UK Suddi
The news is by your side.

ಆರೆಎಸ್ಸೆಸ್ ನ ಹಿರಿಯ,ಪೂರ್ವ ಪ್ರಚಾರಕ ಶೇಷಾದ್ರಿ ವಿದಿವಶ.

ಮೈಸೂರು:ಆರೆಎಸ್ಸೆಸ್ ನ ಹಿರಿಯ ಕಾರ್ಯಕರ್ತರು,ಪೂರ್ವ ಪ್ರಚಾರಕರಾದ ಶ್ರ ಶೇಷಾದ್ರಿ ಅವರು ವಿಧಿವಶರಾಗಿದ್ದಾರೆ.ಫೆಬ್ರವರಿ 1 ರ ರಾತ್ರಿ 9 ಗಂಟೆಗೆ‌ ಸುಂಕದಕಟ್ಟೆಯ ಆಸ್ಪತ್ರೆಯಲ್ಲಿ ಅವರು ಇಹ ಲೋಕವನ್ನು ತ್ಯಜಿಸಿದ್ದಾರೆ.

ಶೇಷು ಎಂದೇ ಪರಿಚಿತರಾಗಿದ್ದ ಶೀ ಶೇಷು‌ ಅವರು ಮೈಸೂರು ಮತ್ತು ತುಮಕೂರು ವಿಭಾಗ ಪ್ರಚಾರಕರಾಗಿದ್ದರು.ಭಾ ಜ ಪ ದ ಸಂಘಟನಾ ಕಾರ್ಯದರ್ಶಿಯಾಗಿ ಮತ್ತು ‌ವಿಕ್ರಮ ಪತ್ರಿಕೆಯ ಪ್ರಮುಖರಾಗಿ ಕೆಲ ಕಾಲ ಜವಾಬ್ದಾರಿ ನಿರ್ವಹಿಸಿದ್ದರು.ಇಂದಿನ ‘ವಿದ್ಯಾ ಭಾರತಿ’ ಸಂಸ್ಥೆಗೂ ಅವರ ಯೋಗದಾನ ಸ್ಮರಣೀಯ.

ಪಾರ್ಥಿವ ಶರೀರವನ್ನು ‌ನಾಳೆ ಬೆಳಿಗ್ಗೆ ಜನಸೇವಾ‌ ವಿದ್ಯಾ ಕೇಂದ್ರಕ್ಕೆ ‌ಕೊಂಡೊಯ್ಯಲಾಗುವುದು ಎಂದು ತಿಳಿದು ಬಂದಿದೆ.

Comments