UK Suddi
The news is by your side.

ವಾರ್ತಾ ಇಲಾಖೆಯ ಎಂ.ಎಸ್.ಪೆಂಡಾರಿ ಅವರಿಗೆ ಬೀಳ್ಕೊಡುಗೆ.

ಧಾರವಾಡ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ವಾಹನ ಚಾಲಕರಾಗಿ ಕಳೆದ 32 ವರ್ಷಗಳಿಂದ ಬೆಳಗಾವಿ, ಹುಬ್ಬಳ್ಳಿ ಮತ್ತು ಧಾರವಾಡ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಂ.ಎಸ್. ಪೆಂಡಾರಿ ಅವರು ಗುರುವಾರದಂದು ನಿವೃತ್ತಿ ಹೊಂದಿದರು.

ಅವರನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಧಾರವಾಡ ಮೀಡಿಯಾ ಕ್ಲಬ್ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ಕಾರ್ಯಕ್ರಮದಲ್ಲಿ ವಾರ್ತಾ ಸಹಾಯಕಾಧಿಕಾರಿ ಸುರೇಶ್ ಹಿರೇಮಠ, ಪ್ರಥಮ ದರ್ಜೆ ಸಹಾಯಕ ಸಿ.ಬಿ.ಭೋವಿ, ಶೀಘ್ರಲಿಪಿಗಾರರಾದ ಪವಿತ್ರಾ ಬಾರಕೇರ್ ಸೇರಿದಂತೆ ಸಂಗಪ್ಪ ಯರಗುದ್ದಿ, ಎ.ಎಚ್. ನದಾಫ್, ಶಿವಾನಂದ ಭೋವಿ, ಬಸವರಾಜ ಕಾಳೆ, ಅಕ್ಷಯ್ ದೊಡ್ಡಮನಿ, ಛಾಯಾಗ್ರಾಹಕರಾದ ಮಹಾದೇವ ಪಾಟೀಲ್, ಮಿಲಿಂದ್ ಪೀಸೆ, ರಾಮಚಂದ್ರ ಕುಲಕರ್ಣಿ ಹಾಗೂ ಪತ್ರಕರ್ತರಾದ ಮುಸ್ತಫಾ ಕುನ್ನಿಭಾವಿ, ರಾಜು ಕರಣಿ, ಜಾವಿದ್ ಅಧೋನಿ, ಪ್ರಶಾಂತ ದಿನ್ನಿ, ಡಿ.ವಿ. ಕಮ್ಮಾರ ಸೇರಿದಂತೆ ಪತ್ರಕರ್ತರು ಹಾಗೂ ಇನ್ನಿತರರು ಭಾಗವಹಿಸಿದ್ದರು.

-Dharawad VB

Comments