UK Suddi
The news is by your side.

ದೇಶನೂರ ಗ್ರಾಮದ ಕೆರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಚಾಲನೆ.

ಬೈಲಹೊಂಗಲ: ತಾಲೂಕಿನ ದೇಶನೂರ ಗ್ರಾಮದ ಕೆರೆಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಕಾಮಗಾರಿಗೆ ಜಿ.ಪಂ ಸದಸ್ಯ ನಿಂಗಪ್ಪ ಅರಕೇರಿ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಜಿ.ಪಂ ಸದಸ್ಯ ನಿಂಗಪ್ಪ ಅರಕೇರಿ, ಗ್ರಾ.ಪಂ ಅಧ್ಯಕ್ಷ ದೀಪಕಗೌಡ ಪಾಟೀಲ ಮಾತನಾಡಿ, ಐತಿಹಾಸಿಕ ದೇಶನೂರ ಕೆರೆ ಕಡೆ ಸಂಚರಿಸುವ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆ ನಿರ್ಮಾಣ ಕೈಗೊಳ್ಳಲಾಗುತ್ತಿದೆ. ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಸೂಚಿಸಿದರು.

ಗ್ರಾ.ಪಂ ಉಪಾಧ್ಯಕ್ಷೆ ಪಾತಿಮಾ ಗಡಂಪಲ್ಲಿ, ಅಣ್ಣಪ್ಪ ಕಮತಗಿ, ಶೇಖಪ್ಪ ಕಮತಗಿ, ಡಾ. ಮುಲ್ಲಾ, ಡಾ.ಲಾಡಖಾನ, ದಾನಮ್ಮ ಹರಕುಣಿ, ಆಯೂಬ ಗಣಾಚಾರಿ, ರಾಜು ಮುಚ್ಚಂಡಿ, ಪಿಡಿಓ ಲತೀಪ, ಸೇರಿದಂತೆ ಇನ್ನಿತರರು ಇದ್ದರು.

Comments