UK Suddi
The news is by your side.

ಡಾ.ಕೆ ಎಸ್ ಪರವ್ವಗೋಳಗೆ ಪಿಎಚ್ಡಿ ಪದವಿ-ಸಂಸ್ಥೆಯಿಂದ ಅಭಿನಂದನೆ.

ಗೋಕಾಕ(ಬೆಳಗಾವಿ):ತಾಲೂಕಿನ ಕಲ್ಲೋಳ್ಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಕೆಂಪಣ್ಣ ಎಸ್. ಪರವ್ವಗೋಳ ಅವರು ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಡಾ.ಎಸ್.ಆರ್.ಚನ್ನವೀರಪ್ಪ ಇವರ ಮಾರ್ಗದರ್ಶನದಲ್ಲಿ ‘ಬೆಳಗಾವಿ ಜಿಲ್ಲೆಯ ಹಸ್ತಪ್ರತಿಗಳ ಸಾಂಸ್ಕøತಿಕ ಅನನ್ಯತೆ’ ಎಂಬ ವಿಷಯದಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಮಹಾಪ್ರಬಂಧ ಮಂಡಿಸಿ ದಿನಾಂಕ 30-01-2019ರಂದು ಜರುಗಿದ ‘ನುಡಿಹಬ್ಬ 27’ ಘಟಿಕೋತ್ಸವ ಸಮಾರಂಭದಲ್ಲಿ ಪಿ.ಎಚ್‍ಡಿ ಪದವಿ ಪ್ರದಾನ ಮಾಡಲಾಯಿತು.

ಡಾ.ಕೆಂಪಣ್ಣ.ಎಸ್. ಪರವ್ವಗೋಳ ಅವರಿಗೆ ಸಂಸ್ಥೆಯ ಅಧ್ಯಕ್ಷರಾದ ಬಿ.ಎಸ್.ಪಾಟೀಲ, ಕಾಲೇಜಿನ ಪ್ರಾಚಾರ್ಯ ಡಾ.ಸುರೇಶ ಹನಗಂಡಿ, ಆಡಳಿತ ಮಂಡಳಿಯ ಸರ್ವ ಸದಸ್ಯರು,ಎಲ್ಲ ಅಧ್ಯಾಪಕರು ಹಾಗೂ ವಿದ್ಯಾರ್ಥಿ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.

Comments