UK Suddi
The news is by your side.

ಬ್ರೇಕಿಂಗ್:ಸಾಮೂಹಿಕ ರಾಜೀನಾಮೆಗೆ ಮುಂದಾದ ಕಾಂಗ್ರೆಸ್ಸ್ ಮುಖಂಡರು.

ದಾಂಡೇಲಿ:ಈಗಾಗಲೆ ದಾಂಡೇಲಿ ಬ್ಲಾಕ್‍ ಕಾಂಗ್ರೆಸ್‍ ಅಧ್ಯಕ್ಷರಾದ ಸೈಯದ ತಂಗಳ ಅವರು ಹುದ್ದೆಗೆ ರಾಜಿನಾಮೆ ನೀಡಿದ್ದಾರೆ.ಸೈಯದ ತಂಗಳ ಅವರರಾಜಿನಾಮೆಯನ್ನುಅಂಗೀಕರಿಸಬಾರದು, ಒಂದು ವೇಳೆ ಅಂಗೀಕರಿಸಿದ್ದಲ್ಲಿ ನಿಗಮ ಮಂಡಳಿಯಲ್ಲಿ ಪ್ರಮುಖ ಸ್ಥಾನವನ್ನು ನೀಡಿ ಸೈಯದ ತಂಗಳ ಅವರ ಪಕ್ಷ ಸೇವೆಗೆ ಮಹತ್ವದ ಅವಕಾಶ ನೀಡಬೇಕು.ಇದು ಯಾವುದು ಆಗದಿದ್ದಲ್ಲಿ ತಾವು ಸಹ ತಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವದಾಗಿ ತಾಲೂಕಿನ ಕಾಂಗ್ರೆಸ್ಸ್ ಮುಖಂಡರು ಸ್ಪಷ್ಟ ಪಡಿಸಿದ್ದಾರೆ.

ಹೌದು,ಸೈಯದ್ ತುಂಗಳ ಅವರ ರಾಜೀನಾಮೆ ಅಂಗೀಕರಿಸಿದರೆ ದಾಂಡೇಲಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ರೇಣುಕಾ ಬಂದಂ,ಕೆನರಾ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಸೀರ ಗಿರಿಯಾಳ,ಯುವ ಕಾಂಗ್ರೆಸ್ ‍ಕ್ಷೇತ್ರಾಧ್ಯಕ್ಷ ರಾಜೇಶ ರುದ್ರಪಾಟಿಯವರು ಸೇರಿದಂತೆ ಹಲವಾರು ಕಾಂಗ್ರೆಸ್ಸ್ ಮುಖಂಡರು ರಾಜೀನಾಮೆ ನೀಡುವದಾಗಿ ಸ್ಪಷ್ಟಪಡಿಸಿದ್ದಾರೆ.

ಮುತ್ಸದ್ದಿ ರಾಜಕಾರಣಿ ಆರ್ ವಿ ದೇಶಪಾಂಡೆಯವರು ಸೈಯದ ತಂಗಳ ಅವರ ರಾಜಿನಾಮೆಗೆ ಸಂಬಂಧಿಸಿದಂತೆ ನ್ಯಾಯೋಚಿತ ಮತ್ತು ದಾಂಡೇಲಿ ಜನತೆ ಹೆಮ್ಮೆ ಪಡುವಂತಹ ನಿರ್ಧಾರವನ್ನು ಕೈಗೊಳ್ಳಲಿದ್ದಾರೆಂಬ ವಿಶ್ವಾಸ ಬಲವಾಗಿದೆ.ದೇಶಪಾಂಡೆಯವರ ಆಶೀರ್ವಾದ ಮತ್ತು ನಮ್ಮೆಲ್ಲರನ್ನು ಸಹೋದರತ್ವದಿಂದ ಬೆಳೆಸಿ,ಪಕ್ಷ ಸಂಘಟನೆಗೆ ನಮ್ಮನ್ನು ನಾವು ತೊಡಗಿಸಿಕೊಳ್ಳಲು ಪ್ರಮುಖಕಾರಣರಾಗಿ,ದಾಂಡೇಲಿಯಲ್ಲಿಕಾಂಗ್ರೆಸ್ ಪಕ್ಷದ ಸಂಘಟನೆಗೆ ತನ್ನನ್ನು ತಾನು ಸಮರ್ಪಿಸಿಕೊಂಡ ಸೈಯದ ತಂಗಳ ಅವರು ಪಕ್ಷದ ಅಧ್ಯಕ್ಷರಾಗಿ ಮುಂದುವರೆಯಬೇಕು,ಇಲ್ಲವೆ ನಿಗಮ ಮಂಡಳಿಯಲ್ಲಿ ಪ್ರಮುಖ ಸ್ಥಾನವಾದರೂ ಅವರಿಗೆ ದೊರೆಯಬೇಕು.ಇಲ್ಲವಾದಲ್ಲಿ ನಾವೆಲ್ಲರೂ ಸೇರಿ ನಮ್ಮ ಯುವಕಾಂಗ್ರೆಸ್ ಪದಾಧಿಕಾರಿಗಳು,ಸದಸ್ಯರುಗಳು ಹುದ್ದೆಗೆ ಸಾಮೂಹಿಕ ರಾಜಿನಾಮೆಯನ್ನು ನೀಡುವುದು ನಿಶ್ಚಿತ ಎಂದಿದ್ದಾರೆ.

ಸೈಯದ ತಂಗಳ ಅವರಿಲ್ಲದಿದ್ದರೇ ನಗರದಲ್ಲಿ ಪಕ್ಷ ಬಡವಾಗುವುದರಲ್ಲಿ ಯಾವ ಅನುಮಾನವು ಇಲ್ಲ. ಪಕ್ಷಕ್ಕಾಗಿ ಶ್ರಮಿಸಿದ ಸೈಯದ ತಂಗಳ ಅವರಿಗೆ ಪಕ್ಷ ಸೂಕ್ತ ಮನ್ನಣೆಯನ್ನು ನೀಡಬೇಕೆಂದು ಕಾಂಗ್ರೆಸ್ಸ್ ಮುಖಂಡರುಗಳು ಆಗ್ರಹಿಸಿದ್ದಾರೆ.

Comments