UK Suddi
The news is by your side.

ಹೊಸ ದಾಖಲೆ ಸೃಷ್ಟಿಸಿದ ಡಾ.ಅಂಬಿಕಾ ಹಂಚಾಟೆ.

ಶಿಕ್ಷಣ ತಜ್ಞೆ ಹಾಗೂ ಕರ್ನಾಟಕ ಆಚೀವರ್ಸ್ ಬುಕ್ ಆಫ್ ರೇಕರ್ಡ್ ನ ಸಂಸ್ಥಾಪಕ ಅಧ್ಯಕ್ಷೆಯಾದ ಡಾ.ಅಂಬಿಕಾ ಹಂಚಾಟೆ ಯವರು ಈಗಾಗಲೇ ಶಿಕ್ಷಣ ,ಸಾಹಿತ್ಯ ಮತ್ತು ಕಿರಿಯ ವಿಭಾಗದಲ್ಲಿ 7 ರಾಷ್ಟ್ರೀಯ ಮತ್ತು 7 ವಿಶ್ವ ದಾಖಲೆ ಮಾಡಿದ್ದು ಇದೀಗ ದಿ ಯಂಗ್ ಡಿ.ಲಿಟ್ ಅವಾರ್ಡ್ ಹೋಲ್ಡರ್ ಎಂಬ ಹೊಸ ದಾಖಲೆಯನ್ನು ಬರೆದು ದೇಶದ ಮಹಿಳಾ ವಿಭಾಗದಲ್ಲಿ ಅತಿ ಕಿರಿಯ ಡಿ.ಲಿಟ್ ಹಾನರ್ ಡಾಕ್ಟ್ರೇಟ್ ಹೋಲ್ಡರ್ ಎಂಬ ಕೀರ್ತಿಗೆ ಭಾಜನರಾಗಿದ್ದು ದಿನಾಂಕ್ 29 ಜನೆವರಿ 2019 ರಂದು ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ರೆಸಿಡೆಂಶಿಯಲ್ ಕಾಲೋನಿ ಕಲ್ಯಾಣ ಮಂಟಪ ಚೆನ್ನೈ ನಲ್ಲಿ ನಡೆದ ಪ್ರೈಡ್ ಆಫ್ ಆಚೀವರ್ಸ್ ಎಂಬ ಅದ್ಧೂರಿ ಈವೆಂಟ್ನಲ್ಲಿ ಡಾ.ಅಂಬಿಕಾ ಹಂಚಾಟೆ ಯುವರಿಗೆ ಯುನಿವೇರ್ಸಲ್ ಆಚೀವರ್ಸ್ ಬುಕ್ ಆಫ್ ರೆಕಾರ್ಡ್ ನ ಸಂಸ್ಥಾಪಕ ಅಧ್ಯಕ್ಷ ಡಾ.ಬಾಬು ಬಾಲಕೃಷ್ಣನ್ ಮತ್ತು ಕಲಾಂ ಫ್ಯೂಚರ್ ಬುಕ್ ಆಫ್ ರೆಕಾರ್ಡ್ ನ ಸಂಸ್ಥಾಪಕಿ ಅಧ್ಯಕ್ಷೆ ಶ್ರೀಮತಿ ಉಮಾ ಸೆಲ್ವಂ ಅವ್ರು ವರ್ಲ್ಡ್ ಆಚೀವರ್ ಡಾ.ಅಂಬಿಕಾ ರವರಿಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನ ಫಲಕ ,ಪದಕ ,ವಿಶೇಷ ವಿಸಿಟಿಂಗ್ ಕಾರ್ಡ್ಸ್, ಗುರುತಿನ ಕಾರ್ಡ್ ಹಾಗೂ ದೇಶದ ಅತಿ ಹೆಚ್ಚು ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತರರಾಷ್ಟೀಯ (122) ಪ್ರಶಸ್ತಿ ಪಡೆದ ಹೆಗ್ಗಳಿಕೆಯು ಡಾ.ಅಂಬಿಕ ರವರದು ಎಂದು ಹೇಳಲಾಗಿದೆ.

ಒಟ್ಟಾರೆ 5 ವಿಭಾಗದಲ್ಲಿ ಡಾ.ಅಂಬಿಕಾ ಹಂಚಾಟೆ ಯವರ ಧಾಕಲೆಯು ವಿಶೇಷ ಮನ್ನಣೆಯನ್ನು ಪಡೆದಿದ್ದು ತಮಿಳ್ ಚಿತ್ರದ ಪ್ರಖ್ಯಾತ ಹಾಸ್ಯ ನಟ ತಂಬಿ ರಾಮಯ್ಯ ಅವರು ಡಾ.ಅಂಬಿಕಾ ಹಂಚಾಟೆ ಯವರಿಗೆ ಪ್ರಶಸ್ತಿಯನ್ನು ಪ್ರಧಾನ ಮಾಡಿ ಅಭಿನಂದಿಸಿದರು.

Comments