್ಮಿಕರಿಗೆ ₹6 ಲಕ್ಷ ಪರಿಹಾರ. ಮುಂದಿನ 5 ವರ್ಷಗಳಲ್ಲಿ 8 ಕೋಟಿ ಎಲ್ಪಿಜಿ ಗ್ಯಾಸ್ ಸಂಪರ್ಕ ಒದಗಿಸುವ ಗುರಿ.ರಕ್ಷಣಾ ಬಜೆಟ್ 3 ಲಕ್ಷ ಕೋಟಿ. ಅಂಗನವಾಡಿ ಕಾರ್ಯಕರ್ತೆಯರ ಆದಾಯದಲ್ಲಿ ಶೇ. 50ರಷ್ಟು ಏರಿಕೆ.ಬ್ಯಾಂಕ್,

ಪೋಸ್ಟ್ ಆಫೀಸ್ ಠೇವಣಿ ಮೇಲಿನ ಬಡ್ಡಿಗೆ ಟಿಡಿಎಸ್ ಮಿತಿ 40 ಸಾವಿರ ರೂಪಾಯಿಗೆ ಏರಿಕೆ. 2030ರೊಳಗೆ ಪ್ರತಿ ಪ್ರಜೆಗೂ ಡಿಜಿಟಲ್ ಇಂಡಿಯಾ ತಲುಪಿಸುವ ಗುರಿ.ನದಿಗಳ ಸ್ವಚ್ಛತೆ ಹಾಗೂ ಪ್ರತಿ ಭಾರತೀಯನಿಗೂ ಸುರಕ್ಷಿತ ಕುಡಿಯುವ ನೀರು ಪೂರೈಕೆ ಮಾಡುವ ಗುರಿ.

2022ರೊಳಗೆ ಬಾಹ್ಯಾಕಾಶದಲ್ಲಿ ಭಾರತದ ಗಗನಯಾತ್ರಿಯನ್ನ ಕಳಿಸುವ ಗುರಿ.5 ವರ್ಷಗಳಲ್ಲಿ 1 ಲಕ್ಷ ಡಿಜಿಟಲ್ ಗ್ರಾಮಗಳ ನಿರ್ಮಾಣ. ಭ್ರಷ್ಟಾಚಾರ ವಿರೋಧಿ ನೀತಿಗಳಿಂದ ಕಳೆದ ವರ್ಷ 1.3 ಲಕ್ಷ ಕೋಟಿಯಷ್ಟು ಘೋಷಿಸದ ಆದಾಯ ವಾಪಸ್ ಚಲಾವಣೆಗೆ ಬಂದಿದೆ.ನೋಟ್ಬ್ಯಾನ್ನಿಂದ 1 ಕೋಟಿ ಜನರು ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡಿದ್ದಾರೆ.

ರಕ್ಷಣಾ ವಲಯಕ್ಕೆ 3 ಲಕ್ಷ ಕೋಟಿ. ರೂ. ಗೂ ಅಧಿಕ ಮೊತ್ತ ಮೀಸಲು. ಎಸ್‌ಟಿ ವರ್ಗಕ್ಕೆ 50,000 ಕೋ. ರೂ., ಎಸ್‌ಸಿ ವರ್ಗಕ್ಕೆ 76,000 ಕೋ. ರೂ. ಅನುದಾನ.

Comments