UK Suddi
The news is by your side.

ಉದ್ಯೋಗ ಖಾತ್ರಿ ಕೂಲಿ ಪಾವತಿಸದ ಕೇಂದ್ರ ಸರ್ಕಾರದ ನೀತಿ ಖಂಡಿಸಿ ಬೃಹತ್ ಪ್ರತಿಭಟನೆ.

ಕಲಬುರ್ಗಿ:ಉದ್ಯೋಗ ಖಾತ್ರಿ ಕೂಲಿ ಪಾವತಿಸದ ಕೇಂದ್ರ ಸರ್ಕಾದ ನೀತಿ ಖಂಡಿಸಿ ಉದ್ಯೋಗ ಖಾತ್ರಿ ಕಾಯಕಜೀವಿಗಳ ಸಂಘಟನೆ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಪ್ರಜ್ಞಾ ಕಾನೂನು ಸಲಹಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಶುಕ್ರವಾರದಂದು ಹಮ್ಮಿಕೊಳ್ಳಲಾಗಿತ್ತು.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯ್ದೆ ಅಡಿಯಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರೆ ಎರಡು ತಿಂಗಳಿನಿಂದ ಕೂಲಿ ಪಾವತಿಸದ ಜನರನ್ನು ಪುಕ್ಕಟ್ಟೆ ದುಡಿಸಿಕೊಳ್ಳುತ್ತಿರಯವ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಕಾಯ್ದೆಯನ್ನು ನಿರ್ಲಕ್ಷ್ಯ ಮಾಡುತ್ತಿದೆ.ಉದ್ಯೋಗ ಖಾತ್ರಿಯಿಂದ ರಾಷ್ಟ್ರೀಯ ಸಂಪತ್ತು ನಿರ್ಮಾಣ ಮಾಡುವಲ್ಲಿ ಮತ್ತು ಉದ್ಯೋಗ ನೀಡಿ ಬಡ ಜನರಿಗೆ ಒಪ್ಪೋತ್ತಿನ ಗಂಜಿಗೆ ಆಸರೆಯಾದ ಇಂತಹ ಅಮೂಲ್ಯವಾದ ಕಾಯ್ದೆಯನ್ನು ಜನರಿಂದ ದೂರ ಮಾಡಲು ನೋಡುತ್ತಿದೆ ಕೇಂದ್ರ ಸರ್ಕಾರ.ಎರಡು ತಿಂಗಳಿಂದ ಪಗಾರ ಆಗದೆ ನಿರಾರ್ಶಿತರಾದ ಜನ ಮತ್ತೆ ಗುಳೆ ಹೋಗುವ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಇಂತಹ ಒಂದು ಒಂದು ವಿಶಿಷ್ಠ ಕಾಯ್ದೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು ಮತ್ತು ಉದ್ಯೋಗ ಖಾತ್ರಿಗೆ ಹೆಚ್ಚಿನ ಬಜೆಟ್ ನೀಡಬೇಕು, ಕೂಲಿ ಕೆಲಸ ೨೦೦ ದಿನಗಳವರೆಗೆ ಮಾಡಬೇಕು, ಕನಿಷ್ಠ ೫೦೦ ರೂಪಾಯಿ ಕೂಲಿ ಮಾಡಬೇಕು ಎಂಬ ಹಕ್ಕೋತ್ತಾಯಗಳನ್ನು ಈಡಲಾಯಿತು.

Comments