UK Suddi
The news is by your side.

ಹ್ಯಾಷ್ ಟ್ಯಾಗ್ “ನನ್ನ ಸಿಎಂ ಸತೀಶ ಜಾರಕಿಹೊಳಿ” ಅಭಿಯಾನ…!

ಬೆಂಗಳೂರು: “#ನನ್ನ ಸಿಎಂ ಸತೀಶ ಜಾರಕಿಹೊಳಿ” ಇದು ಸಾಮಾಜಿಕ ಜಾಲತಾಣಗಳ ಮೂಲಕ ದಕ್ಷಿಣ ಕರ್ನಾಟಕದವರಷ್ಟೇ ಅಲ್ಲ ಉ. ಕರ್ನಾಟಕದಿಂದಲೂ ಪ್ರಬಲ ಮುಖ್ಯಮಂತ್ರಿ ಅಭ್ಯರ್ಥಿಗಳು ಇದ್ದಾರೆ ಎಂಬ ಸ್ಪಷ್ಟ ಸಂದೇಶವನ್ನು ಸತೀಶ ಜಾರಕಿಹೊಳಿ ಅಭಿಮಾನಿಗಳು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನೀಡಿದ್ದಾರೆ.

ನನ್ನ ಸಿಎಂ ಸಿದ್ದರಾಮಯ್ಯ ಎಂದು ದಕ್ಷಿಣ ಕರ್ನಾಟಕದ ಅವರ ಅಭಿಮಾನಿಗಳು ಅಭಿಯಾನ ಶುರು ಮಾಡಿದ ಬೆನ್ನಲ್ಲೇ ಸತೀಶ ಜಾರಕಿಹೊಳಿ ಅಭಿಮಾನಿಗಳು ನಾವೇನ್ ಕಮ್ಮಿಯಲ್ಲ ಎಂಬರ್ಥದಲ್ಲಿ ಹೊಸ ಅಭಿಯಾನ ಶುರು ಮಾಡಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.

ವ್ಹಾಟ್ಸ್ ಆಪ್, ಫೇಸ್ ಬುಕ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಹ್ಯಾಷ್ ಟ್ಯಾಗ್ # ” ನನ್ನ ಸಿಎಂ ಸತೀಶ ಜಾರಕಿಹೊಳಿ” ಅಭಿಯಾನಕ್ಕೆ ಹಲವರು ಕೈ ಜೋಡಿಸಿದ್ದು ಲೈಕ್, ಶೇರ್ ಮಾಡುವ ಮೂಲಕ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ.

Comments