UK Suddi
The news is by your side.

ಬಿ.ಎಫ್.ಎ ಅಂತಿಮ ವರ್ಷದಲ್ಲಿ ರ‍್ಯಾಂಕ್ ಪಡೆದ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು.

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಚಿತ್ರಕಲಾ ಮಹಾವಿದ್ಯಾಲಯದ 17-18ನೇ ಸಾಲಿನ ಬ್ಯಾಚುಲರ್ ಆಫ್ ಫೈನ್ ಆರ್ಟ (ಪೇಂಟಿಂಗ್) ಅಂತಿಮ ವರ್ಷದ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯಕ್ಕೆ ಧಾರವಾಡ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಸಾಧನಾ ಚೌಗುಲಾ ಪ್ರಥಮ ರ‍್ಯಾಂಕ್, ಪ್ರೆಸನ್ ಪುಲೂರ್ ದ್ವಿತೀಯ ರ‍್ಯಾಂಕ್, ಆಶಾ ಹೆಗಡೆ ತೃತೀಯ ರ‍್ಯಾಂಕ್ ಪಡೆದಿದ್ದಾರೆ.

ಕಾಲೇಜಿಗೆ ಕೀರ್ತಿ ತಂದ ರ‍್ಯಾಂಕ್‌ವಿಜೇತ ವಿದ್ಯಾರ್ಥಿಗಳನ್ನು ಕಾಲೇಜು ಶಿಕ್ಷಣ ಇಲಾಖೆಯ ಜಂಟಿನಿರ್ದೆಶಕಿ ಡಾ.ನೀಲಾಂಬಿಕಾ ಪಟ್ಟಣಶೆಟ್ಟಿ, ಧಾರವಾಡ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಕೆ. ಪತ್ತಾರ ಮತ್ತು ಮಹಾವಿದ್ಯಾಲಯದ ಸಿಬ್ಬಂದಿಗಳು ಅಭಿನಂದಿಸಿ ಶುಭಕೋರಿದ್ದಾರೆ.

-Dharawad VB

Comments