UK Suddi
The news is by your side.

ಪೋಲಿಸರ ಭರ್ಜರಿ ಕಾರ್ಯಾಚರಣೆ: 19 ವರ್ಷ ವಯಸ್ಸಿನ ಕಳ್ಳರ ಬಂಧನ.

ಬೆಳಗಾವಿ: ಹಗಲಿನಲ್ಲಿಯೇ ಕಳುವು ಮಾಡಿ ಪರಾರಿಯಾಗುತ್ತಿದ್ದ ಹಾಗೂ ಇತ್ತೀಚಿಗೆ ಜಿಲ್ಲೆಯಲ್ಲಿ ನಡೆದ ಮಚ್ಛೆ ಹಾಗೂ ದೇಸೂರ ಗ್ರಾಮದಲ್ಲಿ ಕಳುವುಗಳಲ್ಲಿ ಭಾಗಿಯಾಗಿದ್ದ ಇಬ್ಬರು ಯುವಕರನ್ನು ಗ್ರಾಮೀಣ ಠಾಣೆ ಪೋಲಿಸರು ಬಂಧಿಸಿದ್ದಾರೆ.

ರೂಪೇಶ ಹಲಗೇಕರ ಹಾಗೂ ಭಜರಂಗ ಕುಟ್ರೆ ಎಂಬ 19 ವಯಸ್ಸಿನ ಯುವಕರು ಬಂಧಿತರು. ಇವರಿಂದ ಸುಮಾರು 7 ಲಕ್ಷಕ್ಕೂ ಅಧಿಕ ಬೆಲೆಯ ದ್ವಿಚಕ್ರ ವಾಹನಗಳು ಹಾಗೂ ಬಂಗಾರ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಗ್ರಾಮೀಣ ACP ಬಾಲಚಂದ್ರ ಎಸ್, ಹಾಗೂ ACP ಮಹಾತೇಶ್ವರ ಜಿದ್ದಿ ಮಾರ್ಗದರ್ಶನದಲ್ಲಿ ನಡೆದ ಈ ದಾಳಿಯಲ್ಲಿ CPI ಸಂಗಮೇಶ ಶಿವಯೋಗಿ, ಸಂಜು ಕಾಂಬಳೆ , ಗುರುರಾಜ ಕಲ್ಯಾಣಶೆಟ್ಟಿ, ಬಿ.ಆರ್, ಗಡ್ಡೇಕರ ಹಾಗೂ ಇತರ ಸಿಬ್ಬಂದಿ ಭಾಗವಹಿಸಿದ್ದರು.

Comments