UK Suddi
The news is by your side.

ನವ ಭಾರತ ಅಭಿವೃದ್ಧಿಯ ದಿಕ್ಸೂಚಿ ಈ ಬಜೆಟ್: ಸಂಸದ ಸಂಗಣ್ಣ ಕರಡಿ

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ಮಂಡಿಸಿರುವ ಈ ಸಾಲಿನ ಬಜೆಟ್ ನವ ಭಾರತದ ಸಮಗ್ರ ಅಭಿವೃದ್ಧಿಯ ದಿಕ್ಸೊಚಿಯಾಗಿದ್ದು, ಪ್ರತಿಯೊಬ್ಬ ಜನಸಾಮಾನ್ಯರಿಗೆ ತಲುಪುವ ಬಜೆಟ್ ಆಗಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.

ನಿನ್ನೆ ಮಂಡನೆಯಾದ ಕೇಂದ್ರದ ಬಜೆಟ್ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಅವರು ದೇಶದ ಆರ್ಥಿಕ ಸ್ಥಿತಿ ಶಿಸ್ತಿನಿಂದ ಕೂಡಿದೆ. ಇದಕ್ಕೆ ಭ್ರಷ್ಟಾಚಾರ ಮುಕ್ತ ಆಡಳಿತ, ಬ್ಯಾಂಕಗಳಲ್ಲಿ ಸುಧಾರಣೆಯಿಂದಾಗಿ, ಸ್ಥಿರ ಸರಕಾರದಿಂದಾಗಿ ಸಾಧ್ಯವಾಗಿದೆ. ಭಾರತ ವಿಶ್ವದ 6 ನೇ ಆರ್ಥಿಕವಾಗಿ ಮುಂದುವರೆದ ದೇಶವಾಗಲು ಸಾಧ್ಯವಾಗಿದೆ ಎಂದಿದ್ದಾರೆ.

ಈ ಆಯವ್ಯಯವು ದೂರದರ್ಶಿತ್ವದ್ದಾಗಿದ್ದು ಪ್ರತಿ ವರ್ಷ ರೈತರ ಖಾತೆಗಳಿಗೆ ನೇರವಾಗಿ 6 ಸಾವಿರ ರೂ. ಕೃಷಿ ಸಮ್ಮಾನ ನಿಧಿಯಿಂದ ಪಾವತಿ, ಅಂಗನವಾಡಿ ಕಾರ್ಯಕರ್ತೆಯರ ವೇತನದಲ್ಲಿ ಶೇ.50% ಹೆಚ್ಚಳ, ಕಾರ್ಮಿಕ ವರ್ಗಕ್ಕೆ ವಿಶೇಷ ಸವಲತ್ತು ಗ್ರಾಜುಟಿ 10 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಳ, ಮೃತರಾದರೆ 6 ಲಕ್ಷದ ನೆರವು, ನಿವೃತ್ತಿ ವೇತನ ರೂ.3000 ನೀಡುವುದು. ದೇಶದ ಭದ್ರತೆ ಕಾಯುವ ಸೈನಿಕರಿಗೆ ಓಆರ್.ಓ.ಪಿ ಜಾರಿ ಹಾಗೂ ವೇತನದಲ್ಲಿ ಹೆಚ್ಚಳವಾಗಿರುವ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿರುವರು.

ನರೆಗಾ, ಸ್ವಚ್ಛ ಭಾರತ, ಡಿಜಿಟಲ್ ಇಂಡಿಯಾ, ರೇಲ್ವೆ, ಉಜ್ವಲ ಯೋಜನೆಗೆ ಹೆಚ್ಚಿನ ಅನುದಾನ ನೀಡಿ ದೇಶವನ್ನು ಸರ್ವತೋಮುಖವಾಗಿ ಅಭಿವೃದ್ದಿಯತ್ತ ತೆಗೆದುಕೊಂಡೋಯಲು ಕೇಂದ್ರ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

Comments