UK Suddi
The news is by your side.

ಖ್ಯಾತ ಕ್ಯಾನ್ಸರ್ ತಜ್ಞ ಆರ್ ಬಿ ಪಾಟೀಲ ಇನ್ನಿಲ್ಲ.

ಹುಬ್ಬಳ್ಳಿ:ಹೆಸರಾಂತ ಕ್ಯಾನ್ಸರ್ ತಜ್ಞ,ಪದ್ಮಶ್ರೀ ಪುರಸ್ಕೃತ ಡಾ.ಆರ್.ಬಿ. ಪಾಟೀಲ್ ಅವರು ಇಂದು ಸಂಜೆ 4 ಘಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಡಾ.ಆರ್.ಬಿ.ಪಾಟೀಲ್ ಅವರಿಗೆ 93 ವರ್ಷ ವಯಸ್ಸಾಗಿತ್ತು.ಶನಿವಾರ ಸಂಜೆ ನಾಲ್ಕು ಘಂಟೆಗೆ ಹುಬ್ಬಳ್ಳಿಯ ವಿದ್ಯಾನಗರದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ರವಿವಾರ ಮುಂಜಾನೆ ಆರ್. ಬಿ. ಪಾಟೀಲ್ ಅವರ ಸ್ವಗ್ರಾಮ ವಿಜಯಪುರ ಜಿಲ್ಲೆ ಕೌಲಗಿ ಗ್ರಾಮಕ್ಕೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಗುವುದು. ನಂತರ ಅಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಗುವದು ಎಂದು ಕುಟುಂಬ ಮೂಲಗಳು ತಿಳಿಸಿವೆ.

Comments