UK Suddi
The news is by your side.

ಇದು ಎಲ್ಲರ ಮೂಗಿಗೆ ತುಪ್ಪ ಹಚ್ಚಿ ಎಲ್ಲರನ್ನೂ ಹುಚ್ವು ಮಾಡುವ ಬಜೆಟ್

ಬೆಳಗಾವಿ: ಹೆಣ್ಣು ಹಡೆದು ಹೆಣ್ಣಿಗೆ ಶಿಕ್ಷಣ ಕೊಡಿಸಲು ಸಾಲ ಪಡೆದ ಪಾಲಕರಿಗೆ ಕೇಂದ್ರದ ಬಿಜೆಪಿ ಸರ್ಕಾರದ ಬಜೆಟ್ ಶಾಕ್ ನೀಡಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ನಾಳಕರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೇಟಿ ಪಡಾವ್ ಬೇಟಿ ಬಚಾವ್ ಎಂದು ಶ್ಲೋಘನ್ ಬಿತ್ತರಿಸಿ ಹೆಣ್ಣು ಉನ್ನತ ಶಿಕ್ಷಣಕ್ಕಾಗಿ ಪಡೆದ ಸಾಲ ಮನ್ನಾ ಮಾಡದೇ ಸಾಲದ ಬಡ್ಡಿಯನ್ನೂ ಮನ್ನಾ ಮಾಡದ ಸರ್ಕಾರ ಮೊತ್ತೊಮ್ಮೆ ಸುಳ್ಞಿನ ಸರ್ಕಾರ ಎಂದು ಸಾಭೀತು ಮಾಡಿದೆ ಎಂದು ಲಕ್ಷ್ಮೀ ಹೆಬ್ಬಾಳಕರ ಮೋದಿ ಸರ್ಕಾರದ ಬಜೆಟ್ ಟೀಕಿಸಿದ್ದಾರೆ

ಕೇಂದ್ರದ ಬಿಜೆಪಿ ಸರ್ಕಾರ ದೇಶದ ಅನ್ನದಾತನ ಅಕೌಂಟ್ ಗೆ ಆರು ಸಾವಿರ ಜಮಾ ಮಾಡುವ ನಿರ್ಧಾರ ಕೈಗೊಂಡು ರೈತರ ಸಾಲವನ್ನು ಮನ್ನಾ ಮಾಡದೇ ರೈತರ ವಿಶ್ವಾಸ ಕಳೆದುಕೊಂಡಿದೆ ಯಾರಿಗೂ ಸಹಾಯ ಮಾಡದೇ ಯಾರಿಗೂ ನೆರವು ನೀಡದೇ ಎಲ್ಲರ ಮೂಗಿಗೆ ತುಪ್ಪ ಹಚ್ಚಿ ಎಲ್ಲರನ್ನೂ ಹುಚ್ವು ಮಾಡುವ ಬಜೆಟ್ ಇದಾಗಿದೆ

ಬಂಡವಾಳ ಶಾಹಿಗಳ ಪರವಾಗಿರುವ ಕೇಂದ್ರದ ಮೋದಿ ಸರ್ಕಾರ ಉಳ್ಳವರ ಪರವಾಗಿರುವ ಬಂಡವಾಳ ಶಾಹಿಗಳಿಗೆ ತೃಪ್ತಿಪಡಿಸು ಬಜೆಟ್ ಮಂಡಿಸಿದ್ದಾರೆ ಎಂದು ಹೆಬ್ಬಾಳಕರ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ

Comments