UK Suddi
The news is by your side.

ಬೆಳ್ತಂಗಡಿ ಗೃಹರಕ್ಷಕದಳ ಕಛೇರಿಗೆ ಜಿಲ್ಲಾ ಸಮಾದೇಷ್ಠರ ಭೇಟಿ.

ಬೆಳ್ತಂಗಡಿ: ಇಲ್ಲಿನ ಗೃಹರಕ್ಷಕದಳ ಕಛೇರಿಗೆ ಜಿಲ್ಲಾ ಸಮಾದೇಷ್ಠರು ಡಾ: ಮುರಲೀ ಮೋಹನ್ ಚೂಂತಾರು ಭೇಟಿ ನೀಡಿ ಕವಾಯತು ವೀಕ್ಷಣೆ ನಡೆಸಿ ಗೃಹರಕ್ಷಕರ ಕುಂದು ಕೊರತೆಗಳ ಹಾಗೂ ಕರ್ತವ್ಯಗಳ ಬಗ್ಗೆ ಚರ್ಚಿಸಿದರು.

ನಿಷ್ಕ್ರೀಯ ಗೃಹರಕ್ಷಕರನ್ನು ತೆಗೆದು ಹೊಸ ಗೃಹರಕ್ಷಕರನ್ನು ನೇಮಿಸುವಂತೆ ಸೂಚಿಸಿದರು. ಹಾಗೂ ಮುಂಬರುವ ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ಹೆಚ್ಚನ ಸಂಖ್ಯೆಯಲ್ಲಿ ಗೃಹರಕ್ಷಕರನ್ನು ನಿಯೋಜಿಸಲು ಸೂಚಿಸಿದರು.

ಗೃಹರಕ್ಷಕರ ಕ್ಷೇಮಾಭಿವೃದ್ಧಿ ನಿಧಿ ವಂತಿಕೆಯನ್ನು ನೀಡಲು ಹಾಗೂ ಸಮೂಹ ವಿಮೆ ಮಾಡಿಸಲು ಸೂಚಿಸಿದರು. ಏಪ್ರಿಲ್ ತಿಂಗಳಿನಿಂದ ಎಲ್ಲಾ ಗೃಹರಕ್ಷಕರಿಗೂ ಕಡ್ಡಾಯವಾಗಿ ಬೆರಳಚ್ಚು ಹಾಜರಾತಿ ಮತ್ತು ಕಡ್ಡಾಯವಾಗಿ ಸರದಿ ಆಧಾರದ ಮೇಲೆ ಕರ್ತವ್ಯಕ್ಕೆ ನಿಯೋಜಿಸಲು ಕೇಂದ್ರ ಕಛೇರಿಯಿಮದ ಆದೇಶ ಬಂದಿರುತ್ತದೆ ಮತ್ತು ಎಲ್ಲಾ ಗೃಹರ್ಷಕರು ಈ ಹೊಸ ಬದಲಾವಣೆಗೆ ಮಾನಸಿಕವಾಗಿ ಸಿದ್ದರಾಗಿರಬೇಕು ಎಂದು ಹೇಳಿದರು.

ಹಾಗೂ ಉಪ ಸಮಾದೇಷ್ಠರಾದ ರಮೇಶ್ ರವರು ಉಪಸ್ಥಿತರಿದ್ದರು ಬೆಳ್ತಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ಜಯಾನಂದ ಹಾಗೂ ಬೆಳ್ತಂಗಡಿ ಘಟಕದ ಗೃಹರಕ್ಷಕರು ಉಪಸ್ಥಿತರಿದ್ದರು.

Comments