UK Suddi
The news is by your side.

ಅಥಣಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವರಮಹಾಲಕ್ಷ್ಮಿ ಪೂಜೆ.

ಬೆಳಗಾವಿ:ಜಿಲ್ಲೆಯ ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘ ಇವರ ಸಂಯುಕ್ತಾಶ್ರಯದಲ್ಲಿ ವರಮಹಾಲಕ್ಷ್ಮಿ ಪೂಜೆ ಮತ್ತು ಉಡಿತುಂಬುವ ಧಾರ್ಮಿಕ ಕಾರ್ಯಕ್ರಮ ಕಾರ್ಮಿಕ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಪರಮಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡಿ,10 ಮನಸುಗಳು ಒಂದಾಗಿ ಆತ್ಮೀಯತೆಯಿಂದ ದುಡಿಯಲು ಆರ್ಥಿಕ ಸ್ವಾವಲಂಬನೆಯೊಂದಿಗೆ ಸರ್ವತೋಮುಖ ಅಭಿವೃದ್ಧಿ ಸಾಧ್ಯ,ದುಡಿದರೆ ಪ್ರತಿಫಲ ನಮಗೆ ಸಿಕ್ಕೆ ಸಿಗುತ್ತದೆ ಈ ಕಾರ್ಯಕ್ರಮ ವಿಜ್ರಂಭನೆಯಿಂದ ಯಶಸ್ವಿಯಾಗಲಿ ಈ ಸಂಸ್ಥೆ ಇನ್ನೂ ಉನ್ನತ ಮಟ್ಟಕ್ಕೆ ಹೋಗಲಿ ಎಂದು ಆಶೀರ್ವಚನ ನೀಡಿದರು.

ಸಂಜಯ್ ನಾಡಗೌಡರು ಅಧ್ಯಕ್ಷತೆ ವಹಿಸಿದ್ದರು,ಅತಿಥಿಗಳಾಗಿ ಶ್ರೀಮತಿ ರಾಜಶ್ರೀ ತಳವಾರ್,ರಾಜು ನಾಯಕ್ ಯೋಜನಾ ಅಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಥಣಿ ತಾಲೂಕು,ಶ್ರೀಮತಿ ಸುರೇಖಾ ಅಮುಲ್ ನಾಯ್ಕ್,ಶ್ರೀಮತಿ ಅವಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Comments