UK Suddi
The news is by your side.

ಗ್ರಾಮೀಣ ಭಾಗದ ರಸ್ತೆಗಳ ಸುಧಾರಣೆಗೆ ಪ್ರಥಮ ಆದ್ಯತೆ: ಜಿ.ಪಂ ಸದಸ್ಯ ನಿಂಗಪ್ಪ ಅರಕೇರಿ

ಬೈಲಹೊಂಗಲ: ಗ್ರಾಮೀಣ ಭಾಗದ ರಸ್ತೆಗಳು ಹದಗೆಟ್ಟಿದ್ದು, ಅವುಗಳ ಸುಧಾರಣೆಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಜಿ.ಪಂ ಸದಸ್ಯ ನಿಂಗಪ್ಪ ಅರಕೇರಿ ಹೇಳಿದರು.

ತಾಲೂಕಿನ ಮಲ್ಲಾಪೂರ ಕೆ.ಎನ್ ಗ್ರಾಮದಲ್ಲಿ ಶುಕ್ರವಾರ ಜಿ.ಪಂ ಅನುದಾನದಲ್ಲಿ ಮಲ್ಲಾಪೂರ- ಮೇಕಲಮರಡಿ ಕಚ್ಚಾ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ ಅವರು ಬಹುದಿನಗಳಿಂದ ಸಾರ್ವಜನಿಕರು ಗ್ರಾಮದಿಂದ ಮೇಕಲಮರಡಿಗೆ ಸಂಪರ್ಕಿಸುವ ರಸ್ತೆ ಇಲ್ಲದೆ ತೊಂದರೆಗೊಳಗಾಗಿದ್ದರು ಇದೀಗ ರಸ್ತೆ ನಿರ್ಮಿಸುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ರಾಜು ಬುಗಡಿಕಟ್ಟಿ, ಬಸವರಾಜ ಚಿಕ್ಕಬಸನ್ನವರ, ನಾಗಪ್ಪ ಸೂಳ್ಳದ, ಗೀರಿಶ ಹಡಗಿನಾಳ, ಬಸವರಾಜ ಬುಗಡಿಕಟ್ಟಿ, ಮಂಜುನಾಥ ಹುಲಮನಿ, ಅಡಿವೆಪ್ಪ ಹೊಸಮನಿ, ಪಿಡಿಓ ಜಿ.ಎಂ.ಗಿರೆನ್ನವರ, ಮತ್ತಿತರರು ಉಪಸ್ಥಿತರಿದ್ದರು.

Comments