UK Suddi
The news is by your side.

ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕಾರ.

ಮೈಸೂರು:ಕ.ಸಾ.ಪ‌‌.ಸಭಾಂಗಣ ಅರಮನೆ ಉತ್ತರದ್ವಾರ,ಮೈಸೂರಿನಲ್ಲಿ ಶುಕ್ರವಾರದಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು , ಮೈಸೂರು ಮತ್ತು ರಂಗೋಲ್ಲಾಸ ಕಲಾ ಬಳಗದ ಸಂಯುಕ್ತಾಶ್ರಯದಲ್ಲಿ
ಕರ್ನಾಟಕ ಮಾಧ್ಯಮ ಅಕಾಡೆಮಿ – ೨೦೧೮ ನೇ ಸಾಲಿನ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿದ್ದರು.

ಈ ಕಾರ್ಯಕ್ರಮವನ್ನು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಿ.ಕೆ.ಮಹೇಂದ್ರರವರು ಉದ್ಘಾಟನೆ ಮಾಡಿದರು.

ಈ ಸಂಧರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕ್ಯಾಡಮಿಯ ೨೦೧೮ ನೇ ಸಾಲಿನ ಪ್ರಶಸ್ತಿ ಪುರಸ್ಕೃತರಾದ ಕೆ‌.ಜೆ.ಮರಿಯಪ್ಪ ಹಿರಿಯ ಪತ್ರಕರ್ತರು ಪ್ರಜಾವಾಣಿ ಮೈಸೂರು , ಸಾಲೋಮನ್ ಪತ್ರಕರ್ತರು ಆಂದೋಲನ ದಿನಪತ್ರಿಕೆ ಮೈಸೂರು ಇವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ವೈ.ಡಿ‌.ರಾಜಣ್ಣ ,ಮಾಜಿ ಅಧ್ಯಕ್ಷರು ಕ.ಸಾ.ಪ ಮಡ್ಡೀಕೆರೆ ಗೋಪಾಲ್ , ರಂಗೋಲ್ಲಾಸ ರಂಗ ಕಲಾಬಳಗದ ಅಧ್ಯಕ್ಷರಾದ ಎ ಎಸ್ ನಾಗರಾಜ್ ,ಕ‌.ಸಾ.ಪ ಕೋಶಾಧ್ಯಕ್ಷರಾದ ರಾಜಶೇಖರ ಕದಂಬ ,ಕ.ಸಾ.ಪ ಗೌ ಕಾರ್ಯದರ್ಶಿ ಕೆ ಎಸ್ ನಾಗರಾಜ್ , ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಅರವಿಂದ್ ಶರ್ಮ ,ಕನ್ನಡ ಹೋರಾಟಗಾರರಾದ ತಾಯೂರು ವಿಠಲ್ ಮೂರ್ತಿ,ಭಾನುಮೋಹನ್ ಮುಂತಾದವರು ಉಪಸ್ಥಿತರಿದ್ದರು

Comments