UK Suddi
The news is by your side.

ಅಸಲಿಗೆ ಮುತಗಾ ಗ್ರಾಮದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದ್ದು ಸ್ಥಳೀಯ ಗ್ರಾ.ಪಂ ಅಧ್ಯಕ್ಷೆ, ಸದಸ್ಯರು.

ಬೆಳಗಾವಿ: ಇತ್ತೀಚೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮುತಗಾ ಗ್ರಾಮದಲ್ಲಿ ರಸ್ತೆ ಕಾಮಗಾರಿಯೊಂದಕ್ಕೆ ಸ್ಥಳೀಯ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಅವರ ಪುತ್ರ ಮೃನಾಲ್ ಭೂಮಿ ಪೂಜೆ ಸಲ್ಲಿಸುತ್ತಿರುವ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಅದನ್ನು ನೋಡಿದವರೆಲ್ಲ ಶಾಸಕರು ಭೂಮಿ ಪೂಜೆ ಮಾಡುವಲ್ಲಿ ಶಿಷ್ಟಚಾರ ಉಲ್ಲಂಘಿಸಿ ಅವರ ಪುತ್ರ ಏಕೆ ಭೂಮಿ ಪೂಜೆ ಮಾಡಿದ್ದಾರೆ ಎಂದು ತಮ್ಮ ತಮ್ಮಲ್ಲಿ ಮಾತನಾಡಿಕೊಂಡಿದ್ದರು.

ಆದರೆ ಅಸಲಿಗೆ ಆ ದಿನ ಮುತಗಾ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಮೊದಲು ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದ್ದು ಸ್ಥಳೀಯ ಗ್ರಾ.ಪಂ ಅಧ್ಯಕ್ಷೆ ಹಾಗೂ ಸದಸ್ಯರು…

ಗ್ರಾ.ಪಂ ಅಧ್ಯಕ್ಷೆ ಮಂಗಲಾ ಕೊಂಪಿ, ಗ್ರಾ.ಪಂ ಸದಸ್ಯರಾದ ರವಿ ಕೊಟಬಾಗಿ, ಗಜಾನನ ಕನಬಾರಕರ್, ಸಂಗಮೇಶ ಸ್ಥಳದಲ್ಲಿದ್ದು ಭೂಮಿ ಪೂಜೆ ಸಲ್ಲಿಸಿದ್ದರು.

ನಂತರ ಅಲ್ಲೆ ಇದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಪುತ್ರ ಮೃನಾಲ್ ಗ್ರಾ.ಪಂ ಅದ್ಯಕ್ಷೆ, ಸದಸ್ಯರ ಒತ್ತಾಯದ ಮೇರೆಗೆ ಗುದ್ದಲಿ ಹಿಡಿದು ಒಂದೆರಡು ಪೆಟ್ಟು ಭೂಮಿಗೆ ಹಾಕಿದ್ದು ಅಷ್ಟೆ. ಅದು ಅಲ್ಲದೆ ಉತ್ತರ ಕರ್ನಾಟಕ ಭಾಗದಲ್ಲಿ ಯಾವುದೇ ಪೂಜೆ ನಡೆಯುತ್ತಿದ್ದರು ಸ್ಥಳದಲ್ಲಿರುವ 5 ಜನ ಕೈ ಜೋಡಿಸುವುದು ವಾಡಿಕೆ ಇದೆ.

ಈ ಕುರಿತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಪ್ರತಿಕ್ರಿಯಿಸಿದ್ದು ಮುತಗಾ ಗ್ರಾಮದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸುವಲ್ಲಿ ಯಾವುದೇ ಶಿಷ್ಟಚಾರ ಉಲ್ಲಂಘನೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Comments